ವೆಸ್ಟ್‌ ಇಂಡೀಸ್ ಪ್ರವಾಸದ ವೇಳಾಪಟ್ಟಿ ಪ್ರಕಟಿಸಿದ ಟೀಂ ಇಂಡಿಯಾ; 2 ಟೆಸ್ಟ್, 3 ಒನ್‌ಡೇ & 5 ಟಿ20..!

* ತಿಂಗಳ ಬಿಡುವಿನ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಭಾರತ
* ವಿಂಡೀಸ್ ಪ್ರವಾಸದಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಆಡಲಿರುವ ಉಭಯ ತಂಡಗಳು 
* ಟೆಸ್ಟ್ ಸರಣಿಯು ಜುಲೈ 12ರಿಂದ ಆರಂಭ

BCCI announces schedule of India tour of West Indies Team India will play 2 test 3 ODI and 5 T20Is kvn

ನವ​ದೆ​ಹ​ಲಿ(ಜೂ.13): ಭಾರತ ತಂಡ ಜಲೈ.12ರಿಂದ ಆಗಸ್ಟ್‌ 13ರ ವರೆಗೂ ವೆಸ್ಟ್‌​ಇಂಡೀಸ್‌ ಪ್ರವಾಸ ಕೈಗೊ​ಳ್ಳ​ಲಿದ್ದು, ಸೋಮ​ವಾರ ಬಿಸಿ​ಸಿಐ ಅಧಿ​ಕೃತ ವೇಳಾ​ಪಟ್ಟಿ ಪ್ರಕ​ಟಿ​ಸಿತು. ಟೀಂ ಇಂಡಿಯಾವು, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಎರಡನೇ ಆವತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ಟೀಂ ಇಂಡಿಯಾ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸುಮಾರು ಒಂದು ತಿಂಗಳ ಬಿಡುವಿನ ಬಳಿಕ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಮೂಲಕ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್‌ ಸರ​ಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿ​ನಿ​ಕಾ​ದಲ್ಲಿ ಆರಂಭ​ವಾ​ಗ​ಲಿ​ದ್ದು, ಜುಲೈ 20ರಿಂದ 2ನೇ ಟೆಸ್ಟ್‌ ಪಂದ್ಯ ಟ್ರಿನಿ​ಡಾ​ಡ್‌​ನ​ಲ್ಲಿ ನಡೆ​ಯ​ಲಿದೆ. ಬಳಿಕ ಜುಲೈ 27, 29ರಂದು ಮೊದ​ಲೆ​ರಡು ಏಕ​ದಿನಕ್ಕೆ ಬಾರ್ಬ​ಡಾ​ಸ್‌​, ಆಗಸ್ಟ್‌ 1ರಂದು 3ನೇ ಏಕ​ದಿ​ನಕ್ಕೆ ಟ್ರಿನಿ​ಡಾಡ್‌ ಆತಿಥ್ಯ ವಹಿ​ಸ​ಲಿದೆ. 

ಇನ್ನು ಆಗಸ್ಟ್‌ 3ರಿಂದ ಟ್ರಿನಿ​ಡಾ​ಡ್‌​ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭ​ವಾ​ಗ​ಲಿದ್ದು, 2 ಮತ್ತು 3ನೇ ಪಂದ್ಯ ಕ್ರಮ​ವಾಗಿ ಆಗಸ್ಟ್‌ 6, 8ಕ್ಕೆ ಗಯಾ​ನ​ದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾ​ದಲ್ಲಿ ನಡೆ​ಯ​ಲಿದೆ.

ನಿಧಾ​ನ​ಗತಿ ಬೌಲಿಂಗ್‌​: ಭಾರ​ತ, ಆಸೀಸ್‌ಗೆ ದಂಡ!

ದುಬೈ: ಸತತ 2ನೇ ಬಾರಿ ಟೆಸ್ಟ್‌ ವಿಶ್ವ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ಸೋತ ಭಾರ​ತಕ್ಕೆ ಮತ್ತೊಂದು ಆಘಾತ ಎದು​ರಾ​ಗಿದ್ದು, ಫೈನಲ್‌ ಪಂದ್ಯ​ದ ನಿಧಾ​ನ​ಗತಿ ಬೌಲಿಂಗ್‌ಗಾಗಿ ಟೀಂ ಇಂಡಿ​ಯಾದ ಎಲ್ಲಾ ಆಟ​ಗಾ​ರ​ರಿಗೂ ಪಂದ್ಯದ ಸಂಭಾ​ವ​ನೆಯ ಶೇ.100ರಷ್ಟುದಂಡ ವಿಧಿ​ಸ​ಲಾ​ಗಿದೆ. ಇದೇ ವೇಳೆ ಆಸ್ಪ್ರೇ​ಲಿಯಾ ಆಟ​ಗಾ​ರ​ರಿಗೆ ಶೇ.80 ದಂಡ ವಿಧಿಸಿ ಐಸಿಸಿ ಆದೇ​ಶಿ​ಸಿದೆ. ಭಾರತ ನಿಗ​ದಿತ ಸಮ​ಯದ ವೇಳೆ 5 ಓವರ್‌ ಕಡಿಮೆ ಎಸೆದ ಕಾರಣ ಪ್ರತಿ ಓವ​ರ್‌ಗೆ ಶೇ.20ರಂತೆ ಸಂಪೂರ್ಣ ಸಂಭಾ​ವ​ನೆ​ಯನ್ನು ಆಟ​ಗಾ​ರರು ದಂಡದ ರೂಪ​ದಲ್ಲಿ ಕಟ್ಟ​ಬೇ​ಕಿದೆ. ಆಸೀಸ್‌ 4 ಓವರ್‌ ಕಡಿಮೆ ಎಸೆದಿತ್ತು. ಭಾರ​ತದ ಆಟ​ಗಾ​ರರು ಟೆಸ್ಟ್‌ ಪಂದ್ಯ​ವೊಂದಕ್ಕೆ 15 ಲಕ್ಷ ರು. ಸಂಭಾ​ವನೆ ಪಡೆ​ಯ​ಲಿ​ದ್ದಾರೆ.

ಅಕ್ಟೋಬರ್ 15ಕ್ಕೆ ಭಾರತ vs ಪಾಕ್‌ ಏಕದಿನ ವಿಶ್ವಕಪ್‌ ಕದನ..! ತಾತ್ಕಾ​ಲಿಕ ವೇಳಾ​ಪಟ್ಟಿ ಪ್ರಕಟ

ಗಿಲ್‌ಗೆ 115% ದಂಡ

ಇದೇ ವೇಳೆ ವಿವಾ​ದಾ​ತ್ಮಕ ಕ್ಯಾಚ್‌ಗೆ ಬಲಿ​ಯಾ​ಗಿದ್ದ ಶುಭ್‌​ಮನ್‌ ಗಿಲ್‌, ಅಂಪೈರ್‌ ತೀರ್ಪು ಪ್ರಶ್ನಿಸಿ ಸಾಮಾ​ಜಿಕ ತಾಣ​ಗ​ಳಲ್ಲಿ ಪೋಸ್ಟ್‌ ಹಾಕಿ​ದ್ದಕ್ಕೆ ಹೆಚ್ಚುವರಿ ಶೇ.15ರಷ್ಟುದಂಡ ವಿಧಿ​ಸ​ಲಾ​ಗಿ​ದೆ. ಗ್ರೀನ್‌ ತಮ್ಮ ಕ್ಯಾಚ್‌ ಹಿಡಿ​ಯು​ತ್ತಿ​ರುವ ಫೋಟೋ​ವನ್ನು ಶೇರ್‌ ಮಾಡಿದ್ದ ಗಿಲ್‌, ದುರ್ಬೀನು ಚಿಹ್ನೆಯ ಮೂಲಕ ಅಂಪೈರ್‌ ನಿರ್ಧಾ​ರ​ವನ್ನು ಟೀಕಿ​ಸಿ​ದ್ದರು.

ಟೆಸ್ಟ್‌ ಫೈನ​ಲ್‌​ ಸಿದ್ಧತೆಗೆ 20-25 ದಿನ ಬೇಕು

ಲಂಡ​ನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಂತಹ ಟೂರ್ನಿ​ಯ ಫೈನ​ಲ್‌ಗೆ ಬೆಸ್ಟ್‌ ಆಫ್‌ ತ್ರೀ (3 ಪಂದ್ಯ​ಗಳ ಸರಣಿ) ಆಡಿ​ಸು​ವುದು ಉತ್ತಮ ಎಂದು ಭಾರ​ತದ ನಾಯಕ ರೋಹಿತ್‌ ಶರ್ಮಾ ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ. ಆದರೆ ಇದಕ್ಕೆ ಸಮಯ ಒದ​ಗಿ​ಸು​ವುದು ಸವಾ​ಲಾ​ಗಬ​ಹುದು ಎಂಬು​ದನ್ನೂ ರೋಹಿತ್‌ ಒಪ್ಪಿ​ಕೊಂಡಿ​ದ್ದಾರೆ. ಭಾನು​ವಾರ ಆಸ್ಪ್ರೇ​ಲಿಯಾ ವಿರುದ್ಧ ಫೈನಲ್‌ ಸೋತ ಬಳಿಕ ಪ್ರತಿ​ಕ್ರಿ​ಯಿ​ಸಿದ ಅವರು, ‘2 ವರ್ಷ ಕಠಿಣ ಪರಿ​ಶ್ರ​ಮ​ಪಟ್ಟು ಬಳಿಕ ಒಂದೇ ಫೈನಲ್‌ ಪಂದ್ಯ ಆಡು​ವುದಕ್ಕಿಂತ ಬೆಸ್ಟ್‌ ಆಫ್‌ ಥ್ರೀ ಉತ್ತಮ. ಮಹ​ತ್ವದ ಟೂರ್ನಿ​ಗೂ ಮುನ್ನ ಸಿದ್ಧ​ತೆಗೆ 20-25 ದಿನ ಸಮಯ ಅಗತ್ಯ ಎಂದು ತಿಳಿ​ಸಿ​ದ್ದಾರೆ. ಅಲ್ಲದೇ, ನಾವು ಮುಂದೆ ಏಕದಿನ ವಿಶ್ವ​ಕಪ್‌ ಆಡ​ಬೇ​ಕಿದೆ. ಅದಕ್ಕೆ ಹೊಸ ರೀತಿಯ ಯೋಜನೆಗಳನ್ನು ಮಾಡಲಿದ್ದೇವೆ’ ಎಂದಿ​ದ್ದಾರೆ.

Latest Videos
Follow Us:
Download App:
  • android
  • ios