ನಿಯಮದ ಪ್ರಕಾರ ಚೆಂಡು ನೆಲದ ಮೇಲೆ ಬಿದ್ದು ಸಂಪೂರ್ಣವಾಗಿ ತನ್ನ ಚಲನೆಯನ್ನು ನಿಲ್ಲಿಸುವವರೆಗೂ ಅದನ್ನು ಕೈಯಿಂದ ಮುಟ್ಟುವ ಹಾಗಿಲ್ಲ. ರಹೀಂರನ್ನು ಔಟ್ ಎಂದು ಘೋಷಿಸುವಂತೆ ನ್ಯೂಜಿಲೆಂಡ್ ಸಲ್ಲಿಸಿದ ಮನವಿಯನ್ನು ಅಂಪೈರ್‌ಗಳು ಪುರಸ್ಕರಿಸಿದರು.
ಮೀರ್‌ಪುರ(ಡಿ.07): ಬಾಂಗ್ಲಾದೇಶದ ಮಾಜಿ ನಾಯಕ ಮುಷ್ಫಿಕುರ್ ರಹೀಂ ಬ್ಯಾಟ್ ಮಾಡುವಾಗ ಕೈಯಿಂದ ಚೆಂಡನ್ನು ಮುಟ್ಟಿ ಔಟಾದ ದೇಶದ ಮೊದಲ ಕ್ರಿಕೆಟಿಗ ಎನ್ನುವ ಅಪಖ್ಯಾತಿಗೆ ಒಳಗಾದರು. ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ವೇಳೆ ರಹೀಂ, ಕೈಲ್ ಜೇಮಿಸನ್‌ರ ಬೌಲಿಂಗ್ ಎದುರಿಸುವಾಗ ಚೆಂಡು ಅವರ ಬ್ಯಾಟ್‌ಗೆ ತಗುಲಿ ಹಿಂದಕ್ಕೆ ಹೋಗುವಾಗ ಸ್ಟಂಪ್ಸ್‌ಗೆ ಬಡಿಯಬಹುದು ಎನ್ನುವ ಆತಂಕದಲ್ಲಿ ಚೆಂಡನ್ನು ಕೈಯಿಂದ ತಡೆದರು.
ನಿಯಮದ ಪ್ರಕಾರ ಚೆಂಡು ನೆಲದ ಮೇಲೆ ಬಿದ್ದು ಸಂಪೂರ್ಣವಾಗಿ ತನ್ನ ಚಲನೆಯನ್ನು ನಿಲ್ಲಿಸುವವರೆಗೂ ಅದನ್ನು ಕೈಯಿಂದ ಮುಟ್ಟುವ ಹಾಗಿಲ್ಲ. ರಹೀಂರನ್ನು ಔಟ್ ಎಂದು ಘೋಷಿಸುವಂತೆ ನ್ಯೂಜಿಲೆಂಡ್ ಸಲ್ಲಿಸಿದ ಮನವಿಯನ್ನು ಅಂಪೈರ್‌ಗಳು ಪುರಸ್ಕರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡನ್ನು ಕೈಯಿಂದ ಮುಟ್ಟಿ ಔಟಾದ ಪ್ರಸಂಗ ಕೊನೆಯ ಬಾರಿ ನಡೆದಿದ್ದು 2001ರಲ್ಲಿ. ಭಾರತ ವಿರುದ್ಧ ಇಂಗ್ಲೆಂಡ್‌ನ ಮೈಕಲ್ ವಾನ್ ಔಟಾಗಿದ್ದರು.
2ನೇ ಟೆಸ್ಟ್: ಒಂದೇ ದಿನ 15 ವಿಕೆಟ್ ಪತನ!
ಮೀರ್‌ಪುರ (ಬಾಂಗ್ಲಾದೇಶ): ಬ್ಯಾಟಿಂಗ್‌ನಲ್ಲಿ ತೀವ್ರ ವೈಫಲ್ಯ ಕಂಡ ಹೊರತಾಗಿಯೂ ಬೌಲರ್‌ಗಳ ಅಸಾಧಾರಣ ಪ್ರದರ್ಶನದಿಂದಾಗಿ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 66.2 ಓವರ್‌ಗಳಲ್ಲಿ 172ಕ್ಕೆ ಸರ್ವಪತನ ಕಂಡಿತು. ಮುಷ್ಫಿಕುರ್ ರಹೀಂ(35), ಶಹಾದತ್(31) ಅಲ್ಪ ಹೋರಾಟ ನಡೆಸಿದರು. ಸ್ಯಾಂಟ್ನರ್, ಫಿಲಿಪ್ಸ್ ತಲಾ 3 ವಿಕೆಟ್ ಕಿತ್ತರು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ದಿನದಂತ್ಯಕ್ಕೆ 5 ವಿಕೆಟ್‌ಗೆ 55 ರನ್ ಕಲೆಹಾಕಿದ್ದು, ಇನ್ನೂ 117 ರನ್ ಹಿನ್ನಡೆಯಲ್ಲಿದೆ. ಮೆಹಿದಿ 3 ವಿಕೆಟ್ ಪಡೆದಿದ್ದಾರೆ.
ರಾಮ ಮಂದಿರ ಪ್ರಾಣಪ್ರತಿಷ್ಠೆ ಆಮಂತ್ರಣ ಸ್ವೀಕರಿಸಿದ ಕೊಹ್ಲಿ-ಸಚಿನ್; ಆಯೋಧ್ಯೆಗೆ ಕ್ರಿಕೆಟ್ ದಿಗ್ಗಜರು!
ಅತಿಯಾದ ಕ್ರಿಕೆಟ್‌ನಿಂದಾಗಿ ಆಲ್ರೌಂಡರ್ಸ್ ಕೊರತೆ: ಕಾಲಿಸ್
ನವದೆಹಲಿ: ವಿಶ್ವದೆಲ್ಲೆಡೆ ಅತಿಯಾದ ಕ್ರಿಕೆಟ್‌ನಿಂದಾಗಿ ಗುಣಮಟ್ಟದ ಆಲ್ರೌಂಡರ್‌ಗಳ ಸಂಖ್ಯೆ ಕುಸಿಯುತ್ತಿದೆ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ ಕಾಲಿಸ್ ಅಭಿಪ್ರಾಯಿಸಿದ್ದಾರೆ.
‘ಕ್ರಿಕೆಟ್ ಇತಿಹಾಸವನ್ನು ಗಮನಿಸಿದಾಗ ಗುಣಮಟ್ಟದ ಆಲ್ರೌಂಡರ್‌ಗಳು ದೊಡ್ಡ ಸಂಖ್ಯೆಯಲ್ಲಿ ಕಂಡುಬಂದಿಲ್ಲ. ಒಬ್ಬ ಆಟಗಾರ ಆಲ್ರೌಂಡರ್ ಆಗಿ ರೂಪುಗೊಳ್ಳಲು ಬಹಳ ಸಮಯ ಹಿಡಿಯಲಿದೆ. ಆದರೆ ಇತ್ತೀಚೆಗೆ ಎಲ್ಲಾ ಮೂರೂ ಮಾದರಿಯಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚುತ್ತಿದ್ದು, ಆಟಗಾರರಿಗೆ ತಮ್ಮ ಕೌಶಲ್ಯವನ್ನು ಉತ್ತಮಗೊಳಿಸಿಕೊಳ್ಳಲು ಸಮಯವೇ ಸಿಗದಂತಾಗಿದೆ’ ಎಂದು ಕಾಲಿಸ್ ಹೇಳಿದ್ದಾರೆ.
Happy Birthday Ravindra Jadeja: ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಜಡೇಜಾ-ರಿವಾಬಾ ಲವ್ ಸ್ಟೋರಿ..!
ಇದೇ ವೇಳೆ ಐಪಿಎಲ್‌ನಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್ ಆಟಗಾರ ನಿಯಮದ ಬಗ್ಗೆಯೂ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಕಾಲಿಸ್, ‘ಇಂಪ್ಯಾಕ್ಟ್ ಆಟಗಾರನ ಬಳಕೆಯಿಂದ ಆಲ್ರೌಂಡರ್‌ಗಳಿಗೆ ಜಾಗವೇ ಇಲ್ಲ. ಈ ನಿಯಮ ನನಗೆ ಹಿಡಿಸಲಿಲ್ಲ’ ಎಂದಿದ್ದಾರೆ.
