ಮೆಲ್ಬರ್ನ್(ಏ.01)‌: ಆಸ್ಪ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಟಿಮ್‌ ಪೈನ್‌ರ ಪರ್ಸ್‌ ಕಳವಾದ ಅಚ್ಚರಿಯ ಘಟನೆ ಮಂಗಳವಾರ ನಡೆದಿದೆ. 

ಆಸೀಸ್‌ ಕ್ರಿಕೆಟ್‌ ಟೀಂಗೆ ಮತ್ತೆ ಸ್ಟೀವ್ ಸ್ಮಿತ್‌ ನಾಯಕ?

ಕೊರೋನಾ ಸೋಂಕಿನಿಂದಾಗಿ ಜಿಮ್‌ಗಳು ಸಹ ಮುಚ್ಚಿದ್ದು, ಹೋಬಾರ್ಟ್‌ನ ತಮ್ಮ ನಿವಾಸದಲ್ಲಿರುವ ಗ್ಯಾರೇಜ್‌ ಅನ್ನು ಜಿಮ್‌ ಆಗಿ ಪರಿವರ್ತಿಸಲು ಪೈನ್‌ ನಿರ್ಧರಿಸಿದ್ದರು. ಹೀಗಾಗಿ ತಮ್ಮ ಕಾರ್‌ ಅನ್ನು ರಸ್ತೆಯಲ್ಲಿ ನಿಲ್ಲಿಸಿದ್ದಾಗ ಅದರಲ್ಲಿಟ್ಟಿದ್ದ ಪರ್ಸ್‌ ಕಳ್ಳತನವಾಗಿದೆ. ಕಾರ್‌ ಬಾಗಿಲು ತೆರೆದೇ ಇತ್ತು ಎಂದು ಪೈಸ್‌ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪೈನ್’ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಪಂತ್

ಇನ್ನು ಆಸ್ಟ್ರೇಲಿಯಾ ತಂಡದ ಟೆಸ್ಟ್ ನಾಯಕ ಪೈನ್, ಈ ವರ್ಷಾಂತ್ಯದಲ್ಲಿ ಭಾರತ ವಿರುದ್ಧ ಕಣಕ್ಕಿಳಿಯಲು ಎದುರು ನೋಡುತ್ತಿರುವುದಾಗಿ ಇದೇ ವೇಳೆ ತಿಳಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಲಾ 4 ಸರಣಿಗಳನ್ನಾಡಿದ್ದು, ಭಾರತ 360 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 296 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟೆಸ್ಟ್ ಸರಣಿಯಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.