Asianet Suvarna News Asianet Suvarna News

ಟಿ20 ವಿಶ್ವಕಪ್‌ಗೆ ಈ ವಾರ ತಂಡ ಆಯ್ಕೆ, ಫಿಟ್ನೆಸ್‌ ಟೆಸ್ಟ್‌ ಕ್ಲಿಯರ್‌ ಮಾಡಿದ ಬುಮ್ರಾ, ಹರ್ಷಲ್‌!

ಈ ವರ್ಷ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ವಿಶ್ವಕಪ್‌ಗೆ ಭಾರತ ತಂಡವನ್ನು ಈ ವಾರ ಪ್ರಕಟ ಮಾಡುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಯಶಸ್ವಿ ಆಪರೇಷನ್‌ ಕೂಡ ಆಗಿದೆ.
 

Ravindra Jadeja out of the World Cup Now Team India needs option Jasprit Bumrah and Harshal Patel  Fit san
Author
First Published Sep 11, 2022, 3:55 PM IST

ಮುಂಬೈ (ಸೆ. 11): ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ಭಾರತ ತಂಡವನ್ನು ಈ ವಾರ ಪ್ರಕಟ ಮಾಡುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಪಾಲಿಗೆ ಒಂದು ಶುಭಸುದ್ದಿ ಹಾಗೂ ಒಂದು ಕೆಟ್ಟ ಸುದ್ದಿ ಸಿಕ್ಕಿದೆ. ಒಳ್ಳೆಯ ಸುದ್ದಿ ಏನೆಂದರೆ ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಟಿ20 ವಿಶ್ವಕಪ್‌ಗೆ ಇವರು ತಂಡಕ್ಕೆ ಸೇರುವ ಸಾಧ್ಯತೆ ಇದೆ. ಈ ನಡುವೆ ಗಾಯಾಳು ಆಲ್ರೌಂಡರ್‌ ರವೀಂದ್ರ ಜಡೇಜಾ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ ಎನ್ನುವ  ಸುದ್ದಿ ಕೂಡ ಸಿಕ್ಕಿದೆ. ಇನ್‌ಸೈಡ್‌ ಸ್ಪೋರ್ಟ್ಸ್ ಈ ಸುದ್ದಿಯನ್ನು ಪ್ರಕಟಿಸಿದೆ. ಜಡೇಜಾಗೆ ಬಲಕಾಲಿನ ನೋವಾಗಿದ್ದಯ, ಇದಕ್ಕಾಗಿ ಅವರಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವ ಬಗ್ಗೆ ಸ್ವತಃ ಜಡೇಜಾ ಕೂಡ ಇನ್ಸ್‌ಟಾಗ್ರಾಮ್‌ ಪೋಸ್ಟ್‌ ಮೂಲಕ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ಆಗಿರುವ ಕಾರಣಕ್ಕೆ ಅವರು ವಿಶ್ವಕಪ್‌ ವೇಳೆಗೆ ಫಿಟ್‌ ಆಗುವ ಸಾಧ್ಯತೆ ಕಡಿಮೆ ಇರುವ ಕಾರಣ ವಿಶ್ವಕಪ್‌ನಿಂದ ಹೊರಬಿದ್ದದ್ದಾರೆ. ಕೆಲವು ದಿನಗಳ ಹಿಂದೆ ಜಡೇಜಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶಸ್ತ್ರಚಿಕಿತ್ಸೆಯ ನಂತರದ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಶಸ್ತ್ರಚಿಕಿತ್ಸೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಮೈದಾನಕ್ಕೆ ಮರಳಲು ಪ್ರಯತ್ನಿಸುತ್ತೇನೆ ಎಂದು ಜಡೇಜಾ ಹೇಳಿದ್ದಾರೆ.

‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ’ ಎಂದು ಫೋಟೋ ಸಹಿತ ಶೀರ್ಷಿಕೆಯಲ್ಲಿ ಜಡೇಜಾ ಬರೆದುಕೊಂಡಿದ್ದಾರೆ. ಅನೇಕ ಜನರು ನನಗೆ ಬೆಂಬಲಿಸಿದ್ದಾರೆ ಇದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದರಲ್ಲಿ ಬಿಸಿಸಿಐ, ನನ್ನ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ಫಿಸಿಯೋ, ವೈದ್ಯರು ಮತ್ತು ಅಭಿಮಾನಿಗಳೂ ಸೇರಿದ್ದಾರೆ. ನಾನು ಶೀಘ್ರದಲ್ಲೇ ನನ್ನ ಪುನಃಶ್ಚೇತನ ಶಿಬಿರದಲ್ಲಿ ಭಾಗವಹಿಸುತ್ತೇನೆ.ಸಾಧ್ಯವಾದಷ್ಟು ಬೇಗ ಕ್ರಿಕೆಟ್ ಮೈದಾನಕ್ಕೆ ಮರಳಲು ಪ್ರಯತ್ನಿಸುತ್ತೇನೆ. ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಬರೆದಿದ್ದಾರೆ. ಆದಾಗ್ಯೂ, ಇದು 'ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ (SAL)' ಪ್ರಕರಣವೇ ಅಥವಾ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಹಾಗೇನಾದರೂ ಜಡೇಜಾಗೆ ಆಗಿರುವ ಗಾಯ ಎಸ್‌ಎಎಲ್‌ ಆಗಿದ್ದಲ್ಲಿ, ಅವರ ಚೇತರಿಕೆಗೆ ಕನಿಷ್ಠ 6 ತಿಂಗಳು ಬೇಕಾಗಲಿದೆ.

ಜಡೇಜಾಗೆ ಮೊಣಕಾಲಿನ ಸಮಸ್ಯೆ ಬಹಳ ದಿನಗಳಿಂದ ಕಾಡುತ್ತಿದೆ. ರವೀಂದ್ರ ಜಡೇಜಾ ಅವರು ಏಷ್ಯಾ ಕಪ್‌ಗೆ ಮೊದಲು ಐಪಿಎಲ್ 2022 ರ ಸಮಯದಲ್ಲೂ ಗಾಯಗೊಂಡಿದ್ದರು, ಇದರಿಂದಾಗಿ ಅವರು ಕೆಲವು ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ನಂತರ ಜಡೇಜಾ ಇಂಗ್ಲೆಂಡ್ ಪ್ರವಾಸದ ಮೂಲಕ ಮೈದಾನಕ್ಕೆ ಮರಳಿದರು. ಅಂದಿನಿಂದ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದೀಗ ಅವರು ತಂಡದಿಂದ ಹೊರಗುಳಿದಿರುವುದು ಟೀಂ ಇಂಡಿಯಾಗೆ ದೊಡ್ಡ ಪೆಟ್ಟು ನೀಡಿದಂತಾಗಿದೆ.

ರವೀಂದ್ರ ಜಡೇಜಾ ಬದಲಿಗೆ ವಿಶ್ವಕಪ್‌ಗೆ ಬದಲಿ ಆಯ್ಕೆಗಳು
ಅಕ್ಷರ್ ಪಟೇಲ್:
ಜಡೇಜಾ ಬದಲಿಗೆ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ಮೊದಲ ಆಯ್ಕೆ ಎಂದು ಪರಿಗಣಿಸಲಾಗಿದೆ. ಅಕ್ಷರ್ ಇದಕ್ಕೂ ಮುನ್ನ 2015ರ ವಿಶ್ವಕಪ್ ಕೂಡ ಆಡಿದ್ದರು.

Ravindra Jadeja Injury ಟೀಂ ಇಂಡಿಯಾಗೆ ಬಿಗ್ ಶಾಕ್, ಟಿ20 ವಿಶ್ವಕಪ್ ಟೂರ್ನಿಯಿಂದ ಜಡೇಜಾ ಔಟ್!

ವಾಷಿಂಗ್ಟನ್ ಸುಂದರ್: ಈ ಸ್ಟಾರ್ ಸ್ಪಿನ್ ಆಲ್ ರೌಂಡರ್ ಕೂಡ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಏಷ್ಯಾಕಪ್‌ಗೂ ಮುನ್ನ ನಡೆದ ಜಿಂಬಾಬ್ವೆ ಪ್ರವಾಸಕ್ಕೆ ವಾಷಿಂಗ್ಟನ್‌ ಸುಂದರ್‌ ತೆರಳಬೇಕಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಹೊರಹಗುಳಿದಿದ್ದರು.ಅವರಿಗೆ ಈಗ ಮತ್ತೊಮ್ಮೆ ಅವಕಾಶ ಸಿಗಬಹುದು.

Asia Cup: ಏಷ್ಯಾಕಪ್‌ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಅಕ್ಸರ್‌ ಪಟೇಲ್‌ಗೆ ಬುಲಾವ್‌!

ಶಹಬಾಜ್ ಅಹ್ಮದ್:
ಶಹಬಾಜ್‌ಗೆ ಆಯ್ಕೆ ಅವಕಾಶ ಕಡಿಮೆ ಅಲ್ಲದೆ, ಅಂತಾರಾಷ್ಟ್ರೀಯ ಪಂದ್ಯಗಳ ಅನುಭವವಿಲ್ಲ.. ಜಿಂಬಾಬ್ವೆ ಪ್ರವಾಸಕ್ಕಾಗಿ ಆಲ್‌ರೌಂಡರ್ ಶಹಬಾಜ್ ಅವರನ್ನು ತಂಡಕ್ಕೆ ಸೇರಿಸಲಾಗಿತ್ತು. ಆದರೆ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಆದರೆ, ಐಪಿಎಲ್‌ನಲ್ಲಿ ಶಹಬಾಜ್‌ ಅದ್ಭುತ ಪ್ರದರ್ಶನ ನೀಡಿದ್ದಾರೆ.

Follow Us:
Download App:
  • android
  • ios