ಕೆ ಎಲ್ ರಾಹುಲ್, ಕಮ್‌ಬ್ಯಾಕ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಬೆನ್ನಲ್ಲೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಪತಿ ಕೆ ಎಲ್ ರಾಹುಲ್ ಅವರ ಫೋಟೋದ ಜತೆಗೆ,"ಕಗ್ಗತ್ತಲು ರಾತ್ರಿ ಕೂಡಾ ಕೊನೆಯಾದ ಬಳಿಕ ಬೆಳಕು ಹರಿಯಲೇಬೇಕು. ನೀವೇ ನನಗೆ ಸರ್ವಸ್ವ. ಐ ಲವ್ ಯೂ" ಎಂದು ಆಥಿಯಾ ಶೆಟ್ಟಿ ಬರೆದುಕೊಂಡಿದ್ದಾರೆ.

ಬೆಂಗಳೂರು(ಸೆ.13): ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ಕೆ ಎಲ್ ರಾಹುಲ್, ಸಾಕಷ್ಟು ಸಮಯದ ಬಿಡುವಿನ ಬಳಿಕ ಟೀಂ ಇಂಡಿಯಾಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. 2023ರ ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡು, ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕೆಲವು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ರಾಹುಲ್, ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನ ಎದುರಿನ ಪಂದ್ಯದ ವೇಳೆ ಕಮ್‌ಬ್ಯಾಕ್ ಮಾಡಿದ್ದರು. ಪಾಕಿಸ್ತಾನ ಎದುರು ತಾವಾಡಿದ ಮೊದಲ ಪಂದ್ಯದಲ್ಲೇ ಅಜೇಯ ಶತಕ ಸಿಡಿಸುವ ಮೂಲಕ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. 

ಕೆ ಎಲ್ ರಾಹುಲ್, ಕಮ್‌ಬ್ಯಾಕ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಬೆನ್ನಲ್ಲೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಪತಿ ಕೆ ಎಲ್ ರಾಹುಲ್ ಅವರ ಫೋಟೋದ ಜತೆಗೆ,"ಕಗ್ಗತ್ತಲು ರಾತ್ರಿ ಕೂಡಾ ಕೊನೆಯಾದ ಬಳಿಕ ಬೆಳಕು ಹರಿಯಲೇಬೇಕು. ನೀವೇ ನನಗೆ ಸರ್ವಸ್ವ. ಐ ಲವ್ ಯೂ" ಎಂದು ಆಥಿಯಾ ಶೆಟ್ಟಿ ಬರೆದುಕೊಂಡಿದ್ದಾರೆ.

View post on Instagram

ಇನ್ನು ಆಥಿಯಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಆಥಿಯಾ ಶೆಟ್ಟಿ ಹಂಚಿಕೊಂಡಿರುವ ಪೋಸ್ಟ್‌ಗೆ 11 ಲಕ್ಷಕ್ಕೂ ಅಧಿಕ ಲೈಕ್‌ಗಳು ಬಂದಿವೆ. ಇನ್ನು ಆಥಿಯಾ ಶೆಟ್ಟಿ ಪೋಸ್ಟ್‌ಗೆ ಅವರ ತಂದೆ ಹಾಗೂ ಕೆ ಎಲ್ ರಾಹುಲ್ ಮಾವ ಹಾರ್ಟ್‌ ಎಮೋಜಿ ಪೋಸ್ಟ್ ಮಾಡಿದ್ದಾರೆ.

ಶತಕದೊಂದಿಗೆ ತಂಡಕ್ಕೆ ರಾಹುಲ್‌ ಕಮ್‌ಬ್ಯಾಕ್‌!

ಕೊಲಂಬೊ: ತಾರಾ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಭಾರತ ತಂಡಕ್ಕೆ ತಮ್ಮ ಕಮ್‌ಬ್ಯಾಕ್‌ ಅನ್ನು ಭರ್ಜರಿ ಶತಕದೊಂದಿಗೆ ಆಚರಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ ಸೂಪರ್‌-4 ಪಂದ್ಯದಲ್ಲಿ ರಾಹುಲ್‌ 106 ಎಸೆತದಲ್ಲಿ ಔಟಾಗದೆ 111 ರನ್‌ ಸಿಡಿಸಿ, ಏಕದಿನ ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.

'ಶಿಖರ್‌ ಭಾಯ್‌, 5G ಇಂಟರ್ನೆಟ್‌ ಯೂಸ್‌ ಮಾಡಿ..' ಸೋಶಿಯಲ್‌ ಮೀಡಿಯಾದಲ್ಲಿ ಧವನ್‌ ಫುಲ್‌ ಟ್ರೋಲ್‌!

ಐಪಿಎಲ್‌ ವೇಳೆ ತೊಡೆ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆ.ಎಲ್‌.ರಾಹುಲ್‌, ಏಷ್ಯಾಕಪ್‌ನ ಅಭ್ಯಾಸ ಶಿಬಿರದಲ್ಲಿ ಮತ್ತೆ ಸಣ್ಣ ಪ್ರಮಾಣದ ಗಾಯಕ್ಕೆ ಗುರಿಯಾಗಿದ್ದರು. ಇದರಿಂದಾಗಿ ಪಾಕಿಸ್ತಾನ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಸೂಪರ್‌-4 ಪಂದ್ಯದಲ್ಲಿ ರಾಹುಲ್‌ ತಮ್ಮ ನೈಜ ಆಟ ಪ್ರದರ್ಶಿಸಿದರು. ಭಾನುವಾರ ಔಟಾಗದೆ ಉಳಿದಿದ್ದ ರಾಹುಲ್‌, ಮೀಸಲು ದಿನವಾದ ಸೋಮವಾರ ಆಕ್ರಮಣಕಾರಿ ಆಟಕ್ಕಿಳಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, 2 ಸಿಕ್ಸರ್‌ಗಳಿದ್ದವು.

ಏಕದಿನ ಕ್ರಿಕೆಟ್‌ನಲ್ಲಿ 6ನೇ ಶತಕ ದಾಖಲಿಸಿದ ರಾಹುಲ್‌, ವಿರಾಟ್‌ ಕೊಹ್ಲಿ 3ನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದರು. ಶತಕದ ಸಿಡಿಸಿದ ಬಳಿಕ ರಾಹುಲ್‌ ಕೀಪಿಂಗ್‌ ಸಹ ಮಾಡಿ ತಾವು ಸಂಪೂರ್ಣ ಫಿಟ್‌ ಆಗಿರುವುದಾಗಿ ಸಾಬೀತು ಪಡಿಸಿದರು.