ಜೂನ್ 1ರಿಂದ 29ವರೆಗೆ ನಡೆಯುವ ಟಿ20 ವಿಶ್ವಕಪ್‌ಗೆ ವೇದಿಕೆ ಸಿದ್ದವಾಗಿದೆ. ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ಈ ಮೆಗಾ ಟೂರ್ನಿ ನಡೆಯಲಿದೆ. ವೇಳಾಪಟ್ಟಿಯೂ ರಿಲೀಸ್ ಆಗಿದೆ. ಫಾರ್ ದ ಫಸ್ಟ್ ಟೈಮ್ ಕ್ರಿಕೆಟ್ ವರ್ಲ್ಡ್‌ಕಪ್‌ಗೆ USA ಆತಿಥ್ಯ ವಹಿಸುತ್ತಿದೆ.

ಬೆಂಗಳೂರು(ಜ.07): ವಿಶ್ವಕಪ್ ವೇಳಾಪಟ್ಟಿ ರಿಲೀಸ್ ಆಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೀ ವರ್ಲ್ಡ್‌ಕಪ್‌ಗೆ ಆತಿಥ್ಯ ವಹಿಸಿರುವ ಅಮೇರಿಕಾದಲ್ಲಿ ಒಬ್ಬ ಆಟಗಾರ ಮಿಂಚುತ್ತಿದ್ದಾನೆ. ಆತ ಭಾರತೀಯ ಆಟಗಾರ. ಅಮೇರಿಕಾದಲ್ಲಿ ವಿಶ್ವಕಪ್ ನಡೆಯುತ್ತಿದ್ದರೂ ಅಲ್ಲಿ ಕಟೌಟ್ ಹಾಕಿರೋದು ಮಾತ್ರ ಭಾರತೀಯ ಆಟಗಾರನದ್ದು. ಯಾರಾತ ಅನ್ನೋದನ್ನ ನೀವೇ ನೋಡಿ. 

ಆಗ್ಲೇ ಅಮೇರಿಕಾದಲ್ಲಿ ರಾರಾಜಿಸುತ್ತಿವೆ ಕೊಹ್ಲಿ ಕಟೌಟ್‌ಗಳು..!

ಜೂನ್ 1ರಿಂದ 29ವರೆಗೆ ನಡೆಯುವ ಟಿ20 ವಿಶ್ವಕಪ್‌ಗೆ ವೇದಿಕೆ ಸಿದ್ದವಾಗಿದೆ. ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ಈ ಮೆಗಾ ಟೂರ್ನಿ ನಡೆಯಲಿದೆ. ವೇಳಾಪಟ್ಟಿಯೂ ರಿಲೀಸ್ ಆಗಿದೆ. ಫಾರ್ ದ ಫಸ್ಟ್ ಟೈಮ್ ಕ್ರಿಕೆಟ್ ವರ್ಲ್ಡ್‌ಕಪ್‌ಗೆ USA ಆತಿಥ್ಯ ವಹಿಸುತ್ತಿದೆ. ಅಮೇರಿಕಾದ ನ್ಯೂಯಾರ್ಕ್ & ಫ್ಲೋರಿಡಾದಲ್ಲಿ ಭಾರತ ತನ್ನ ಲೀಗ್ ಪಂದ್ಯಗಳನ್ನ ಆಡಲಿದೆ. ಸೂಪರ್-8 ಮತ್ತು ನಾಕೌಟ್ ಪಂದ್ಯಗಳು ವಿಂಡೀಸ್ನಲ್ಲಿ ನಡೆಯಲಿವೆ. ನ್ಯೂಯಾರ್ಕ್‌ನಲ್ಲಿ ಜೂನ್ 9ರಂದು ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗ್ತಿವೆ.

Scroll to load tweet…

ಹುಕ್ಕಾ ಸ್ಮೋಕ್ ಮಾಡಿದ ಕೂಲ್ ಕ್ಯಾಪ್ಟನ್‌ ಎಂ ಎಸ್ ಧೋನಿ..! ವಿಡಿಯೋ ವೈರಲ್

ಟಿ20 ವಿಶ್ವಕಪ್‌ಗೆ ಇನ್ನೂ ಯಾವುದೇ ತಂಡವನ್ನು ಅನೌನ್ಸ್ ಮಾಡಿಲ್ಲ. ಐಪಿಎಲ್ ಪರ್ಫಾಮೆನ್ಸ್ ನೋಡಿಕೊಂಡು ಟೀಂ ಇಂಡಿಯಾವನ್ನ ಆನೌನ್ಸ್ ಮಾಡಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಆಗ್ಲೇ ಅಮೇರಿಕಾದಲ್ಲಿ ವಿರಾಟ್ ಕೊಹ್ಲಿಯ ಕಟೌಟ್‌ಗಳು ರಾರಾಜಿಸುತ್ತಿವೆ. ಹೌದು, 5 ತಿಂಗಳ ಮುಂಚೆಯೇ ಟಿ20 ವಿಶ್ವಕಪ್ ಪ್ರಚಾರ ಆರಂಭಿಸಿರುವ ಐಸಿಸಿ, ನ್ಯೂಯಾರ್ಕ್ ನಗರದ ಬೀದಿ ಬೀದಿಗಳಲ್ಲಿ ಕಿಂಗ್ ಕೊಹ್ಲಿಯ ಕಟೌಟ್ಗಳನ್ನ ಹಾಕಿದೆ. ಆ ಕಟೌಟ್‌ಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ನಂಬರ್ 1 ಪ್ಲೇಯರ್. ವಿಶ್ವದಾದ್ಯಂತ ಅವರಿಗೆ ಫ್ಯಾನ್ಸ್ ಇದ್ದಾರೆ. ಅದರಲ್ಲೂ ಅಮೇರಿಕಾದಲ್ಲಿ ಹೆಚ್ಚಾಗಿ ನೆಲೆಸಿರೋದು ಭಾರತೀಯರು. ಕೇಳಬೇಕಾ..? ಅಮೇರಿಕಾಕ್ಕೆ ಅಮೇರಿಕಾವೇ ಟಿ20 ವರ್ಲ್ಡ್‌ಕಪ್ ವೀಕ್ಷಿಸಲಿದೆ. ಅದಕ್ಕಾಗಿಯೇ ಐಸಿಸಿ, ಅಮೇರಿಕಾದ್ಯಂತ ಕಿಂಗ್ ಕೊಹ್ಲಿ ಕಟೌಟ್ ಹಾಕಿ ಪ್ರಚಾರ ಆರಂಭಿಸಿದೆ. ಜೂನ್ 9ರಂದು ಭಾರತ-ಪಾಕಿಸ್ತಾನ ಪಂದ್ಯ ಅಂತಲೂ ಪೋಸ್ಟರ್ ಹಾಕಲಾಗಿದೆ.

ICC Test Rankings: ಕೇಪ್‌ಟೌನ್ ಟೆಸ್ಟ್ ಗೆದ್ದರೂ 2ನೇ ಸ್ಥಾನಕ್ಕೆ ಕುಸಿದ ಭಾರತ

ಐಸಿಸಿ ಪೋಸ್ಟರ್‌ನಲ್ಲಿ ರೋಹಿತ್, ಸ್ಟಾರ್ ಸ್ಪೋರ್ಟ್ಸ್ ಪೋಸ್ಟರ್ನಲ್ಲಿ ಪಾಂಡ್ಯ..!

ಅಮೇರಿಕಾದಲ್ಲಿ ಕಿಂಗ್ ಕೊಹ್ಲಿ ಕಟೌಟ್ಗಳು ರಾರಾಜಿಸುತ್ತಿದ್ದರೆ, ಇತ್ತ ಐಸಿಸಿ ವೇಳಾಪಟ್ಟಿ ರಿಲೀಸ್ ಮಾಡಿದೆ. ಭಾರತದ ವೇಳಾಪಟ್ಟಿಯಲ್ಲಿ ರೋಹಿತ್ ಶರ್ಮಾ ಫೋಟೋ ಹಾಕಿ ಐಸಿಸಿ ಪೋಸ್ಟರ್ ಹಾಕಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ಪೋಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಫ್ಯಾನ್ಸ್, ಟಿ20 ವಿಶ್ವಕಪ್ನಲ್ಲಿ ಕ್ಯಾಪ್ಟನ್ ಆಗಲು ಇಬ್ಬರ ನಡುವೆ ಫೈಟ್ ಇದೆ ಅಂತ ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ.

2007ರ ಬಳಿಕ ಟೀಂ ಇಂಡಿಯಾ ಒಂದೇ ಒಂದು ಟಿ20 ವಿಶ್ವಕಪ್ ಗೆದ್ದಿಲ್ಲ. ಅಷ್ಟೇಕೆ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ. 17 ವರ್ಷಗಳ ಬಳಿಕ ಟಿ20 ವರ್ಲ್ಡ್‌ಕಪ್, 11 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಟೀಂ ಇಂಡಿಯಾ ಎದುರು ನೋಡ್ತಿದೆ. ಅದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಳ್ತಿದೆ.

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್