Asianet Suvarna News Asianet Suvarna News

ದಾದಾ ನೇತೃತ್ವದಲ್ಲಿಂದು ಬಿಸಿ​ಸಿಐ ಚೊಚ್ಚಲ ವಾರ್ಷಿ​ಕ ಸಭೆ

ಸೌರವ್ ಗಂಗೂಲಿ ನೇತೃತ್ವದಲ್ಲಿ ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೂಲಿಂಗ್ ಆಫ್ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

BCCI Annual Meeting Sourav Ganguly led Team discuss major matter
Author
Mumbai, First Published Dec 1, 2019, 12:21 PM IST

ಮುಂಬೈ[ಡಿ.01]: ಬಿಸಿ​ಸಿಐ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ ನೇತೃತ್ವದಲ್ಲಿ ಭಾನುವಾರ 88ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿ​ಎಂ)ಯನ್ನು ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕೂಲಿಂಗ್‌ ಆಫ್‌ ನಿಯಮ ಬದ​ಲಾ​ವಣೆ, ಕ್ರಿಕೆಟ್‌ ಸಲಹಾ ಸಮಿತಿ ಹಾಗೂ ನೂತನ ನೈತಿಕ ಅಧಿ​ಕಾರಿ ನೇಮಕಾತಿಗಳ ಸಹಿತ ಹಲವು ಕುತೂ​ಹ​ಲಕರ ವಿಚಾ​ರ​ಗಳ ಬಗ್ಗೆ ಚರ್ಚೆ ನಡೆ​ಯಲಿದೆ. 

ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ

ಗಂಗೂಲಿ ಅಧ್ಯಕ್ಷತೆಯಲ್ಲಿ ಇದು ಚೊಚ್ಚಲ ಸಭೆ​ಯಾ​ಗಿದೆ. ಗಂಗೂಲಿ ಅವಧಿ ಕೇವಲ 9 ತಿಂಗ​ಳಾಗಿದ್ದು, ಅವಧಿ ವಿಸ್ತ​ರಿ​ಸಲು ಬಿಸಿ​ಸಿಐ ಯತ್ನಿ​ಸ​ಲಿದೆ. ಬಿಸಿ​ಸಿಐ ಅಥವಾ ರಾಜ್ಯ ಕ್ರಿಕೆಟ್‌ನಲ್ಲಿ 3 ವರ್ಷ ಸೇವೆ ಸಲ್ಲಿ​ಸಿ​ದ​ವರು 3 ವರ್ಷ ಕಡ್ಡಾಯ ಕೂಲಿಂಗ್‌ ಆಫ್‌ ವ್ಯಾಪ್ತಿಗೆ ಬರ​ಬೇ​ಕು. ಕೂಲಿಂಗ್‌ ಆಫ್‌ ಸಮ​ಯ​ದಲ್ಲಿ ಕ್ರಿಕೆಟ್‌ ಚಟು​ವ​ಟಿ​ಕೆ​ಗ​ಳಿಂದ ದೂರ ಇರ​ಬೇ​ಕು. ಗಂಗೂಲಿ ಅನು​ಭ​ವ​ವನ್ನು ಕ್ರಿಕೆಟ್‌ ಅಭಿ​ವೃ​ದ್ಧಿ​ಗೆ ಬಳ​ಸಿ​ಕೊ​ಳ್ಳುವ ದೃಷ್ಟಿ​ ಕೋ​ನ​ದಿಂದ, ಬಿಸಿ​ಸಿಐ ಅಥವಾ ರಾಜ್ಯ ಕ್ರಿಕೆಟ್‌ ಸಂಸ್ಥೆ​ಯಲ್ಲಿ ಕನಿಷ್ಠ 6 ವರ್ಷ ಸೇವೆ ಸಲ್ಲಿ​ಸಿ​ದರೆ ಮಾತ್ರ ಕೂಲಿಂಗ್‌ ಆಫ್‌ ವ್ಯಾಪ್ತಿಗೆ ಬರ​ಬೇ​ಕೆಂದು ನಿಯಮ ಬದ​ಲಿ​ಸಲಾಗು​ವು​ದು. 

ದಿಢೀರ್ ಇನಿಂಗ್ಸ್ ಡಿಕ್ಲೇರ್: ಟಿಮ್ ಪೈನೆ ಟ್ರೋಲ್ ಮಾಡಿದ ಫ್ಯಾನ್ಸ್..!

ಸಂವಿ​ಧಾ​ನ​ದಲ್ಲಿ ಈ ತಿದ್ದು​ಪ​ಡಿಗೆ ಸುಪ್ರೀಂ ಕೋರ್ಟ್‌ ಅಂಗೀ​ಕಾರ ನೀಡಿ​ದರೆ, 3 ವರ್ಷ ಬಿಸಿ​ಸಿ​ಐ​ನಲ್ಲಿ ದಾದಾ​ಗಿರಿ ನಡೆ​ಯ​ಲಿ​ದೆ. ಅಲ್ಲದೇ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ)ಗೆ ಮತ್ತೆ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್  ಅವರನ್ನು ಸೇರಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. 
 

Follow Us:
Download App:
  • android
  • ios