RCB ವಿರುದ್ಧ ಸನ್‌ ರೈಸರ್ಸ್ ಹೈದ್ರಾಬಾದ್ ತಂಡ ಬೆಂಗಳೂರಿನಲ್ಲಿ 25 ರನ್ ಅಂತರದ ಗೆಲುವು ಸಾಧಿಸಿತ್ತು. ಆ ಸೋಲಿನ ಸೇಡನ್ನ RCB ತೀರಿಸಿಕೊಂಡಿದೆ. ಮೊನ್ನೆ ಹೈದ್ರಾಬಾದ್‌ಗೆ ಹೋಗಿ ಸನ್ ರೈಸರ್ಸ್ ಸೋಲಿಸಿದೆ.

ಬೆಂಗಳೂರು(ಏ.27): 6 ಬಾಲ್ನಲ್ಲಿ 12 ರನ್, 2 ಬಿಗ್ ವಿಕೆಟ್. ಸನ್ ರೈಸರ್ಸ್ ವಿರುದ್ಧ ಆರ್ಸಿಬಿ ಗೆಲುವಿಗೆ ಕಾಣಿಕೆ ನೀಡಿದ. ಆದ್ರೆ ಯಾರಾಪ್ಪ ಈತ, ಇಲ್ಲಿಯವರೆಗೂ ಎಲ್ಲಿದ್ದ? ಯಾವ ತಂಡದ ಪರ ಆಡಿದನ್ನ ನೋಡಿಲ್ಲ. ಆರ್ಸಿಬಿ ಪರ ಆಡಿದ್ದಾನೆ ಅಂದುಕೊಂಡ್ರಾ..? ಈತನಿಗೂ ಕೊಹ್ಲಿಗೂ ಏನ್ ಸಂಬಂಧ ಅನ್ನೋದನ್ನೂ ಹೇಳ್ತಿವಿ ಕೇಳಿ.

ಸ್ವಪ್ನಿಲ್ ಸಿಂಗ್ ಯಾರು ಗೊತ್ತಾ..?

RCB ವಿರುದ್ಧ ಸನ್‌ ರೈಸರ್ಸ್ ಹೈದ್ರಾಬಾದ್ ತಂಡ ಬೆಂಗಳೂರಿನಲ್ಲಿ 25 ರನ್ ಅಂತರದ ಗೆಲುವು ಸಾಧಿಸಿತ್ತು. ಆ ಸೋಲಿನ ಸೇಡನ್ನ RCB ತೀರಿಸಿಕೊಂಡಿದೆ. ಮೊನ್ನೆ ಹೈದ್ರಾಬಾದ್‌ಗೆ ಹೋಗಿ ಸನ್ ರೈಸರ್ಸ್ ಸೋಲಿಸಿದೆ. ಬರೋಬ್ಬರಿ ಒಂದು ತಿಂಗಳ ಬಳಿಕ RCB ತಂಡ ಗೆಲುವು ಸಾಧಿಸಿತು. ಮಾರ್ಚ್ 25ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ಮೇಲೆ RCB ಗೆದ್ದಿದ್ದು ಏಪ್ರಿಲ್ 25ರಂದು ಸನ್ ರೈಸರ್ಸ್ ವಿರುದ್ಧ ಮಾತ್ರ. ಈ ಒಂದು ತಿಂಗಳಲ್ಲಿ ರೆಡ್ ಆರ್ಮಿ ಪಡೆ ಸತತ 6 ಪಂದ್ಯಗಳನ್ನ ಸೋತಿತ್ತು. ಈ ಸೀಸನ್ನಲ್ಲಿ ಎರಡನೇ ಜಯ ಸಾಧಿಸಿದ RCB, ಐಪಿಎಲ್‌ ಟೂರ್ನಿಯಲ್ಲಿ 250ನೇ ಪಂದ್ಯವನ್ನೂ ಗೆದ್ದಂತಾಗಿದೆ.

ವಿರಾಟ್ ಕೊಹ್ಲಿ ಪವರ್‌ಪ್ಲೇ ಬಳಿಕ ನಿಧಾನಗತಿ ಬ್ಯಾಟಿಂಗ್ ಮಾಡೋದೇಕೆ..? ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್

ಇಂಪ್ಯಾಕ್ಟ್ ಪ್ಲೇಯರ್, ಇಂಪ್ಯಾಕ್ಟ್ ಆಟ..!

ಅವಿಸ್ಮರಣೀಯ ಪಂದ್ಯದಲ್ಲಿ RCB ಪರ ಅನಿರೀಕ್ಷಿತವಾಗಿ ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಆಡಿದ 33 ವರ್ಷದ ಸ್ವಪ್ನಿಲ್ ಸಿಂಗ್, ಎಲ್ಲರ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡಲ್ಲೂ ಅದ್ಭುತ ಪ್ರದರ್ಶನ ತೋರಿದ ಸ್ವಪ್ನಿಲ್, RCB ಗೆಲುವಿಗೆ ನಿರ್ಣಾಯಕ ಪಾತ್ರವಹಿಸಿದ್ರು. ಕೊನೆಯ 6 ಬಾಲ್ನಲ್ಲಿ 1 ಬೌಂಡರಿ, 1 ಸಿಕ್ಸರ್ ಸಹಿತ ಸ್ವಪ್ನಿಲ್ ಸಿಂಗ್ 12 ರನ್‌ ಹೊಡೆದರು. ಹೀಗಾಗಿ RCB 200 ಪ್ಲಸ್ ರನ್ ಹೊಡೆಯಲು ಸಾಧ್ಯವಾಯ್ತು.

ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಬೌಲಿಂಗ್‌ನಲ್ಲೂ ಸ್ವಪ್ನಿಲ್ ಸಿಂಗ್ ಮಿಂಚಿದರು. ಹೈದ್ರಾಬಾದ್ ತಂಡದ ಪ್ರಮುಖ ಬ್ಯಾಟರ್‌ಗಳಾದ ಏಯ್ಡನ್ ಮಾರ್ಕ್‌ರಮ್ ಮತ್ತು ಹೆನ್ರಿಕ್ ಕ್ಲಾಸೆನ್ ವಿಕೆಟ್‌ ಪಡೆಯುವ ಮೂಲಕ ಸ್ವಪ್ನಿಲ್ ಸಿಂಗ್ RCBಯನ್ನು ಗೆಲುವಿನ ಸನಿಹ ತಂದರು. 3 ಓವರ್ ಬೌಲ್ ಮಾಡಿದ ಸ್ವಪ್ನಿಲ್, 40 ರನ್ ನೀಡಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಇಬ್ಬರು ವಿಕೆಟೇ RCB ಗೆಲುವಿಗೆ ಕಾರಣವಾಯ್ತು.

ಕೆಕೆಆರ್ ಎದುರು 262 ರನ್‌ ಚೇಸ್‌: ಪಂಜಾಬ್ ಟಿ20 ವಿಶ್ವದಾಖಲೆ!

2008ರ ಅಂಡರ್-19 ಸಂಭಾವ್ಯ ತಂಡದಲ್ಲಿದ್ದ ಸ್ವಪ್ನಿಲ್..!

ಉತ್ತರಖಂಡದ ಸ್ವಪ್ನಿಲ್‌ ಸಿಂಗ್, ಆಲ್ರೌಂಡ್ ಆಟಗಾರ. 2008ರಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ಅಂಡರ್‌-19 ತಂಡದ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆದ್ರೆ ಅದಕ್ಕೂ ಮುನ್ವೇ ಸ್ವಪ್ನಿಲ್‌, 14 ವರ್ಷ 355 ದಿನಗಳಲ್ಲೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 56 ಪ್ರಥಮ ದರ್ಜೆ ಪಂದ್ಯಗಳನ್ನು ಬರೋಡ ಪರ ಆಡಿದ್ದ ಸ್ವಪ್ನಿಲ್‌, 2021-22 ಋತುವಿನಲ್ಲಿ ಉತ್ತರಾಖಂಡ್‌ ಪರ ಆಡಲು ತೀರ್ಮಾನಿಸಿದರು.

ದೇಶೀಯ ಟೂರ್ನಿಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದ ಸ್ವಪ್ನಿಲ್ ಸಿಂಗ್ ಎಲ್ಲರ ಗಮನ ಸೆಳೆದಿದರು. 2014-15ರಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸ್ವಪ್ನಿಲ್, ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದಿದರು. ಈ ಅಂಕಿ-ಅಂಶಗಳನ್ನು ಗಮನಿಸಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2016ರ ಆವೃತ್ತಿಯಲ್ಲಿ ಸ್ವಪ್ನಿಲ್ ಸಿಂಗ್ ಅವರನ್ನು ಬಿಡ್‌ ಮಾಡಿತ್ತು. ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ನಂತರ ಪಂಜಾಬ್‌ ಕಿಂಗ್ಸ್‌, ಲಕ್ನೋ ಸೂಪರ್‌ ಜೆಂಟ್ಸ್‌ ತಂಡ ಸೇರಿದ ಸ್ವಪ್ನಿಲ್‌ ಕೇವಲ ಬೆಂಚ್‌ಗೆ ಸೀಮಿತವಾಗಿದ್ದರು.

ಈ ಸಲದ ಐಪಿಎಲ್ ಮಿನಿ ಬಿಡ್ನಲ್ಲಿ ಆರ್ಸಿಬಿ ತಂಡ 20 ಲಕ್ಷ ರೂಪಾಯಿಗೆ ಸ್ವಪ್ನಿಲ್‌ ಸಿಂಗ್ ಅವರನ್ನ ಖರೀದಿಸಿತ್ತು. ಆದ್ರೂ ಅವರಿಗೆ ಮೊದಲ 8 ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಆಲ್ರೌಂಡರ್ ಅನ್ನೋ ಕಾರಣಕ್ಕೆ ಸನ್ ರೈಸರ್ಸ್ ವಿರುದ್ಧ ರಜತ್ ಪಾಟೀದಾರ್‌ಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಎಂಟ್ರಿಕೊಟ್ಟು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿದ್ರು. ಒಟ್ನಲ್ಲಿ 33 ವಯಸ್ಸಿನಲ್ಲಿ ಸ್ವಪ್ನಿಲ್‌ ಸಿಂಗ್ ಭಾರಿ ಸುದ್ದಿಯಲ್ಲಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್