ಇಂಡಿಯಾ ಕಲ್ಚರ್ ವೀಕ್ 2023 ಫ್ಯಾಷನ್‌ ಶೋನಲ್ಲಿ ಆಥಿಯಾ ಶೆಟ್ಟಿ ಭಾಗಿಆಥಿಯಾ ಶೆಟ್ಟಿ, ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಪತ್ನಿರ‍್ಯಾಂಪ್ ವಾಕ್‌ ಮಾಡಿ ಮಿಂಚಿದ ಆಥಿಯಾ ಶೆಟ್ಟಿ

ಮುಂಬೈ(ಜು.31): ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್, ಗಾಯದ ಸಮಸ್ಯೆಯಿಂದಾಗಿ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಧ್ಯದಿಂದಲೇ ಕ್ರಿಕೆಟ್‌ನಿಂದ ಸೈಡ್‌ಲೈನ್ ಆಗಿದ್ದಾರೆ. ಕೆ ಎಲ್ ರಾಹುಲ್ ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಗಾಯದ ಸಮಸ್ಯೆ ಹೊರತಾಗಿಯೂ ತಮ್ಮ ಬಾಲಿವುಡ್‌ ತಾರಾ ಪತ್ನಿ ಆಥಿಯಾ ಶೆಟ್ಟಿ, ರ‍್ಯಾಂಪ್ ವಾಕ್‌ ಕುರಿತಂತೆ ಅದ್ಭುತ ಕಾಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಆಥಿಯಾ ಶೆಟ್ಟಿ, ಭಾನುವಾರ, ಡಿಸೈನರ್ ಅನಾಮಿಕಾ ಖನ್ನಾ ಅವರ ಸಿದ್ದಪಡಿಸಿದ್ದ ಡ್ರೆಸ್ ತೊಟ್ಟು ಇಂಡಿಯಾ ಕಲ್ಚರ್ ವೀಕ್ 2023 ಫ್ಯಾಷನ್‌ ಶೋನಲ್ಲಿ ಪಾಲ್ಗೊಂಡಿದ್ದರು. 'ಹೀರೋ' ಸಿನಿಮಾ ನಟಿ ಆಥಿಯಾ ಶೆಟ್ಟಿ ಅವರ ಫ್ಯಾಷನ್ ಷೋನ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆಥಿಯಾ ಶೆಟ್ಟಿ, ಪ್ಲೋರ್ ಲೆಂಗ್ತ್‌ ಸಿಲ್ಲೋಟೆ, 3ಡಿ ಅಪ್ಲಿಕ್‌ ವರ್ಕ್‌ನ ಡ್ರೆಸ್‌ನ ಡ್ರೆಸ್ ತೊಟ್ಟಿದ್ದರು. ಇದರ ಜತೆಗೆ ಸುಂದರವಾಗಿ ಮೇಕ್‌ ಅಪ್‌ ಮಾಡಿಕೊಂಡು ರ‍್ಯಾಂಪ್ ವಾಕ್‌ ಮಾಡಿರುವ ವಿಡಿಯೋ ಸಾಕಷ್ಟು ಗಮನ ಸೆಳೆದಿತ್ತು.

ಅಳಿಯ ಕೆ ಎಲ್ ರಾಹುಲ್‌ಗೆ ವಾರ್ನಿಂಗ್ ಕೊಟ್ಟ ಮಾವ ಸುನಿಲ್ ಶೆಟ್ಟಿ..!

ಇನ್ನು ಇಂಡಿಯಾ ಕಲ್ಚರ್‌ ವೀಕ್‌ 2023 ಕಾರ್ಯಕ್ರಮದಲ್ಲಿ ಗೈರಾಗಿದ್ದ ಕೆ ಎಲ್ ರಾಹುಲ್‌, ಆಥಿಯಾ ಅವರ ರ‍್ಯಾಂಪ್ ವಾಕ್‌ ಫೋಟದ ಜತೆಗೆ " ನನ್ನ ಬೆರಗುಗೊಳಿಸುವ ಪತ್ನಿ" ಎಂದು ಬರೆದ ಹಾರ್ಟ್ ಎಮೋಜಿ ಜತೆಗೆ ಪೋಸ್ಟ್ ಮಾಡಿದ್ದಾರೆ.

Scroll to load tweet…

ಕೆ ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಕಳೆದ ಜನವರಿ 23ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ, ಈ ವರ್ಷಾರಂಭದಲ್ಲಿ ಸುನಿಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ ಹೌಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಮದುವೆಯ ವೇಳೆ ಎರಡು ಕುಟುಂಬಗಳ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ಫುಟ್ಬಾಲ್ ಪಂದ್ಯದಲ್ಲಿ ಸಿಕ್ಸ್‌-ಪ್ಯಾಕ್ ತೋರಿಸಿದ ಇಬ್ರಾಹಿಂ ಅಲಿ ಖಾನ್‌..! 90ರ ದಶಕದ ಸೈಫ್ ಎಂದ ಫ್ಯಾನ್ಸ್‌

2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆಯ ವೇಳೆ ತೊಡೆ ಸಂದಿನ ನೋವಿಗೆ ತುತ್ತಾಗಿದ್ದು. ಇದಾದ ಬಳಿಕ ಗಾಯದ ತೀವ್ರತೆ ಹೆಚ್ಚಿದ್ದರಿಂದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಇದಾದ ಬಳಿಕ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಿಂದ ಕೆ ಎಲ್ ರಾಹುಲ್ ಹೊರಗುಳಿಯಬೇಕಾಗಿ ಬಂತು. 

ಕೆ ಎಲ್ ರಾಹುಲ್‌ ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಅವಿಭಾಗ್ಯ ಅಂಗವಾಗಿ ಗುರುತಿಸಿಕೊಂಡಿದ್ದು, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದ ವಿವಿಧ 10 ನಗರಗಳಲ್ಲಿ ಜರುಗಲಿದೆ. ದಶಕದ ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿಯ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದೆ.