ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವು ಕಂಡ ಟಾಪ್ 6 ಕ್ರಿಕೆಟಿಗರಿವರು..! ಎಲೈಟ್ ಕ್ಲಬ್ ಸೇರಿದ ಕೊಹ್ಲಿ
ಬೆಂಗಳೂರು(ಸೆ.13): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಶ್ರೀಲಂಕಾ ಎದುರು ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸುವ ಮೂಲಕ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಜಯ ಕಂಡ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವಿನ ರುಚಿ ನೋಡಿದ ಟಾಪ್ 6 ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
6. ವಿರಾಟ್ ಕೊಹ್ಲಿ: 300 ಗೆಲುವು
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 505 ಪಂದ್ಯಗಳನ್ನಾಡಿ ಇದೀಗ 300 ಗೆಲುವಿನ ರುಚಿ ನೋಡಿದ್ದಾರೆ. ಈ ಮೂಲಕ 300 ಅಂತಾರಾಷ್ಟ್ರೀಯ ಗೆಲುವು ಕಂಡ ಜಗತ್ತಿನ 6ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
5. ಕುಮಾರ ಸಂಗಕ್ಕರ: 305 ಗೆಲುವು
ಶ್ರೀಲಂಕಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಕ್ಕರ 594 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 305 ಗೆಲುವುಗಳನ್ನು ಕಂಡಿದ್ದಾರೆ. ಈ ಮೂಲಕ ಸಂಗಾ 5ನೇ ಸ್ಥಾನ ಪಡೆದಿದ್ದಾರೆ.
4. ಜಾಕ್ ಕಾಲಿಸ್: 305 ಗೆಲುವು
ದಕ್ಷಿಣ ಆಫ್ರಿಕಾ ಕ್ರಿಕೆಟ್ ದಂತಕಥೆ ಜಾಕ್ ಕಾಲಿಸ್ 519 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 305 ಗೆಲುವುಗಳನ್ನು ಕಂಡಿದ್ದಾರೆ. ಈ ಮೂಲಕ ಹರಿಣಗಳ ಮಾಜಿ ಆಲ್ರೌಂಡರ್ 4ನೇ ಸ್ಥಾನ ಪಡೆದಿದ್ದಾರೆ.
3. ಸಚಿನ್ ತೆಂಡುಲ್ಕರ್: 307 ಗೆಲುವು
ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯ(664)ಗಳನ್ನಾಡಿದ ದಾಖಲೆ ಹೊಂದಿದ್ದಾರೆ. ಸಚಿನ್ 664 ಪಂದ್ಯಗಳ ಪೈಕಿ 307 ಪಂದ್ಯಗಳಲ್ಲಿ ಗೆಲುವಿನ ರುಚಿ ಕೊಂಡಿದ್ದಾರೆ.
2. ಮಹೆಲಾ ಜಯವರ್ಧನೆ: 336 ಗೆಲುವು
ಶ್ರೀಲಂಕಾ ಮಾಜಿ ನಾಯಕ ಮಹೆಲಾ ಜಯವರ್ಧನೆ 652 ಪಂದ್ಯಗಳನ್ನಾಡಿ 336 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದ್ದಾರೆ. ಈ ಮೂಲಕ ಅತಿಹೆಚ್ಚು ಗೆಲುವು ಕಂಡ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
1. ರಿಕಿ ಪಾಂಟಿಂಗ್: 377 ಗೆಲುವು
ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿರುವ ರಿಕಿ ಪಾಂಟಿಂಗ್ 560 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 377 ಗೆಲುವು ಕಂಡಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಪಾಂಟಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಈ ರೆಕಾರ್ಡ್ ಬ್ರೇಕ್ ಮಾಡ್ತಾರಾ ಎನ್ನುವುದನ್ನು ಕಾಮೆಂಟ್ ಮಾಡಿ.