ಪಾಕಿಸ್ತಾನ ಕಳಪೆ ಪ್ರದರ್ಶನಕ್ಕೆ ಮತ್ತೊಂದು ತಲೆದಂಡ, ನಾಯಕತ್ವ ತ್ಯಜಿಸಿದ ಬಾಬರ್ ಅಜಮ್!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಬಾಬರ್ ಸೈನ್ಯ ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಒಂದೊಂದೆ ವಿಕೆಟ್ ಬೀಳುತ್ತಿದೆ. ಇದೀಗ ಬಾಬರ್ ಅಜಮ್ ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Babar azam step down as Pakistan captain after disaster show in ICC World Cup 2023 ckm

ಇಸ್ಲಾಮಾಬಾದ್(ನ.15) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕೇವಲ 4 ಪಂದ್ಯ ಗೆದ್ದು ಲೀಗ್ ಹಂತದಿಂದಲೇ ಹೊರಬಿದ್ದ ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ ನೀಡಿದ್ದರು. ಇದು ಮೊದಲ ತಲೆದಂಡವಾಗಿತ್ತು.  ಇದೀಗ ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ರಾಜೀನಾಮೆ ಘೋಷಿಸಿದ್ದಾರೆ. 

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕೇವಲ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪ್ರಮುಖ ತಂಡಗಳ ವಿರುದ್ಧ ಸೋಲಿನ ಜೊತೆಗೆ ಭಾರತ ಹಾಗೂ ಆಫ್ಘಾನಿಸ್ತಾನ ವಿರುದ್ದ ಸೋಲು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಬಾಬರ್ ಅಜಮ್ ಕೂಡ ಕಾರಣ ಅನ್ನೋ ಆರೋಪ ಬಹುತೇಕ ಮಾಜಿ ಕ್ರಿಕೆಟಿಗರು ಮಾಡಿದ್ದರು. ನಾಯಕತ್ವ ತ್ಯಜಿಸುವ ಪ್ರಶ್ನೆ ಇಲ್ಲ ಎಂದಿದ್ದ ಬಾಬರ್ ಅಜಮ್ ಇದೀಗ ತವರಿಗೆ ಮರಳುತ್ತಿದ್ದ ಪಾಕಿಸ್ತಾನ ನಾಯಕತ್ವ ತೊರೆದಿದ್ದಾರೆ.

ಪಾಕಿಸ್ತಾನ ಸೋಲಿಗೆ ಬೌಲಿಂಗ್ ಕೋಚ್ ತಲೆದಂಡ, ಮತ್ತಷ್ಟು ರಾಜೀನಾಮೆ ಶೀಘ್ರದಲ್ಲೇ ಎಂದ ಫ್ಯಾನ್ಸ್!

2019ರಲ್ಲಿ ಪಿಸಿಬಿಯಿಂದ ಕರೆ ಮೂಲಕ ಪಾಕಿಸ್ತಾನ ನಾಯಕತ್ವವಹಿಸುವಂತೆ ಸೂಚಿಸಲಾಗಿತ್ತು. ಕಳೆದ ನಾಲ್ಕು ವರ್ಷಗಲ್ಲಿ ಕ್ರಿಕೆಟ್ ಮೈದಾನದಲ್ಲಿ ಹಲವು ಸೋಲು ಗೆಲುವು ಕಂಡಿದ್ದೇನೆ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಶ್ರೇಯಸ್ಸು, ಘನತೆಯನ್ನು ಎತ್ತಿಹಿಡಿಯಲು ಸಂಪೂರ್ಣ ಮನಸ್ಸಿನಿಂದ ಪ್ರಯತ್ನಿಸಿದ್ದೇನೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನದಲ್ಲಿ ವಿರಾಜಮಾನವಾಗಿದ್ದು, ತಂಡದ ಎಲ್ಲಾ ಆಟಗಾರರು, ಕೋಚ್, ಟೀಂ ಮ್ಯಾನೇಜ್ಮೆಂಟ್ ಪ್ರಯತ್ನವಾಗಿದೆ. ಇದೇ ವೇಳೆ ಪ್ರತಿ ಬಾರಿ ಅಭೂತಪೂರ್ವ ಬೆಂಬಲ, ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಇಂದು ನಾನು ಪಾಕಿಸ್ತಾನದ ಎಲ್ಲಾ ಮಾದರಿ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಅತ್ಯಂತ ಕಠಿಣ ನಿರ್ಧಾರ, ಆದರೆ ಸರಿಯಾದ ಸಮಯದಲ್ಲಿ ತೆಗೆದುಕೊಂಡಿದ್ದೇನೆ ಎಂದುಕೊಂಡಿದ್ದೇನೆ. ನಾನು ಒರ್ವ ಆಟಗಾರನಾಗಿ ಪಾಕಿಸ್ತಾನದ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ತಂಡವನ್ನು ಪ್ರತಿನಿಧಿಸುತ್ತೇನೆ. ಇದೇ ವೇಳೆ ತಂಡಕ್ಕೆ ಆಯ್ಕೆಯಾಗುವ ನೂತನ ನಾಯಕನಿಗೆ ನನ್ನ ಎಲ್ಲಾ ಸಹಕಾರ, ಮಾರ್ಗದರ್ಶನ ನೀಡಲು ಬದ್ಧನಾಗಿದ್ದೇನೆ. ಇದೇ ಸಂದರ್ಭದಲ್ಲಿ ನನ್ನ ಮೇಲೆ ಮಹತ್ತರ ಜವಾಬ್ದಾರಿ ನೀಡಿ ನಂಬಿಕೆ ಇಟ್ಟ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಧನ್ಯವಾದ ಎಂದು ಬಾಬರ್ ಅಜಮ್ ಟ್ವೀಟ್ ಮೂಲಕ ರಾಜೀನಾಮೆ ಘೋಷಿಸಿದ್ದಾರೆ 

 

 

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ನಿರ್ವಹಣೆಗೆ ಇತ್ತೀಚೆಗೆ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ ನೀಡಿದ್ದರು. ಇದೇ ವೇಳೆ ಮತ್ತಷ್ಟು ರಾಜೀನಾಮೆಗಳು ಶೀಘ್ರದಲ್ಲೇ ಘೋಷಣೆಯಾಗಲಿದೆ ಅನ್ನೋ ಸುಳಿವನ್ನು ಹಲವು ಮಾಜಿ ಕ್ರಿಕೆಟಿಗರು ನೀಡಿದ್ದರು. ಇದರಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಾಯಕತ್ವ ತ್ಯಜಿಸಿದ್ದಾರೆ. ಇದರ ಜೊತೆ ಪಾಕಿಸ್ತಾನ ತಂಡದಲ್ಲಿರುವ ವಿದೇಶಿ ಕೋಟ್ ಸ್ಟಾಫ್ ಅಮಾನತು ಮಾಡಲು ಪಿಸಿಬಿ ಮುಂದಾಗಿದೆ ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಒನ್‌ಡೇ ಕ್ರಿಕೆಟ್‌ನಲ್ಲಿ 50 ಶತಕ; ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕ್ರಿಕೆಟಿಗ ಕಿಂಗ್ ಕೊಹ್ಲಿ..!
 

Latest Videos
Follow Us:
Download App:
  • android
  • ios