Asianet Suvarna News Asianet Suvarna News

Asia Cup 2022: ಫೈನಲ್‌ನಲ್ಲಿ ಶ್ರೀಲಂಕಾಕ್ಕೆ ಆಸರೆಯಾದ ಭಾನುಕ!

ಈ ಬಾರಿಯ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತಂಡದ ಯಶ್ಸಸಿಗೆ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಕಾರಣವಾಗಿತ್ತು. ಶ್ರೀಲಂಕಾದ ಅಗ್ರ ಕ್ರಮಾಂಕವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪಾಕಿಸ್ತಾನದ ಬೌಲರ್‌ಗಳು ಯಶಸ್ಸು ಕಂಡಿದ್ದರು. ಆದರೆ, ಕೊನೇ ಹಂತದಲ್ಲಿ ಭಾನುಕ ರಾಜಪಕ್ಸ ಆಕರ್ಷಕ ಆಟವಾಡಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

Asia Cup 2022 Final Sri Lanka vs Pakistan Haris Rauf Shines with Bowling Bhanuka Rajapaksa hits fifty san
Author
First Published Sep 11, 2022, 9:23 PM IST

ದುಬೈ (ಸೆ. 11): ಅಗ್ರಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದ ನಡುವೆಯೂ ಶ್ರೀಲಂಕಾ ತಂಡ ಏಷ್ಯಾಕಪ್‌ ಟಿ20ಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಸವಾಲಿನ  ಗುರಿ ನೀಡಿದೆ. 58 ರನ್‌ಗೆ  5 ವಿಕೆಟ್‌ ಕಳೆದುಕೊಂಡು ಆಪತ್ತಿನಲ್ಲಿದ್ದ ತಂಡಕ್ಕೆ ಆಸರೆಯಾಗಿ ನಿಂತ ಭಾನುಕ ರಾಜಪಕ್ಸ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡ 150ಕ್ಕೂ ಆಧಿಕ ಮೊತ್ತವನ್ನು ಗಳಿಸಲು ನೆರವಾದರು. ಹ್ಯಾರಿಸ್‌ ರೌಫ್‌, ನಸೀಮ್‌ ಷಾ ಹಾಗೂ ಶಾಬಾದ್‌ ಖಾನ್‌ ನೇತೃತ್ವದಲ್ಲಿ ಘಾತಕ ದಾಳಿ ನಡೆಸಿದ ಪಾಕಿಸ್ತಾನ, ಶ್ರೀಲಂಕಾದ ಬ್ಯಾಟಿಂಗ್‌ ವಿಭಾಗವನ್ನು ಆರಂಭದಲ್ಲಿ ಕಟ್ಟಿಹಾಕಿತ್ತು. ಈ ಐವರ ಪೈಕಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ಔಟಾಗಿದ್ದರು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ ಭಾನುಕ ರಾಜಪಕ್ಸ (71*ರನ್‌, 45 ಎಸೆತ, 6 ಬೌಂಡರಿ, 3 ಸಿಕ್ಸರ್‌) ಬಾರಿಸಿದ ಅರ್ಧಶತಕದ ಸಾಹಸದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್‌ ಬಾರಿಸಿತು. 2022ರಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್‌ ಮಾಡಿದ 8 ಟಿ20 ಪಂದ್ಯಗಳ ಪೈಕಿ, ಕೇವಲ 2ನೇ ಬಾರಿ ಮಾತ್ರವೇ 150ಕ್ಕಿಂತ ಅಧಿಕ ಮೊತ್ತ ಪೇರಿಸಿದೆ. 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಭಾನುಕ ರಾಜಪಕ್ಸಗೆ ಪಾಕಿಸ್ತಾನ ತಂಡದ ಫೀಲ್ಡರ್‌ಗಳು ಕೆಲ ಜೀವದಾನವನ್ನೂ ನೀಡಿದರು. ಭಾನುಕ ಕೂಡ ಇದರ ಲಾಭವನ್ನು ಬಳಸಿಕೊಂಡು ಅರ್ಧಶತಕದ ಅಟವಾಡಿದರು.

ಶ್ರೀಲಂಕಾ ತಂಡದ ಚೇತರಿಕೆಯ ನೇತೃತ್ವ ವಹಿಸಿಕೊಂಡಿದ್ದ ಭಾನುಕ ರಾಜಪಕ್ಸ 6ನೇ ವಿಕೆಟ್‌ಗೆ ಹಸರಂಗ ಜೊತೆ 36 ಎಸೆತಗಳಲ್ಲಿ 58 (ರನ್‌ ಹಾಗೂ  ಚಾಮಿಕ ಕರುಣರತ್ನೆ ಜೊತೆ ಮುರಿಯದ 7ನೇ ವಿಕೆಟ್‌ಗೆ 31 ಎಸೆತಗಳಲ್ಲಿ 54 ರನ್‌ ಜೊತೆಯಾಟವಾಡಿದರು. ಈ ಎರಡು ಜೊತೆಯಾಟಗಳು ಶ್ರೀಲಂಕಾ ತಂಡದ ಅಭೂತಪೂರ್ವ ಚೇತರಿಕೆಗೆ ಕಾರಣವಾಯಿತು. ಅಂತಾರಾಷ್ಟ್ರೀಯ ಟಿ20ಯ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ 6 ಹಾಗೂ 7ನೇ ವಿಕೆಟ್‌ಗೆ 50 ಪ್ಲಸ್‌ ರನ್‌ಗಳ ಜೊತೆಯಾಟವಾಗಿರುವುದು ಇದೇ ಮೊದಲಾಗಿದೆ.

ಟಿ20 ವಿಶ್ವಕಪ್‌ಗೆ ಈ ವಾರ ತಂಡ ಆಯ್ಕೆ, ಫಿಟ್ನೆಸ್‌ ಟೆಸ್ಟ್‌ ಕ್ಲಿಯರ್‌ ಮಾಡಿದ ಬುಮ್ರಾ, ಹರ್ಷಲ್‌!

ರಾಜಪಕ್ಸ (Bhanuka Rajapaksa) ಹಾಗೂ ಹಸರಂಗ (Hasaranga) ಜೊತೆಯಾಟ ಬೇರ್ಪಟ್ಟ ಬಳಿಕ, ಕರುಣರತ್ನೆ (Chamika Karunaratne) ಜೊತೆಗೂಡಿ ರಾಜಪಕ್ಸ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು.  ಪಾಕಿಸ್ತಾನದ ಪರವಾಗಿ ಗಮನಸೆಳೆದ ಹ್ಯಾರಿಸ್‌ ರೌಫ್‌ ಮೂರು ಪ್ರಮುಖ ವಿಕೆಟ್‌ ಉರುಳಿಸಿದರು. ಪಾಕಿಸ್ತಾನ ಇನ್ನಷ್ಟು ಶಿಸ್ತಿನ ಫೀಲ್ಡಿಂಗ್‌ ಮಾಡಿದ್ದರೆ, ಹ್ಯಾರಿಸ್‌ ರೌಫ್‌ಗೆ (Haris Rauf) ಇನ್ನೂ ಕೆಲ ವಿಕೆಟ್‌ಗಳು ಸಿಗುವ ಸಾಧ್ಯತೆ ಇತ್ತು. ರಾಜಪಕ್ಸಗೆ ಇನ್ನಿಂಗ್ಸ್‌ನ ಕೊನೆಯಲ್ಲಿ ಎರಡು ಬಾರಿ ಪಾಕಿಸ್ತಾನ (Pakistan) ಜೀವದಾನ ನೀಡಿತು.

Duleep Trophy; ರಹಾನೆ, ಜೈಸ್ವಾಲ್‌ ಆಕರ್ಷಕ ದ್ವಿಶತಕ, ಪಶ್ವಿಮ ವಲಯ ಮುನ್ನಡೆ

ಬ್ಯಾಟಿಂಗ್‌ ಆರಂಭಿಸಿದ ಶ್ರೀಲಂಕಾ ತಂಡ ಮೊದಲ ಓವರ್‌ನಲ್ಲಿಯೇ ವಿಕೆಟ್‌ ಕಳೆದುಕೊಂಡಿತು. ನಸೀಮ್‌ ಷಾ ಎಸೆದ ಆಕರ್ಷಕ ಎಸೆತಕ್ಕೆ ಕುಸಲ್‌ ಮೆಂಡಿಸ್‌ ಶೂನ್ಯ ಸುತ್ತಿದರು. ಬಳಿಕ ಕ್ರೀಸ್‌ಗಳಿದ ಧನಂಜಯ ಡಿ ಸಿಲ್ವಾಗೆ ಸಾಥ್‌ ನೀಡಿದ ಪಥುಮ್‌ ನಿಸ್ಸಾಂಕ 4ನೇ ಓವರ್‌ನಲ್ಲಿ ನಿರ್ಗಮಿಸಿದರು. 11 ಎಸೆತಗಳನ್ನು ಎದುರಿಸಿದ ನಿಸ್ಸಾಂಕ 8 ರನ್‌ ಬಾರಿಸಿ ಔಟಾದರು. ಹ್ಯಾರಿಸ್‌ ರೌಫ್‌ ಈ ವಿಕೆಟ್‌ ಪಡೆದರು. 23 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಶ್ರೀಲಂಕಾ, ಈ ಮೊತ್ತಕ್ಕೆ 13 ರನ್‌ ಸೇರಿಸುವ ವೇಳೆಗೆ ಗುಣತಿಲಕ ಕೂಡ ನಿರ್ಗಮಿಸಿದರು. 21 ಎಸೆತಗಳಲ್ಲಿ ಬಿರುಸಿನ 28 ರನ್‌ ಬಾರಿಸಿದ್ದ ಧನಂಜಯ ಡಿ ಸಿಲ್ವಾ ಹಾಗೂ ನಾಯಕ ದಸುನ್‌ ಶನಕ 4 ರನ್‌ಗಳ ಅಂತರದಲ್ಲಿ ಔಟಾಗುವುದರೊಂದಿಗೆ ಶ್ರೀಲಂಕಾ 58 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

Follow Us:
Download App:
  • android
  • ios