2020ರಿಂದಲೂ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದಾರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಆದರೆ ರೋಹಿತ್ ಶರ್ಮಾಗಿಂತ ಉತ್ತಮವಾಗಿದೆ ವಿರಾಟ್ ಕೊಹ್ಲಿ ಪ್ರದರ್ಶನಬಿಸಿಸಿಐನಿಂದ ವಿರಾಟ್ ಕೊಹ್ಲಿ ಹೇರಿದೆ ಹೆಚ್ಚಿನ ಒತ್ತಡ

ಮುಂಬೈ(ಜು.09): ತಪ್ಪು ಯಾರೇ ಮಾಡಿದ್ರೂ ಶಿಕ್ಷೆ ಎಲ್ಲರಿಗೂ ಒಂದೇ ಆಗಿರ್ಬೇಕು. ಆಗಲೇ ಪಾರದರ್ಶಕತೆ ಉಳಿಸಿಕೊಳ್ಳಲು ಸಾಧ್ಯ. ಆದ್ರೆ ಈ ವಿಚಾರದಲ್ಲಿ ಬಿಸಿಸಿಐ ಮಾತ್ರ ತದ್ವಿರುದ್ಧ. ಕಿಂಗ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ವಿಚಾರದಲ್ಲಿ ಬಿಸಿಸಿಐ ಭಿನ್ನ ಭಿನ್ನ ನಿಲುವು ತಳಿದಿದೆ. ಒಬ್ಬನ ಕಣ್ಣಿಗೆ ಬೆಣ್ಣೆ, ಮತ್ತೊಬ್ಬನ ಕಣ್ಣಿಗೆ ಸುಣ್ಣ ಸವರಲು ಹೊರಟಿದ್ದು, ಇಬ್ಭಾಗ ನೀತಿ ಅನುಸರಿಸ್ತಿದೆ. ಅದು ಹೇಗೆ ಅನ್ನೋದನ್ನ ಬಿಚ್ಚಿಡ್ತೀವಿ ನೋಡಿ.

2020 ರಿಂದ ಮಂಕಾಗಿದ್ದಾರೆ ಕೊಹ್ಲಿ-ರೋಹಿತ್: 

2020 ರಿಂದೀಚೆಗೆ ವರ್ಲ್ಡ್ ಕ್ಲಾಸ್​ ಬ್ಯಾಟರ್​ಗಳಾದ ರೋಹಿತ್​ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ನಿರೀಕ್ಷಿತ ಆಟವಾಡ್ತಿಲ್ಲ. ಇದನ್ನು ಬಿಸಿಸಿಐ (BCCI) ಗಂಭೀರವಾಗಿ ಪರಿಗಣಿಸಿದೆ. ಪರಿಣಾಮ ಕಿಂಗ್​​ ಕೊಹ್ಲಿಯನ್ನ ಐಸಿಸಿ ಟಿ20 ವಿಶ್ವಕಪ್​​​ನಿಂದ (ICC T20 Wprld Cup) ಕೈಬಿಡುವ ಚಿಂತನೆ ನಡೆಸಿದೆ. ಪ್ರಸ್ತುತ ಇಂಗ್ಲೆಂಡ್​​​​ ಹಾಗೂ ಮುಂಬರುವ ವಿಂಡೀಸ್​ ಸರಣಿ ಕೊಹ್ಲಿಗೆ ಡು ಆರ್ ಡೈ. ರನ್​ ಹೊಳೆ ಹರಿಸಿದ್ರೆ ಮಾತ್ರ ಚುಟುಕು ಮಹಾಬ್ಯಾಟಲ್​​ ರೇಸ್​​ನಲ್ಲಿ ಕಿಂಗ್ ಕೊಹ್ಲಿ ಉಳಿದುಕೊಳ್ಳಲಿದ್ದಾರೆ. 2020 ರಿಂದ ಕೊಹ್ಲಿ 18 ಏಕದಿನ ಪಂದ್ಯಗಳನ್ನಾಡಿದ್ದು, 39ರ ಸರಾಸರಿಯಲ್ಲಿ 702 ರನ್​ ಗಳಿಸಿದ್ದಾರೆ. ಇನ್ನು 22 ಟಿ20 ಪಂದ್ಯಗಳಿಂದ 47.3 ಎವರೇಜ್​​ನಲ್ಲಿ 663 ರನ್​ ಕಲೆಹಾಕಿದ್ದಾರೆ. ಆದರೆ ವಿರಾಟ್ ಕೊಗ್ಲಿ ಬ್ಯಾಟಿಂದ ಒಂದೂ ಶತಕವೂ ಮೂಡಿ ಬಂದಿಲ್ಲ.

ಕೊಹ್ಲಿಗಿಂತ ಕಳಪೆ ಆಟವಾಡಿದ್ದಾರೆ ರೋಹಿತ್​​ : 

ಹೌದು, ಕಿಂಗ್ ಕೊಹ್ಲಿಗೆ ಹೋಲಿಸಿದ್ರೆ 2020 ರಿಂದೀಚೆಗೆ ಕ್ಯಾಪ್ಟನ್ ರೋಹಿತ್​​​​ ಶರ್ಮಾ ಕಳಪೆ ಆಟವಾಡಿದ್ದಾರೆ. ಆಡಿದ 9 ಏಕದಿನ ಪಂದ್ಯಗಳಿಂದ ರೋಹಿತ್ ಶರ್ಮಾ ಬರೀ 326 ರನ್​ ಗಳಿಸಿದ್ರೆ, ಟಿ20 ಯಲ್ಲಿ 21 ಪಂದ್ಯವಾಡಿ 680 ರನ್​​ ಬಾರಿಸಿದ್ದಾರೆ. ಎವರೇಜ್​​ನಲ್ಲಿ ಹಿಟ್​ಮ್ಯಾನ್​​ಗಿಂತ ಸೂಪರ್ ಸ್ಟಾರ್ ಕೊಹ್ಲಿನೇ ಮುಂದಿದ್ದಾರೆ.

ಸತತ 13 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ನಾಯಕ ಎನಿಸಿಕೊಂಡ ರೋಹಿತ್ ಶರ್ಮ!

ಇಷ್ಟಾದ್ರು ಬಿಸಿಸಿಐ ರೋಹಿತ್​ ಶರ್ಮಾರನ್ನ ಬಿಟ್ಟು ಬರೀ ವಿರಾಟ್ ಕೊಹ್ಲಿಯನ್ನ ಮಾತ್ರ ಯಾಕೆ ಟಾರ್ಗೆಟ್ ಮಾಡ್ತಿದೆ. ರೋಹಿತ್​​​ ಬ್ಯಾಡ್​ಫಾರ್ಮ್​ ಬಗ್ಗೆ ತುಟಿ ಬಿಚ್ಚದ ಬಿಗ್​​ಬಾಸ್​ಗಳು ವಿರಾಟ್​ರ ಟಿ20 ವಿಶ್ವಕಪ್​​​​ ಸ್ಥಾನದ ಬಗ್ಗೆ ಮಾತಾಡ್ತಿರೋದ್ಯಾಕೆ ? ಕೊಹ್ಲಿಗೆ ಅನುಸರಿಸಿದ ಮಾನದಂಡವೇ ಹಿಟ್​ಮ್ಯಾನ್​ಗೂ ಅಪ್ಲೈ ಆಗಬೇಕಿತ್ತು ಅಲ್ವಾ ? ಆದ್ರೆ ಅದ್ಯಾವುದು ಆಗ್ತಿಲ್ಲ. ಈಗ ನೀವೆ ಹೇಳಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಸವರುವ ಮೂಲಕ ಬಿಸಿಸಿಐ ಇಬ್ಭಾಗ ನೀತಿ ಅನುಸರಿಸ್ತಿದೆಯಾ ಇಲ್ವಾ ಅನ್ನೋದನ್ನು.

ನಾಯಕನಾಗಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ

ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ, ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಹೊಸ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ಪೂರ್ಣಪ್ರಮಾಣದ ಭಾರತ ತಂಡದ ನಾಯಕರಾದ ಬಳಿಕ ಟೀಂ ಇಂಡಿಯಾ ಸತತ 13 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿ ವಿಶ್ವದಾಖಲೆ ಬರೆದಿದೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 50 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ನಾಯಕರಾಗಿ ನೇಮಕಗೊಂಡಿರುವ ರೋಹಿತ್ ಶರ್ಮಾ, ತವರಿನಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಗೆಲುವಿನ ನಗೆ ಬೀರಿತ್ತು. ಇದೀಗ ಇಂಗ್ಲೆಂಡ್ ನೆಲದಲ್ಲೂ ರೋಹಿತ್ ಪಡೆ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.