Asianet Suvarna News Asianet Suvarna News

Asia Cup ಪಾಕ್ ವಿರುದ್ಧ ಗೆದ್ದ ಭಾರತಕ್ಕಿಂದು ಹಾಂಕಾಂಗ್ ಸವಾಲು!

ಹಾಂಕಾಂಗ್‌ ವಿರುದ್ಧ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಟಿ20 ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಲಯ ಕಂಡುಕೊಳ್ಳಲು ಉತ್ತಮ ಅವಕಾಶವಾಗಿದೆ. ಇಂದಿನ ಪಂದ್ಯದಲ್ಲೂ ಭಾರತಕ್ಕೆ ಕೆಲ ಸವಾಲುಗಳಿವೆ.
 

Asia Cup T20 2022 Team India face hong kong challenge after beating pakistan by 5 wickets ckm
Author
First Published Aug 31, 2022, 4:12 PM IST

ದುಬೈ(ಆ.31): ಬದ್ಧವೈರಿ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ತಂಡ, ‘ಎ’ ಗುಂಪಿನ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ಬುಧವಾರ ಹಾಂಕಾಂಗ್‌ ವಿರುದ್ಧ ಸೆಣಸಲಿದೆ. ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ವಿರಾಟ್‌ ಕೊಹ್ಲಿ ಸೇರಿ ಭಾರತದ ಬ್ಯಾಟರ್‌ಗಳಿಗೆ ಸೂಪರ್‌-4 ಹಂತಕ್ಕೂ ಮುನ್ನ ಉತ್ತಮ ಬ್ಯಾಟಿಂಗ್‌ ಅಭ್ಯಾಸ ನಡೆಸಲು ಈ ಪಂದ್ಯ ವೇದಿಕೆಯಾಗಲಿದೆ. ಪಾಕಿಸ್ತಾನ ವಿರುದ್ಧ ರಾಹುಲ್‌ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದರು. ರೋಹಿತ್‌ ದೊಡ್ಡ ಇನ್ನಿಂಗ್‌್ಸ ಆಡಿರಲಿಲ್ಲ. ಕೊಹ್ಲಿ 35 ರನ್‌ ಗಳಿಸಿದರೂ ಅವರ ಸ್ಟೆ್ರೖಕ್‌ರೇಟ್‌ ತೀರಾ ಸಾಧಾರಣವಾಗಿತ್ತು. ಸೂರ್ಯಕುಮಾರ್‌ ಪಂದ್ಯ ಫಿನಿಶ್‌ ಮಾಡಲಿಲ್ಲ. ಇಷ್ಟಾದರೂ ಜಡೇಜಾ ಹಾಗೂ ಹಾರ್ದಿಕ್‌ರ ಜೊತೆಯಾಟ ಭಾರತವನ್ನು ಗೆಲ್ಲಿಸಿತ್ತು. ಸೂಪರ್‌-4ನಲ್ಲಿ ಪಾಕಿಸ್ತಾನದ ಜೊತೆಗೆ ಮತ್ತೆರಡು ತಂಡಗಳನ್ನು ಎದುರಿಸಬೇಕಿದ್ದು, ಈ ಪಂದ್ಯದಲ್ಲಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ರೋಹಿತ್‌ ಪಡೆ ಎದುರು ನೋಡಲಿದೆ.

ಪಾಕಿಸ್ತಾನ(India vs Pakistan) ವಿರುದ್ಧ ಭಾರತೀಯ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು. ಹಾರ್ದಿಕ್‌ ಪಾಂಡ್ಯ(Hardik Pandya) ಪೂರ್ಣ ಪ್ರಮಾಣದಲ್ಲಿ ಬೌಲ್‌ ಮಾಡುತ್ತಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್‌. ಮೊದಲ ಪಂದ್ಯದಲ್ಲಿ ರಿಷಭ್‌ ಪಂತ್‌ರನ್ನು(Rishabh Pant) ಹೊರಗಿಡಲಾಗಿತ್ತು. ಈ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್‌ರನ್ನು(Dinesh Karthik) ಹೊರಗಿಟ್ಟು ಪಂತ್‌ರನ್ನು ಆಡಿಸಬಹುದು. ಜೊತೆಗೆ ತಂಡದ ಆಡಳಿತ ಇನ್ನಷ್ಟುಪ್ರಯೋಗಗಳನ್ನು ನಡೆಸಿದರೆ ಅಚ್ಚರಿಯಿಲ್ಲ.

ASIA CUP 2022: ಪಾಕ್‌ ವೇಗಿ ರೌಫ್‌ಗೆ ಆಟೋಗ್ರಾಫ್ ಜೆರ್ಸಿ ಗಿಫ್ಟ್‌ ನೀಡಿದ ವಿರಾಟ್ ಕೊಹ್ಲಿ..!

ಮತ್ತೊಂದೆಡೆ ಹಾಂಕಾಂಗ್‌ಗೆ(India vs Hong kong) ಟೂರ್ನಿಯಲ್ಲಿ ಇದು ಮೊದಲ ಪಂದ್ಯ. ಅರ್ಹತಾ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದು ಪ್ರಧಾನ ಸುತ್ತಿಗೇರಿತು. ಈ ವರೆಗೂ 52 ಟಿ20 ಪಂದ್ಯಗಳನ್ನು ಆಡಿದ್ದು 21ರಲ್ಲಿ ಗೆದ್ದರೆ, 31ರಲ್ಲಿ ಸೋಲು ಕಂಡಿದೆ. ತಂಡದಲ್ಲಿರುವ ಬಹುತೇಕ ಆಟಗಾರರು ಭಾರತ ಮತ್ತು ಪಾಕಿಸ್ತಾನ ಮೂಲದವರಾಗಿದ್ದಾರೆ.

ಇನ್ನು ಏಕದಿನ ಮಾದರಿಯಲ್ಲಿ ನಡೆದಿದ್ದ 2018ರ ಏಷ್ಯಾಕಪ್‌ನಲ್ಲಿ ಹಾಂಕಾಂಗ್‌, ಭಾರತಕ್ಕೆ ಉತ್ತಮ ಪೈಪೋಟಿ ನೀಡಿ ಕೇವಲ 26 ರನ್‌ಗಳ ಸೋಲು ಕಂಡಿತ್ತು. ಹೀಗಾಗಿ ಭಾರತ ಈ ಪಂದ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

Ind vs Pak ಬಾಬರ್ ಅಜಂ ಮಾಡಿದ ಒಂದು ತಪ್ಪನ್ನು ಗುರುತಿಸಿದ ಪಾಕ್ ಮಾಜಿ ಕ್ರಿಕೆಟ್..!

ಏಷ್ಯಾಕಪ್‌ನಲ್ಲಿ ಭಾರತ ಶುಭಾರಂಭ
ಬೌಲಿಂಗ್‌ನಲ್ಲಿ ಮಿಂಚಿ, ಬ್ಯಾಟಿಂಗ್‌ನಲ್ಲಿ ಸಾಧಾರಣ ಆಟ ಪ್ರದರ್ಶಿಸಿದ ಭಾರತ ಬದ್ಧವೈರಿ ಪಾಕಿಸ್ತಾನ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಮೂಲಕ ಭಾರತ 10 ತಿಂಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಅನುಭವಿಸಿದ್ದ ಟಿ20 ವಿಶ್ವಕಪ್‌ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು. ಈ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೊದಲು ಬ್ಯಾಟ್‌ ಮಾಡಿದ ಪಾಕ್‌ 19.5 ಓವರಲ್ಲಿ 147 ರನ್‌ಗೆ ಆಲೌಟಾಯಿತು. ರಿಜ್ವಾನ್‌ 43 ರನ್‌ ಗಳಿಸಿದರು. ಭುವನೇಶ್ವರ್‌ 26ಕ್ಕೆ 4, ಹಾರ್ದಿಕ್‌ 25ಕ್ಕೆ 3 ವಿಕೆಟ್‌ ಕಬಳಿಸಿದರು. ಸುಲಭ ಗುರಿಯನ್ನು ಬೆನ್ನತ್ತಲು ಭಾರತ 19 ಓವರ್‌ಗಳನ್ನು ತೆಗೆದುಕೊಂಡಿತು. ಕೊನೆ 3 ಓವರಲ್ಲಿ ಗೆಲ್ಲಲು 32 ರನ್‌ ಬೇಕಿತ್ತು. ಹಾರ್ದಿಕ್‌ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಜೋಡಿ 18ನೇ ಓವರಲ್ಲಿ 11 ರನ್‌, 19ನೇ ಓವರಲ್ಲಿ 14 ರನ್‌ ಚಚ್ಚಿ ಗೆಲುವಿನ ಹೊಸ್ತಿಲು ತಲುಪಿತು. ಜಡೇಜಾ 35 ರನ್‌ ಗಳಿಸಿ ಔಟಾದರೆ, ಹಾರ್ದಿಕ್‌ ಔಟಾಗದೆ 33(17 ಎಸೆತ) ರನ್‌ ಗಳಿಸಿದರು.

Follow Us:
Download App:
  • android
  • ios