Duleep Trophy; ರಹಾನೆ, ಜೈಸ್ವಾಲ್‌ ಆಕರ್ಷಕ ದ್ವಿಶತಕ, ಪಶ್ವಿಮ ವಲಯ ಮುನ್ನಡೆ

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಕರ್ಷಕ ದ್ವಿಶತಕ ಚಚ್ಚಿದ ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್
ಈಶಾನ್ಯ ವಲಯ ವಿರುದ್ದ ಪಶ್ಚಿಮ ವಲಯದ ಬಿಗಿ ಹಿಡಿತ
ಪಶ್ವಿಮ ವಲಯ ಕೇವಲ 2 ವಿಕೆಟ್‌ಗೆ 590 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌

Duleep Trophy Ajinkya Rahane Yashasvi hit double hundreds as West Zone take control over North East Zone on Day 2 kvn

ಪುದುಚೇರಿ(ಸೆ.11): ಯಶಸ್ವಿ ಜೈಸ್ವಾಲ್‌(228) ಹಾಗೂ ಅಜಿಂಕ್ಯಾ ರಹಾನೆ(ಔಟಾಗದೆ 207) ದ್ವಿಶತಕದ ನೆರವಿನಿಂದ ಈಶಾನ್ಯ ವಲಯ ವಿರುದ್ಧದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಪಶ್ವಿಮ ವಲಯ ದೊಡ್ಡ ಮುನ್ನಡೆ ಗಳಿಸಿದೆ. ಮೊದಲು ಬ್ಯಾಟ್‌ ಮಾಡಿದ ಪಶ್ವಿಮ ವಲಯ ಕೇವಲ 2 ವಿಕೆಟ್‌ಗೆ 590 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಈಶಾನ್ಯ ವಲಯ 235ಕ್ಕೆ ಆಲೌಟಾಯಿತು. ಈಶಾನ್ಯ ವಲಯ 2ನೇ ಇನ್ನಿಂಗ್‌್ಸ ಆರಂಭಿಸಿದ್ದು, 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 12 ರನ್‌ ಗಳಿಸಿ 367 ರನ್‌ಗಳ ದೊಡ್ಡ ಮುನ್ನಡೆಯಲ್ಲಿದೆ.

ಮತ್ತೊಂದು ಕ್ವಾರ್ಟರ್‌ ಪಂದ್ಯದಲ್ಲಿ ಪೂರ್ವ ವಲಯದ ವಿರುದ್ಧ ಉತ್ತರ ವಲಯ ಮೇಲುಗೈ ಸಾಧಿಸಿದೆ. ಪೂರ್ವ ವಲಯ ಮೊದಲ ಇನ್ನಿಂಗ್‌್ಸನಲ್ಲಿ 397ಕ್ಕೆ ಆಲೌಟಾಗಿದ್ದು, ಉತ್ತರ ವಲಯ 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 433 ರನ್‌ ಗಳಿಸಿ 36 ರನ್‌ ಮುನ್ನಡೆ ಗಳಿಸಿದೆ. 19 ವರ್ಷದ ಯಶ್‌ ಧುಳ್‌ 193 ರನ್‌ ಸಿಡಿಸಿದರು.

‘ಎ’ ತಂಡಗಳ ಟೆಸ್ಟ್‌: 3ನೇ ದಿನ ಮಳೆಗೆ ಆಹುತಿ

ಹುಬ್ಬಳ್ಳಿ: ಭಾರತ ‘ಎ’ ಹಾಗೂ ನ್ಯೂಜಿಲೆಂಡ್‌ ‘ಎ’ ತಂಡಗಳ ನಡುವಿನ ಅನಧಿಕೃತ ಟೆಸ್ಟ್‌ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದ್ದು, 3ನೇ ದಿನವಾದ ಶನಿವಾರ ಒಂದೂ ಓವರ್‌ ಎಸೆಯದೆ ದಿನದಾಟ ಕೊನೆಗೊಂಡಿದೆ. ನಾಲ್ಕು ದಿನಗಳ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿಯಾಗಿತ್ತು. 

ವಿರಾಟ್ ಕೊಹ್ಲಿ vs ಬಾಬರ್ ಅಜಂ ಇಬ್ಬರಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹೆಸರಿಸಿದ ಸನತ್ ಜಯಸೂರ್ಯ..!

ಎರಡನೇ ದಿನ ಪಂದ್ಯ ಆರಂಭಗೊಂಡರೂ ಪದೇ ಪದೇ ಮಳೆ ಅಡ್ಡಿಪಡಿಸಿದ್ದರಿಂದ 66 ಓವರ್‌ಗಳಷ್ಟೇ ಎಸೆಯಲು ಸಾಧ್ಯವಾಗಿತ್ತು. ಬ್ಯಾಟಿಂಗ್‌ ನಡೆಸುತ್ತಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 6ವಿಕೆಟ್‌ ಕಳೆದುಕೊಂಡು 229 ರನ್‌ ಗಳಿಸಿತ್ತು. ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್‌(74) ಹಾಗೂ ರಾಹುಲ… ಚಾಹರ್‌ (4) ಕ್ರೀಸ್‌ ಕಾಯ್ದುಕೊಂಡಿದ್ದಾರೆ. ನಾಯಕ ಪ್ರಿಯಾಂಕ್‌ ಪಾಂಚಾಲ್‌ 87 ರನ್‌ ಗಳಿಸಿದ್ದಾರೆ.

3ನೇ ಟೆಸ್ಟ್‌: ದ ಆಫ್ರಿಕಾ 118 ರನ್‌ಗೆ ಆಲೌಟ್‌

ಲಂಡನ್‌: ಇಂಗ್ಲೆಂಡ್‌ ವಿರುದ್ಧದ 3ನೇ ಹಾಗೂ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 118 ರನ್‌ಗೆ ಆಲೌಟಾಗಿದೆ. ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಪ್ರವಾಸಿ ತಂಡ ವೇಗಿಗಳ ಮಾರಕ ದಾಳಿಗೆ ಆರಂಭದಲ್ಲೇ ಕುಸಿಯಿತು. 36 ರನ್‌ ಗಳಿಸುವಷ್ಟರಲ್ಲೇ 6 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಮಾರ್ಕೊ ಯಾನ್ಸೆನ್‌(30), ಖಾಯ ಜೊಂಡೊ(23) ಆಸರೆಯಾದರು. ರಾಬಿನ್ಸನ್‌ 5, ಬ್ರಾಡ್‌ 4 ವಿಕೆಟ್‌ ಕಿತ್ತರು. 

ಬಳಿಕ ಇನ್ನಿಂಗ್‌್ಸ ಆರಂಭಿಸಿದ ಇಂಗ್ಲೆಂಡ್‌  ಮೂರನೇ ದಿನದಾಟದಂತ್ಯಕ್ಕೆ 7 ವಿಕೆಟ್‌ಗೆ 154 ರನ್‌ ಗಳಿಸಿದೆ. ಓಲಿ ಪೋಪ್‌ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ದಿನದಾಟದಂತ್ಯದ ವೇಳೆಗೆ ಆತಿಥೇಯ ಇಂಗ್ಲೆಂಡ್ ತಂಡವು ಒಟ್ಟಾರೆ 36 ರನ್‌ಗಳ ಮುನ್ನಡೆ ಸಾಧಿಸಿದ್ದು, ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್‌(11) ಹಾಗೂ ವೇಗಿ ಓಲಿ ರಾಬಿನ್‌ಸನ್(3) ನಾಲ್ಕನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios