ರಣಜಿ ಟ್ರೋಫಿ ಟೂರ್ನಿಯಲ್ಲಿ ಹರ್ಯಾಣದ ಅನ್ಶುಲ್ ಕಾಂಬೋಜ್ ಟೆಸ್ಟ್‌ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ ಹತ್ತು ವಿಕೆಟ್ ಕಬಳಿಸಿ ಅಪರೂಪದ ಸಾಧನೆ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಲಾಹ್ಲಿ(ಹರ್ಯಾಣ): ಹರ್ಯಾಣದ ಯುವ ವೇಗಿ ಅನ್ಶುಲ್ ಕಾಂಬೋಜ್ ರಣಜಿ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕೇರಳ ವಿರುದ್ಧ ಪಂದ್ಯದಲ್ಲಿ ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ಗಳನ್ನು ಅನ್ಶುಲ್ ಪಡೆದಿದ್ದು, ಟೂರ್ನಿಯ ಇತಿಹಾಸದಲ್ಲೇ ಈ ಸಾಧನೆ ಮಾಡಿದ 3ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಮೊದಲ ದಿನ 8 ವಿಕೆಟ್ ಕಿತ್ತಿದ್ದ 23 ವರ್ಷದ ಅನ್ಸುಲ್, ಶುಕ್ರವಾರ ಉಳಿದ ಎರಡೂ ವಿಕೆಟ್‌ಗಳನ್ನು ಎಗರಿಸಿದರು. ಅವರು 30.1 ಓವರ್‌ ಎಸೆದು 49 ರನ್ ನೀಡಿದರು. ಇದಕ್ಕೂ ಮುನ್ನ 1956ರಲ್ಲಿ ಬೆಂಗಾಲ್‌ನ ಪ್ರೇಮಾನ್ನು ಚಟರ್ಜಿ, ಅಸ್ಸಾಂ ವಿರುದ್ಧ ಹಾಗೂ 1985ರಲ್ಲಿ ರಾಜಸ್ಥಾನದ ಪ್ರದೀಪ್ ಸುಂದರಮ್, ವಿದರ್ಭ ವಿರುದ್ದ ಪಂದ್ಯದಲ್ಲಿ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್ ಪಡೆದಿದ್ದರು.

ಸಂಜು ವರ್ಮಾ, ತಿಲಕ್ ವರ್ಮಾ ಸ್ಪೋಟಕ ಸೆಂಚುರಿ: ಭಾರತದ ಮುಡಿಗೆ ಟಿ20 ಸರಣಿ

ಅನ್ಶುಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 6ನೇ ಬೌಲರ್. ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ, ಸುಭಾಶ್ ಗುಪ್ತೆ ಹಾಗೂ ದೇಬಾಶಿಶ್ ಮೋಹಂತಿ ಕೂಡಾ ಇನ್ನಿಂಗ್ಸ್‌ನ 10 ವಿಕೆಟ್ ಪಡೆದಿದ್ದಾರೆ. ಕುಂಬ್ಳೆ 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಬಾಂಬೆ ತಂಡದ ಸುಭಾಶ್ 1954-55ರಲ್ಲಿ ಪಾಕಿಸ್ತಾನ ಸರ್ವಿಸಸ್ ಹಾಗೂ ಬಹವಾಸ್ಪುರ ಗಿಐ ವಿರುದ್ದ 3 ದಿನಗಳ ಪಂದ್ಯದಲ್ಲಿ 10 ವಿಕೆಟ್ ಪಡೆದಿದ್ದರು. ದೇಬಾಶಿಶ್ 2000 -01ರಲ್ಲಿ ದುಲೀಪ್ ಟ್ರೋಫಿ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಪಂದ್ಯದಲ್ಲಿ ಪೂರ್ವ ವಲಯ ಪರ 10 ವಿಕೆಟ್ ಕಿತ್ತಿದ್ದರು.

ರಣಜಿ ಟ್ರೋಫಿ: ರಾಜ್ಯದ ವಿರುದ್ಧ ಉತ್ತರ ಪ್ರದೇಶ ದಿಟ್ಟ ಹೋರಾಟ

ಲಖನೌ: ಕರ್ನಾಟಕ ವಿರುದ್ಧ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ ದಿಟ್ಟ ಹೋರಾಟ ಪ್ರದರ್ಶಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್‌ ಹಿನ್ನಡೆ ಅನುಭವಿಸಿದ್ದ ಉತ್ತರ ಪ್ರದೇಶ, 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 325 ರನ್‌ ಕಲೆಹಾಕಿದ್ದು, 139 ರನ್‌ ಮುನ್ನಡೆಯಲ್ಲಿದೆ.

2ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 78 ರನ್‌ ಕಲೆಹಾಕಿದ್ದ ಉತ್ತರ ಪ್ರದೇಶ, ಶುಕ್ರವಾರ ಅಭೂತಪೂರ್ಪ ಬ್ಯಾಟಿಂಗ್‌ ಪ್ರದರ್ಶನ ನೀಡಿತು. 2ನೇ ವಿಕೆಟ್‌ಗೆ ಆರ್ಯನ್‌ ಜುಯಲ್‌ ಹಾಗೂ ಮಾಧವ್‌ ಕೌಶಿಕ್‌ 246 ರನ್‌ (493 ಎಸೆತ) ಜೊತೆಯಾಟವಾಡಿದರು. ಇಬ್ಬರೂ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ನೆರವಾದರು. ನಾಯಕ ಆರ್ಯನ್‌ 109 ರನ್‌ಗೆ ಔಟಾದರೆ, ಮಾಧವ್‌ 134 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಸಮೀರ್ ರಿಜ್ವಿ 30 ರನ್‌ ಕೊಡುಗೆ ನೀಡಿದರು.

ರಣಜಿ ಟ್ರೋಫಿ: ಶ್ರೀಜಿತ್‌ ಭರ್ಜರಿ ಶತಕ, ಕರ್ನಾಟಕ ತಂಡ ಮೇಲುಗೈ

254ಕ್ಕೆ ಒಂದೇ ವಿಕೆಟ್‌ ಕಳೆದುಕೊಂಡಿದ್ದ ತಂಡ ಮಾಧವ್‌ ನಿರ್ಗಮನದ ಬಳಿಕ ಕುಸಿತಕ್ಕೊಳಗಾಯಿತು. ತಂಡ 66 ರನ್‌ ಅಂತರದಲ್ಲಿ 4 ವಿಕೆಟ್‌ ಕಳೆದುಕೊಂಡಿತು. ಸದ್ಯ ಆದಿತ್ಯ ಶರ್ಮಾ(ಔಟಾಗದೆ 24) ಹಾಗೂ ಕೃತಗ್ಯ ಸಿಂಗ್‌(ಔಟಾಗದೆ 5) 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊಹ್ಸಿನ್ ಖಾನ್‌, ಶ್ರೇಯಸ್‌ ಗೋಪಾಲ್‌ ತಲಾ 2 ವಿಕೆಟ್‌ ಪಡೆದರು.

ಶನಿವಾರ ಪಂದ್ಯದ ಕೊನೆ ದಿನವಾಗಿದ್ದು, ಎದುರಾಳಿ ತಂಡದ ಕೊನೆ 5 ವಿಕೆಟ್‌ಗಳನ್ನು ಬೇಗನೇ ಉರುಳಿಸಿ ಸುಲಭ ಗುರಿ ಪಡೆಯುವ ಮೂಲಕ ಕರ್ನಾಟಕ ತಂಡ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ.

ಸ್ಕೋರ್: ಉ.ಪ್ರದೇಶ 89 ಹಾಗೂ 325/5(3ನೇ ದಿನದಂತ್ಯಕ್ಕೆ) (ಮಾಧವ್‌ 134, ಆರ್ಯನ್‌ 109, ಮೊಹ್ಸಿನ್‌ 2-70, ಶ್ರೇಯಸ್‌ 2-83), ಕರ್ನಾಟಕ 275/10