ಜರ್ಮನಿ(ಮೇ.21): ಕೊರೋನಾ ಸೋಂಕು ವಿಶ್ವ​ದೆ​ಲ್ಲೆಡೆ ಹರ​ಡಿದ್ದು, ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೂ ಕೆಲ ರಾಷ್ಟ್ರಗಳಲ್ಲಿ ಫುಟ್ಬಾಲ್‌ ಲೀಗ್‌ಗಳು ಪುನಾ​ರಂಭ​ಗೊಂಡಿವೆ. ಜರ್ಮ​ನಿ​ಯ ಬಂಡೆಸ್‌ಲೀಗಾ ಫುಟ್ಬಾಲ್‌ ಟೂರ್ನಿ ಕಳೆದ ವಾರದಿಂದ ಶುರು​ವಾ​ಗಿದ್ದು, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ​ಗ​ಳನ್ನು ನಡೆ​ಸ​ಲಾ​ಗು​ತ್ತಿದೆ. ಆದರೆ ಪ್ರೇಕ್ಷ​ಕರ ಗ್ಯಾಲ​ರಿ​ಯಲ್ಲಿ ಅಭಿ​ಮಾ​ನಿ​ಗಳ ಕಟೌಟ್‌ಗಳನ್ನು ಇರಿ​ಸ​ಲಾ​ಗು​ತ್ತಿದೆ. 

ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!.

19 ಯುರೋಗಳನ್ನು ಪಾವ​ತಿಸಿ ಲೀಗ್‌ನ ವೆಬ್‌ಸೈಟ್‌ನಲ್ಲಿ ತಮ್ಮ ಭಾವ​ಚಿತ್ರ ಅಪ್‌ಲೋಡ್‌ ಮಾಡಿ ನೋಂದಾ​ಯಿ​ಸಿ​ಕೊ​ಳ್ಳಲು ಅವ​ಕಾಶ ನೀಡ​ಲಾ​ಗಿದೆ. ನಿರೀಕ್ಷೆಗೂ ಮೀರಿದ ಪ್ರತಿ​ಕ್ರಿಯೆ ದೊರೆ​ತಿದೆ ಎನ್ನಲಾ​ಗಿದೆ. ಟಿಕೆಟ್‌ ಮಾರಾಟವಿಲ್ಲದೆ ಆಗು​ತ್ತಿ​ರುವ ನಷ್ಟವನ್ನು ಆಯೋ​ಜ​ಕರು ಈ ರೀತಿ ಸರಿದೂಗಿ​ಸು​ತ್ತಿ​ದ್ದಾರೆ.

ಇದೇ ವೇಳೆ ದ.ಕೊ​ರಿಯಾ ಹಾಗೂ ಆಸ್ಪ್ರೇ​ಲಿ​ಯಾ​ದಲ್ಲಿ ಅಭಿ​ಮಾ​ನಿ​ಗಳು ಕೂಗುವ ಅಡಿಯೋಗಳನ್ನು ಪ್ರಸಾರ ಮಾಡ​ಲಾ​ಗುತ್ತಿದೆ. ಈ ಮೂಲಕ ಕ್ರೀಡಾಂಗಣಗಳಲ್ಲಿ ಸಾಮಾನ್ಯವಾಗಿ ಅಭಿಮಾನಿಗಳ ಇರುವ ವಾತಾ​ವ​ರಣವನ್ನು ಸೃಷ್ಟಿ​ಸುವ ಪ್ರಯತ್ನ ನಡೆ​ಸ​ಲಾ​ಗುತ್ತಿದೆ. 

ಇದೀಗ ಇತರ ಕ್ರೀಡೆಗಳು ಈ ರೀತಿಯ ಪ್ರಯತ್ನಕ್ಕೆ ಕೈಹಾಕುತ್ತಿದೆ. ಆದರೆ ಕ್ರಿಕೆಟ್‌ನಲ್ಲಿ ಪ್ರೇಕ್ಷರಿಲ್ಲದ ಆಟ ಆರಂಭವಾಗುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ. ಬಹುತೇಕ ಕ್ರಿಕೆಟಿಗರು ಪ್ರೇಕ್ಷಕರಿಲ್ಲದೆ ಕ್ರಿಕೆಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.