ಪೈನ್ ಬ್ಯಾಟಿಂಗ್’ಗಿಳಿದಾಗ, ಇಂದು ಹೊಸ ಅತಿಥಿ ಬಂದಿದ್ದಾರೆ, ಮಯಾಂಕ ನೀನೇನಾದರು ಟೆಂಪ್ರವರಿ ಕ್ಯಾಪ್ಟನ್ಸ್ ನೋಡಿದ್ದೀಯಾ ಎಂದು ಪೈನ್ ಉದ್ದೇಶಿಸಿ ರಿಷಭ್ ಪಂತ್ ಟಾಂಗ್ ನೀಡಿದ್ದಾರೆ.
ಮೆಲ್ಬರ್ನ್[ಡಿ.29]: ತನ್ನ ಮಕ್ಕಳನ್ನು ನೋಡಿಕೋ, ನಾನು ನನ್ನ ಗೆಳತಿ ಫಿಲ್ಮ್'ಗೆ ಹೋಗಬೇಕು ಎಂದು ಪಂತ್ ಕಾಲೆಳೆದಿದ್ದ ಟಿಮ್ ಪೈನ್’ಗಿಂದು ಟೀಂ ಇಂಡಿಯಾ ವಿಕೆಟ್ ಕೀಪರ್ ಭರ್ಜರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್: ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ!
ಪೈನ್ ಬ್ಯಾಟಿಂಗ್’ಗಿಳಿದಾಗ, ಇಂದು ಹೊಸ ಅತಿಥಿ ಬಂದಿದ್ದಾರೆ, ಮಯಾಂಕ ನೀನೇನಾದರು ಟೆಂಪ್ರವರಿ ಕ್ಯಾಪ್ಟನ್ಸ್ ನೋಡಿದ್ದೀಯಾ ಎಂದು ಪೈನ್ ಉದ್ದೇಶಿಸಿ ರಿಷಭ್ ಪಂತ್ ಟಾಂಗ್ ನೀಡಿದ್ದಾರೆ.
ಶುಕ್ರವಾರ ಪಂತ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕೀಪರ್ ಪೈನ್, ‘ಎಂ.ಎಸ್.ಧೋನಿ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ನೀನೇಕೆ ಬಂದು ಹೊಬಾರ್ಟ್ ಹರಿಕೇನ್ಸ್ ಪರ ಬಿಬಿಎಲ್ ಆಡಬಾರದು. ಹೇಗಿದ್ದರೂ ತಂಡಕ್ಕೆ ಒಬ್ಬ ಬ್ಯಾಟ್ಸ್‌ಮನ್ ಬೇಕಿದೆ. ಆಸ್ಪ್ರೇಲಿಯಾದಲ್ಲಿ ಇನ್ನಷ್ಟು ದಿನ ರಜಾ ದಿನಗಳನ್ನು ಕಳೆಯಬಹುದು. ಹೊಬಾರ್ಟ್ ಸುಂದರ ನಗರ. ಜಲಾಭಿಮುಖವಾದ ಅಪಾರ್ಟ್‌ಮೆಂಟ್ ನೀಡುತ್ತೇವೆ. ನಿನಗೆ ಮಕ್ಕಳನ್ನು ನೋಡಿಕೊಳ್ಳಲು ಬರುತ್ತದೆ ಅಲ್ವಾ?. ನನ್ನ ಮಕ್ಕಳನ್ನು ನೋಡಿಕೋ, ನಾನು ಪತ್ನಿಯನ್ನು ಸಿನಿಮಾಕ್ಕೆ ಕರೆದೊಯ್ಯಬೇಕಿದೆ’ ಎಂದು ಹೇಳಿದ್ದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
