Asianet Suvarna News Asianet Suvarna News

IPL 2022 ಟೂರ್ನಿಯಲ್ಲಿ ಮಹತ್ವದ ಬದಲಾವಣೆ, ಫೈನಲ್ ಪಂದ್ಯದ ಸಮಯ ಬದಲು!

  • ಐಪಿಎಲ್ ಫೈನಲ್ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡಿದ ಬಿಸಿಸಿಐ
  • ಸಂಜೆ 7.30ಗೆ ಆರಂಭಗೊಳ್ಳುತ್ತಿದ್ದ ಪಂದ್ಯದ ಸಮಯದಲ್ಲಿ ಬದಲಾವಣೆ
  • ಹೊಸ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
     
BCCI change IPL Final match timings set be played at 8 PM IST rather than the earlier scheduled 7 30 PM IST ckm
Author
Bengaluru, First Published May 19, 2022, 8:09 PM IST

ಮುಂಬೈ(ಮೇ.19): ಐಪಿಎಲ್ 2022 ಲೀಗ್ ಪಂದ್ಯಗಳು ಅಂತಿಮ ಹಂತದಲ್ಲಿದೆ. ಇದೀಗ ಎಲ್ಲರ ಚಿತ್ತ ಪ್ಲೇ ಆಫ್ ಪಂದ್ಯಗಳತ್ತ ನೆಟ್ಟಿದೆ. ಇದರ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಫೈನಲ್ ಪಂದ್ಯ ಸಂಜೆ 7.30ರ ಬದಲು 8 ಗಂಟೆಗೆ ಆರಂಭಗೊಳ್ಳಲಿದೆ.

ಮೇ.29 ರಂದು ಐಪಿಎಲ್ 2022 ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಗಜುರಾತ್‌ನ ಅಹಮ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಫೈನಲ್ ಪಂದ್ಯದ ಟಾಸ್ 7 ಗಂಟೆ ಬದಲು 7.30ಕ್ಕೆ ನಡೆಯಲಿದೆ. ಬಳಿಕ 8 ಗಂಟೆಗೆ ಪ್ರಶಸ್ತಿ ಸುತ್ತಿನ ಹೋರಾಟ ಆರಂಭಗೊಳ್ಳಲಿದೆ. ಈ ಸಮಯ ಬದಲಾವಣೆಗೆ ಕಾರಣ ವರ್ಣರಂಜಿತ ಸಮಾರೋಪ ಸಮಾರಂಭ.

IPL 2022 ಲಖನೌ ಎದುರು ರೋಚಕ ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್..!

ಕೊರೋನಾ ಕಾರಣ ಬಿಸಿಸಿಐ ಐಪಿಎಲ್ ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭ ಆಯೋಜನೆ ಕೈಬಿಟ್ಟಿತ್ತು. ಆದರೆ ಈ ಬಾರಿ ಐಪಿಎಲ್ ಕ್ಲೋಸಿಂಗ್ ಸೆರೆಮನಿ ಆಯೋಜಿಸಲಾಗಿದೆ. 6.30ಕ್ಕೆ ಐಪಿಎಲ್ ಕ್ಲೋಸಿಂಗ್ ಸೆರೆಮನಿ ಆಯೋಜನೆಗೊಳ್ಳಲಿದೆ. 50 ನಿಮಿಷಗಳ ಕ್ಲೋಸಿಂಗ್ ಸೆರಮನಿ ಕಾರ್ಯಕ್ರಮ 7.20ಕ್ಕೆ ಅಂತ್ಯಗೊಳ್ಳಲಿದೆ.

ಬಾಲಿವುಟ್ ಸ್ಟಾರ್ ನಟ ರಣವೀರ್ ಸಿಂಗ್, ಸಂಗೀತ ನಿರ್ದೇಶ ಎಆರ್ ರೆಹಮಾನ್ ಸೇರಿದಂತೆ ಹಲವು ಸ್ಟಾರ್ ನಟ ನಟಿಯರು ಐಪಿಎಲ್ ಸಮಾರೋಪ ಸಮಾರಂಭದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಹೆಮಾನ್ ಹಾಗೂ ರಣವೀರ್ ಸಿಂಗ್ ಅವರಿಂದ ವಿಶೇಶ ಕಾರ್ಯಕ್ರಮವನ್ನು ಬಿಸಿಸಿಐ ಆಯೋಜಿಸಿದೆ.

ಐಪಿಎಲ್ ಫೈನಲ್ ಪಂದ್ಯಕ್ಕೆ ಬಿಸಿಸಿಐ ಟೀಂ ಇಂಡಿಯಾದ ಮಾಜಿ ನಾಯಕರನ್ನು ಆಹ್ವಾನಿಸಿದೆ. ಟೀಂ ಇಂಡಿಯಾ ಎಲ್ಲಾ ಮಾಜಿ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಮಹಿಳಾ ಟಿ20 ಚಾಲೆಂಜ್‌ಗೆ 3 ಬಲಿಷ್ಠ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ..!

ಐಪಿಎಲ್ ಫೈನಲ್
ಮೇ. 29, ನರೇಂದ್ರ ಮೋದಿ ಕ್ರೀಡಾಂಗಣ, ಗುಜರಾತ್

ಐಪಿಎಲ್ ಪ್ಲೇ ಆಫ್ ಪಂದ್ಯ
ಮೇ 24: ಕ್ವಾಲಿಫೈಯರ್ 1- ಈಡನ್ ಗಾರ್ಡನ್ಸ್, ಕೋಲ್ಕತಾ (7.30 PM)
ಮೇ 26: ಎಲಿಮಿನೇಟರ್-ಈಡನ್ ಗಾರ್ಡನ್ಸ್, ಕೋಲ್ಕತಾ(7.30 PM)
ಮೇ 27: ಕ್ವಾಲಿಫೈಯರ್ 2- ನರೇಂದ್ರ ಮೋದಿ ಕ್ರೀಡಾಂಗಣ, ಅಹಮ್ಮದಾಬಾದ್ (7.30 PM)
ಮೇ 29: ಫೈನಲ್-ನರೇಂದ್ರ ಮೋದಿ ಕ್ರೀಡಾಂಗಣ, ಅಹಮ್ಮದಾಬಾದ್ (8.00 PM)

ಮಹಿಳಾ ಟಿ20 ಚಾಲೆಂಜರ್‌: ರಾಜ್ಯದ ಮೂವರಿಗೆ ಸ್ಥಾನ

ಭಾರತದ ತಾರಾ ಆಟಗಾರ್ತಿಯರಾದ ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್‌ ಕೌರ್‌ ಹಾಗೂ ದೀಪ್ತಿ ಶರ್ಮಾ ಮೇ 23ರಿಂದ ಪುಣೆಯಲ್ಲಿ ನಡೆಯಲಿರುವ ಮಹಿಳಾ ಟಿ20 ಚಾಲೆಂಜ್‌(ಮಹಿಳಾ ಮಿನಿ ಐಪಿಎಲ್‌) ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸಲಿದ್ದಾರೆ. ಮೂರೂ ತಂಡಗಳಿಗೆ ತಲಾ 16 ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಮೂವರು ಸ್ಥಾನ ಪಡೆದಿದ್ದಾರೆ. ಹರ್ಮನ್‌ಪ್ರೀತ್‌ ನೇತೃತ್ವದ ಸೂಪರ್‌ನೋವಾಸ್‌ ತಂಡದಲ್ಲಿ ಚಂದು ವಿ., ಮೋನಿಕಾ ಪಟೇಲ್‌, ಸ್ಮೃತಿ ನೇತೃತ್ವದ ಟ್ರಯಲ್‌ಬ್ಲೇಜ​ರ್‍ಸ್ ತಂಡದಲ್ಲಿ ರಾಜೇಶ್ವರಿ ಗಾಯಕ್ವಾಡ್‌ ಇದ್ದಾರೆ. ದೀಪ್ತಿ ನೇತೃತ್ವದ ವೆಲಾಸಿಟಿ ತಂಡದಲ್ಲಿ ಕರ್ನಾಟಕದ ಆಟಗಾರ್ತಿಯರಿಲ್ಲ. ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್‌, ಜೂಲನ್‌ ಗೋಸ್ವಾಮಿಯನ್ನು ಆಯ್ಕೆಗೆ ಪರಿಗಣಿಸಿಲ್ಲ. ಮೇ 23ರಿಂದ 28ರ ವರೆಗೂ ಒಟ್ಟು 4 ಪಂದ್ಯಗಳು ನಡೆಯಲಿವೆ.

Follow Us:
Download App:
  • android
  • ios