ನವ​ದೆ​ಹ​ಲಿ(ಮೇ.21) : ಕೊರೋನಾ ವೈರಸ್  ಕಾರಣ ಕ್ರಿಕೆಟ್ ವೇಳಾಪಟ್ಟಿ ಇದೀಗ ಅತ್ಯಂತ ಕಠಿಣವಾಗಿದೆ. ಈಗಾಗಲೇ ಹಲವು ಟೂರ್ನಿಗಳು ರದ್ದಾಗಿದೆ. ಇದರೊಂದಿಗೆ ಮುಂಬರುವ ಟೂರ್ನಿಗಳು ಕೂಡ ರದ್ದಾಗುವು ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಆಯೋಜಿಸಿರುವ ಟಿ20 ವಿಶ್ವಕಪ್ ಟೂರ್ನಿಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಅನುಮಾನವಾಗಿದೆ. ಇದೇ ಸಮಯದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.

ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್‌?

ಈ ವರ್ಷ ಅಕ್ಟೋ​ಬರ್‌-ನವೆಂಬರ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ಯ​ಬೇ​ಕಿ​ರುವ ಐಸಿಸಿ ಟಿ20 ವಿಶ್ವ​ಕಪ್‌ ನಡೆ​ಯು​ವುದು ಅನು​ಮಾ​ನ, ಆ ಸಮ​ಯ​ವನ್ನು ಐಪಿ​ಎಲ್‌ ಟಿ20 ಟೂರ್ನಿಗೆ ಬಳ​ಸಿ​ಕೊಳ್ಳುವ ಯೋಜನೆ ಇದೆ ಎಂದು ಬಿಸಿ​ಸಿಐ ಅಪೆಕ್ಸ್‌ ಕೌನ್ಸಿಲ್‌ ಸದಸ್ಯ ಅನ್ಶು​ಮಾನ್‌ ಗಾಯ​ಕ್ವಾಡ್‌ ಹೇಳಿ​ದ್ದಾರೆ. ‘ವಿ​ಶ್ವ​ಕಪ್‌ ರದ್ದಾದರೆ ಇಲ್ಲವೇ ಮುಂದೂ​ಡ​ಲ್ಪ​ಟ್ಟರೆ ಆಗ ಐಪಿ​ಎಲ್‌ ಮಾತ್ರ ನಡೆ​ಯಲು ಸಾಧ್ಯ. ಆದರೆ ಭಾರ​ತ​ದಲ್ಲಿ ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರ​ಬೇ​ಕು’ ಎಂದು ಗಾಯ​ಕ್ವಾಡ್‌ ಹೇಳಿ​ದ್ದಾರೆ.

ವಿದೇಶಿ ಆಟಗಾರರಿಲ್ಲದೆ IPL ಆಯೋಜನೆಗೆ CSK ವಿರೋಧ!

ಕನಿಷ್ಠ 10 ದೇಶದ ಆಟಗಾರರು ಟಿ20 ವಿಶ್ವಕಪ್ ಟೂರ್ನಿಗೆ ಲಭ್ಯವಾಗುವುದು ಕಷ್ಟ. ಹೀಗಾಗಿ ಐಪಿಎಲ್ ಟೂರ್ನಿ ಆಯೋಜನೆ ಸಾಧ್ಯ ಅನ್ನೋ ಸಣ್ಣ ಆಸೆಯೊಂದು ಬಿಸಿಸಿಐ ಮನದಲ್ಲಿ ಚಿಗುರೊಡೆದಿದೆ. ಆದರೆ ಐಪಿಎಲ್ ಟೂರ್ನಿಗೆ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಬೇಕಿದೆ. ಸದ್ಯದ ಪರಿಸ್ಥತಿ ನೋಡಿದರೆ ನಿಯಂತ್ರಣದ ಬದಲು ಹೆಚ್ಚಾಗುತ್ತಿದೆ.