ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ ವೈರತ್ವ, ಸ್ಲೆಡ್ಜಿಂಗ್ ಇತ್ತೀಚೆಗೆ ಕೊಂಚ ತಣ್ಣಗಾಗಿದೆ. ಆದರೆ ಇದೀಗ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ರೈವಲ್ರಿ ಮಾತ್ರ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಬಾಂಗ್ಲಾಗೆ ತಿರುಗೇಟು ನೀಡಿಲು ಟೈಮ್ ಔಟ್ ಸೆಲೆಬ್ರೇಷನ್ ಮಾಡಿದ್ದ ಶ್ರೀಲಂಕಾ ವಿರುದ್ದ ಬಾಂಗ್ಲಾ ಸೇಡು ತೀರಿಸಿಕೊಂಡಿದೆ. ಸರಣಿ ಗೆಲುವಿನ ಸಂಭ್ರಮದ ಈ ವಿಡಿಯೋ ಭಾರಿ ವೈರಲ್ ಆಗಿದೆ. 

ಚಿತ್ತೋಗ್ರಾಂ(ಮಾ.18) ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ವೈರತ್ವ, ಸ್ಲೆಡ್ಜಿಂಗ್ ಇದೀಗ ಮತ್ತೊಂದು ಹಂತ ತಲುಪಿದೆ. ಬಾಂಗ್ಲಾದೇಶ ಕ್ರಿಕೆಟ್ ಆಟ ಇತರ ಎಲ್ಲಾ ತಂಡಕ್ಕಿಂತ ಭಿನ್ನ. ಮೈದಾನದಲ್ಲಿ ಸ್ಲೆಡ್ಜಿಂಗ್, ಕಿತ್ತಾಟಗಳು ಇದ್ದೇ ಇರುತ್ತೆ. ಇತ್ತ ಬಾಂಗ್ಲಾದೇಶ ಅಭಿಮಾನಿಗಳು ಕೂಡ ಕೊಂಚ ಅಗ್ರೆಸ್ಸೀವ್ ಸೆಲೆಬ್ರೇಷನ್ ಮಾಡುತ್ತಾರೆ. ಇದೀಗ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿನ ವೈರತ್ವದ ವಿಡಿಯೋ ಭಾರಿ ವೈರಲ್ ಆಗಿದೆ.ಇತ್ತೀಚೆಗೆ ಶ್ರೀಲಂಕಾ ತಂಡ ಟಿ20 ಸರಣಿ ಗೆಲುವಿನ ಬಳಿಕ ಬಾಂಗ್ಲಾದೇಶದ ನಡೆ ಟೀಕಿಸಲು ವಾಚ್ ಮೇಲೆ ಬೆರಳಿಟ್ಟು ಟೈಮ್ ಔಟ್ ಸೆಲೆಬ್ರೇಷನ್ ಮಾಡಿದ್ದರು. ಇದೀಗ ಏಕದಿನ ಸರಣಿಯಲ್ಲಿ ಲಂಕಾ ಮಣಿಸಿದ ಬಾಂಗ್ಲಾದೇಶ ಎಂಜಲೋ ಮ್ಯಾಥ್ಯೂಸ್ ಹೆಲ್ಮೆಟ್ ಕಾರಣ ನೀಡಿದ್ದನ್ನು ಮಿಮಿಕ್ರಿ ಮಾಡಿ ಬಾಂಗ್ಲಾ ತಂಡ ಸಂಭ್ರಮಿಸಿದೆ.

ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 2-1 ಅಂತರದಲ್ಲಿ ಗೆಲುವು ದಾಖಲಿಸಿದೆ. ಗೆಲುವಿನ ಬಳಿಕ ಟ್ರೋಫಿ ಪಡೆದು ಸಂಭ್ರಮ ಆಚರಿಸಿದ ಬಾಂಗ್ಲಾದೇಶ ಈ ಹೆಲ್ಮೆಟ್ ಸಂಭ್ರಮ ಆಚರಿಸಿದೆ. ಈ ಸಂಭ್ರಮದ ವಿರುದ್ಧ ರೋಚಕ ಕತೆ ಇದೆ. ಇದು ನೇವಾಗಿ ಲಂಕಾ ತಂಡಕ್ಕೆ ನೀಡಿದ ತಿರುಗೇಟು.

Scroll to load tweet…

Scroll to load tweet…