Asianet Suvarna News Asianet Suvarna News

IPL 2022 ಲಖನೌ ಎದುರು ರೋಚಕ ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್..!

* ಲಖನೌ ಸೂಪರ್ ಜೈಂಟ್ಸ್ ಎದುರು ರೋಚಕ ಸೋಲು ಕಂಡ ಕೆಕೆಆರ್

* ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ ರಿಂಕು ಸಿಂಗ್

* ಲಖನೌ ಎದುರು 2 ರನ್‌ಗಳ ರೋಚಕ ಸೋಲು ಕಂಡ ಕೋಲ್ಕತಾ ನೈಟ್ ರೈಡರ್ಸ್

Kolkata Knight Riders Rinku Singh shed tears after losing nail-biting contest against LSG kvn
Author
Bengaluru, First Published May 19, 2022, 3:34 PM IST

ಬೆಂಗಳೂರು(ಮೇ.19): ಕ್ರಿಕೆಟ್‌ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಎದುರು ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡವು 2 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಂದ್ಯದ ಕೊನೆಯಲ್ಲಿ ರಿಂಕು ಸಿಂಗ್ (Rinku Singh) ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕೆಕೆಆರ್‌ಗೆ ರೋಚಕ ಗೆಲುವು ತಂದುಕೊಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದರು. ಆದರೆ ಕೊನೆಯ ಎರಡು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಳ್ಳುವ ಮೂಲಕ ವೀರಾವೇಶದ ಸೋಲು ಕಂಡಿದೆ. ಪಂದ್ಯ ಸೋಲಿನ ಬೆನ್ನಲ್ಲೇ ರಿಂಕು ಸಿಂಗ್ ಕಣ್ಣೀರಿಟ್ಟ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಬುಧವಾರ(ಮೇ.19) ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದವು. ಕೊನೆಯಲ್ಲಿ 2 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡವು ಎರಡನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟರೇ, ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸುವ ಮೂಲಕ ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿತು.

ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 211 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಒಂದು ಹಂತದಲ್ಲಿ 150 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ವೇಳೆ ಕ್ರೀಸ್‌ಗಿಳಿದ ರಿಂಕು ಸಿಂಗ್ ಕೇವಲ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಮೋಘ 40 ರನ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು. ಕೆಕೆಆರ್ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 3 ರನ್‌ಗಳ ಅಗತ್ಯವಿತ್ತು. ಈ ವೇಳೆ ರಿಂಕು ಸಿಂಗ್ ಹಾಗೂ ಉಮೇಶ್ ಯಾದವ್ ವಿಕೆಟ್ ಕಬಳಿಸಿದ ಮಾರ್ಕಸ್ ಸ್ಟೋನಿಸ್, ಲಖನೌ ತಂಡಕ್ಕೆ ರೋಚಕ ಗೆಲುವು ತಂದಿತ್ತರು. ಪಂದ್ಯ ಸೋಲುತ್ತಿದ್ದಂತೆಯೇ ಕೆಕೆಆರ ತಂಡದ ಬ್ಯಾಟರ್ ರಿಂಕು ಕಣ್ಣೀರಿಟ್ಟರು. 

IPL 2022 ಲಖನೌಗೆ 2 ರನ್ ರೋಚಕ ಗೆಲುವು, ಟೂರ್ನಿಯಿಂದ ಹೊರಬಿದ್ದ ಕೆಕೆಆರ್!

ಕೊನೆ ಓವರ್‌ ಡ್ರಾಮಾ: ಕೊನೆ ಓವರಲ್ಲಿ ಗೆಲ್ಲಲು 21 ರನ್‌ ಬೇಕಿತ್ತು. ಮಾರ್ಕಸ್‌ ಸ್ಟೋಯ್ನಿಸ್‌ ಎಸೆದ ಓವರ್‌ನ ಮೊದಲ 4 ಎಸೆತಗಳಲ್ಲಿ ರಿಂಕು ಸಿಂಗ್‌ 18 ರನ್‌ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲು ತಲುಪಿಸಿದರು. 5ನೇ ಎಸೆತದಲ್ಲಿ ರಿಂಕು ಹೊಡೆತ ಚೆಂಡನ್ನು ಎವಿನ್‌ ಲೆವಿಸ್‌ ಅತ್ಯಮೋಫವಾಗಿ ಕ್ಯಾಚ್‌ ಹಿಡಿದರು. ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದೆನಿಸಿಕೊಂಡಿತು. ಕೊನೆ ಎಸೆತದಲ್ಲಿ 3 ರನ್‌ ಬೇಕಿದ್ದಾಗ, ಉಮೇಶ್‌ ಯಾದವ್‌ರನ್ನು ಬೌಲ್ಡ್‌ ಮಾಡಿದ ಸ್ಟೋಯ್ನಿಸ್‌, ಲಖನೌಗೆ ರೋಚಕ ಗೆಲುವು ತಂದುಕೊಟ್ಟರು. 15 ಎಸೆತದಲ್ಲಿ 40 ರನ್‌ ಸಿಡಿಸಿ ರಿಂಕು ತೋರಿದ ಹೋರಾಟ ವ್ಯರ್ಥವಾಯಿತು.
 

Follow Us:
Download App:
  • android
  • ios