ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ, ಕಮ್‌ಬ್ಯಾಕ್ ಮಾಡಿದ ಜಸ್ಪ್ರೀತ್ ಬುಮ್ರಾ ನಾಯಕ ಪಟ್ಟ!
ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ವಿಶೇಷ ಅಂದರೆ 11 ತಿಂಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ ವೇಗಿ ಜಸ್ಪ್ರೀತ್ ಬುಮ್ರಾಗೆ ನಾಯಕತ್ವ ನೀಡಲಾಗಿದೆ. ವಿಶೇಷ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣಗೆ ಸ್ಥಾನ ನೀಡಲಾಗಿದೆ.
ಮುಂಬೈ(ಜು.31) ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಮೂರು ಟಿ20 ಪಂದ್ಯದ ಸರಣಿ ಆಗಸ್ಟ್ 18 ರಿಂದ ಆರಂಭಗೊಳ್ಳುತ್ತಿದೆ. ಈ ಪ್ರವಾಸಕ್ಕೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಇಂಜುರಿ ಕಾರಣದಿಂದ ತಂದದಿಂದ ಹೊರಬಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 11 ತಿಂಗಳ ಬಳಿಕ ತಂಡ ಸೇರಿಕೊಂಡಿದ್ದಾರೆ. ಕಮ್‌ಬ್ಯಾಕ್ ಸರಣಿಯಲ್ಲೇ ಬುಮ್ರಾಗೆ ಟೀಂ ಇಂಡಿಯಾ ನಾಯಕತ್ವ ನೀಡಲಾಗಿದೆ. ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಲಾಗಿದೆ. ಇನ್ನು ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ನಾಯಕ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್‌ಗೂ ವಿಶ್ರಾಂತಿ ನೀಡಲಾಗಿದೆ. ಏಷ್ಯಾಕಪ್ ಟೂರ್ನಿ ಕಾರಣದಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. 2023ರ ಏಷ್ಯನ್ ಗೇಮ್ಸ್‌ಗೆ ತೆರಳಲಿರುವ ಬಹುತೇಕ ತಂಡವೇ ಐರ್ಲೆಂಡ್ ಪ್ರವಾಸ ಮಾಡುತ್ತಿದೆ.ರುತುರಾಜ್ ಗಾಯಕ್ವಾಡ್‌ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.
ಪತ್ನಿ ಆಥಿಯಾ ಶೆಟ್ಟಿ ರ‍್ಯಾಂಪ್ ವಾಕ್ ನೋಡಿದ ಕೆ ಎಲ್ ರಾಹುಲ್ ರಿಯಾಕ್ಷನ್ ಈಗ ವೈರಲ್..!
ಐರ್ಲೆಂಡ್ ಪ್ರವಾಸಕ್ಕೆ ಭಾರತ ತಂಡ
ಜಸ್ಪ್ರೀತ್ ಬುಮ್ರಾ(ನಾಯಕ), ರುತುರಾತ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್, ರವಿ ಬಿಶ್ನೋಯ್, ಪ್ರಸಿದ್ಧ್ ಕೃಷ್ಣ, ಅರ್ಶದೀ್ಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್,
ಏಷ್ಯಾಕಪ್ ಟೂರ್ನಿಗೂ ಮುನ್ನ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವುದು ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಇಂಜುರಿಯಾಗಿ ತಂಡದಿಂದ ಹೊರಗುಳಿದಿರುವ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಇನ್ನು ಚೇತರಿಸಿಕೊಂಡಿಲ್ಲ. ಇದು ಭಾರತದ ಬ್ಯಾಟಿಂಗ್ ವಿಭಾಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್ ಹಾಗೂ ಜಿತೇಶ್ ಶರ್ಮಾ ಅನ್‌ಕ್ಯಾಪ್ ಪ್ಲೇಯರ್ಸ್. ಐರ್ಲೆಂಡ್ ಸರಣಿಯಲ್ಲಿ ಈ ಆಟಗಾರರು ಟಿ20 ಮಾದರಿಗೆ ಪಾದರ್ಪಣೆ ಮಾಡುವ ಸಾಧ್ಯತೆ ಇದೆ.
ವಿಶ್ವಕಪ್ ಆಡಿಷನ್‌ನಲ್ಲಿ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಫೇಲ್..!
ಆಗಸ್ಟ್ 18 ರಿಂದ ಐರ್ಲೆಂಡ್ ವಿರುದ್ದದ ಟಿ20 ಸರಣಿ ಆರಂಭಗೊಳ್ಳಲಿದೆ. ಮೂರು ಪಂದ್ಯಗಳ ಸರಣಿಯನ್ನು ಡಬ್ಲಿನ್‌ನಲ್ಲಿ ಆಯೋಜಿಸಲಾಗಿದೆ. ಆಗಸ್ಟ್ 20 ರಂದು 2ನೇ ಟಿ20 ಹಾಗೂ ಆಗಸ್ಟ್ 23 ರಂದು ಮೂರನೇ ಟಿ20 ಪಂದ್ಯ ನಡೆಯಲಿದೆ. ಇದೀಗ ಸತತ 2ನೇ ವರ್ಷ ಭಾರತ ತಂಡ ಐರ್ಲೆಂಡ್ ಪ್ರವಾಸ ಮಾಡುತ್ತಿದೆ.
ಐರ್ಲೆಂಡ್ ವಿರುದ್ಧದ ಸರಣಿ ಮುಗಿದ ಬೆನ್ನಲ್ಲೇ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಆಗಸ್ಟ್ 30 ರಂದು ಏಷ್ಯಾಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಪಂದ್ಯ ನಡೆಯಲಿದೆ.