* ಬಾಂಗ್ಲಾದೇಶ ತಂಡವು ಜಿಂಬಾಬ್ವೆ ಎದುರು ಭರ್ಜರಿ ಗೆಲುವು* ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಜಯ* ಮೆಹದಿ ಹಸನ್ ಮಿಂಚಿನ ಪ್ರದರ್ಶನಕ್ಕೆ ಒಲಿದು ಗೆಲುವು 

ಹರಾರೆ(ಜು.12): ಮೆಹದಿ ಹಸನ್ ಹಾಗೂ ಟಸ್ಕಿನ್‌ ಅಹಮ್ಮದ್ ಮಿಂಚಿನ ಬೌಲಿಂಗ್ ನೆರವಿನಿಂದ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು 220 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿಗೆ 477 ರನ್‌ ಗುರಿ ಬೆನ್ನತ್ತಿದ್ದ ಆತಿಥೇಯ ತಂಡ, 2ನೇ ಇನ್ನಿಂಗ್ಸಲ್ಲಿ 256 ರನ್‌ಗೆ ಆಲೌಟ್‌ ಆಯಿತು. 

ಬಾಂಗ್ಲಾ ಮೊದಲ ಇನ್ನಿಂಗ್ಸಲ್ಲಿ 468 ರನ್‌ ಗಳಿಸಿತ್ತು. ಜಿಂಬಾಬ್ವೆ 276 ರನ್‌ಗೆ ಆಲೌಟ್‌ ಆದ ಬಳಿಕ, ಬಾಂಗ್ಲಾ 2ನೇ ಇನ್ನಿಂಗ್ಸಲ್ಲಿ 1 ವಿಕೆಟ್‌ಗೆ 284 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಈ ಪಂದ್ಯದ ಬಳಿಕ ಬಾಂಗ್ಲಾದ ಬ್ಯಾಟ್ಸ್‌ಮನ್‌ ಮಹಮದ್ದುಲ್ಲಾ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು.

ಮೊಹಮ್ಮದ್ ಅಜರ್‌ಗೆ ಜಾಕ್‌ಪಾಟ್; BCCI ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಆಯ್ಕೆ!

Scroll to load tweet…

ಸ್ಕೋರ್‌: 
ಬಾಂಗ್ಲಾ 468 ಹಾಗೂ 284/1 ಡಿ., 
ಜಿಂಬಾಬ್ವೆ 276 ಹಾಗೂ 256

ಏಕದಿನ: ಪಾಕ್‌ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು

ಲಂಡನ್‌: ಪಾಕಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 52 ರನ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್‌, 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದು ಸರಣಿ ವಶಪಡಿಸಿಕೊಂಡಿದೆ. ಪ್ರಮುಖ ಅಟಗಾರರ ಅನುಪಸ್ಥಿತಿಯ ಹೊರತಾಗಿಯೂ ಇಂಗ್ಲೆಂಡ್‌ ಸರಣಿ ಜಯಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 247 ರನ್‌ ಗಳಿಸಿತು. ಪಾಕಿಸ್ತಾನ 41 ಓವರಲ್ಲಿ 195 ರನ್‌ಗೆ ಆಲೌಟ್‌ ಆಯಿತು.

Scroll to load tweet…

ಸ್ಕೋರ್‌: ಇಂಗ್ಲೆಂಡ್‌ 247, ಪಾಕಿಸ್ತಾನ 195