ಕ್ರಿಕೆಟ್ ಆರಂಭಿಸಲು ಹಲವು ವಿಘ್ನ; ಚೆಂಡಿಗೂ ಸೋಂಕು ನಿವಾರಕ ಸಿಂಪಡಿಸಲು ಚಿಂತನೆ!
ಕ್ರಿಕೆಟ್ ಪಂದ್ಯದಲ್ಲಿ ಬಾಲ್ ಶೈನ್ ಉಳಿಸಿಕೊಳ್ಳಲು ಆಟಗಾರರು ಎಂಜಲು ಬಳಲಿ ಜರ್ಸಿ ಮೇಲೆ ಉಜ್ಜುವುದನ್ನು ಗಮನಿಸಿರುತ್ತೇವೆ. ಈ ಮೂಲಕ ಚೆಂಡು ಹೊಳಪು ಕಳೆದುಕೊಳ್ಳದಂತೆ ನೋಡಿಕೊಳ್ಳಲಾಗುತ್ತದೆ. ಇದೀಗ ಎಂಜಲು ಬಳಕೆ ಐಸಿಸಿ ನಿಷೇಧಿಸಿದೆ. ಆದರೆ ಎಂಜಲು ಬಳಕೆ ಮಾಡಿ, ಕೊರೋನಾ ಬರದಂತೆ ತಡೆಯಲು ಆಸ್ಟ್ರೇಲಿಯಾ ಮುಂದಾಗಿದೆ.
ಮೆಲ್ಬರ್ನ್(ಮೇ.21) : ಚೆಂಡಿನ ಹೊಳಪು ಕಡಿಮೆಯಾದಂತೆ ನೋಡಿಕೊಳ್ಳು ಪರಿಣಾಮಕಾರಿಯಾಗಿ ವೇಗದ ಬೌಲಿಂಗ್ ಹಾಗೂ ಸ್ವಿಂಗ್ ಬೌಲಿಂಗ್ ಮಾಡಲು ಆಟಗಾರರು ಎಂಜಲು ಬಳಸಿ ಜರ್ಸಿ ಮೇಲೆ ಉಜ್ಜುತ್ತಾರೆ. ಆದರೆ ಕೊರೋನಾ ವೈರಸ್ ಕಾರಣ ಎಂಜಲೂ ಮಾತ್ರವಲ್ಲ, ಸನಿಹ ನಿಲ್ಲುವುದೇ ಅಪಾಯ. ಇತ್ತ ಐಸಿಸಿ ಟೆಕ್ನಿಕಲ್ ಕಮಿಟಿ ಎಂಜಲು ಬಳಕೆ ಬೇಡ ಎಂದಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಚೆಂಡಿಗೂ ಸೋಂಕು ನಿವಾರಕ ಸಿಂಪಡಿಸವು ಯತ್ನದಲ್ಲಿದೆ.
ಖಾಲಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕಟೌಟ್ ಹಾಕಿ ಫುಟ್ಬಾಲ್ ಆರಂಭ!..
ಕೊರೋನಾ ಸೋಂಕು ತಗುಲದಂತೆ ತಡೆಯಲು ಪಂದ್ಯದ ವೇಳೆ ಚೆಂಡಿನ ಮೇಲೆ ಸೋಂಕುನಿವಾರಕ ಸಿಂಪಡಿಸಲು ಕ್ರಿಕೆಟ್ ಆಸ್ಪ್ರೇಲಿಯಾ ಚಿಂತನೆ ನಡೆಸುತ್ತಿದೆ. ಪ್ರಯೋಗ ನಡೆಸಲು ಶೀಘ್ರದಲ್ಲೇ ಐಸಿಸಿ ಬಳಿ ಅನುಮತಿ ಕೋರುವುದಾಗಿ ಕ್ರಿಕೆಟ್ ಆಸ್ಪ್ರೇಲಿಯಾದ ಕ್ರೀಡಾ ವಿಜ್ಞಾನ ವ್ಯವಸ್ಥಾಪಕ ಅಲೆಕ್ಸ್ ಕೌಂಟುರಿಸ್ ಹೇಳಿದ್ದಾರೆ.
ಅಕ್ಟೋಬರ್-ನವೆಂಬರ್‌ನಲ್ಲಿ ಐಪಿಎಲ್ ಟಿ20 ಟೂರ್ನಿ, BCCI ಕಸರತ್ತು ಆರಂಭ?.
‘ಚೆಂಡಿನ ಮೇಲೆ ಎಷ್ಟುಪ್ರಮಾಣದಲ್ಲಿ ವೈರಾಣು ದಟ್ಟಣೆ ಆಗಲಿದೆ ಎನ್ನುವುದು ತಿಳಿದಿಲ್ಲ. ಸೋಂಕು ನಿವಾರಕ ಸಿಂಪಡಿಸುವುದು ಎಷ್ಟುಪರಿಣಾಮಕಾರಿ ಎಂಬುದು ಗೊತ್ತಿಲ್ಲ. ಅದೇ ರೀತಿ ಆಟಗಾರರ ಆರೋಗ್ಯಕ್ಕೆ ಹಾನಿ ಆಗುವುದಿಲ್ಲವೇ ಎನ್ನುವುದನ್ನು ಸಹ ತಿಳಿದುಕೊಳ್ಳಬೇಕಿದೆ’ ಎಂದು ಅಲೆಕ್ಸ್, ಕ್ರಿಕೆಟ್ ಆಸ್ಪ್ರೇಲಿಯಾದ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.