ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಹಾಗೂ ಕೊನೆಯ  ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ಸರಣಿಯನ್ನು 3-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ

ಜೋಹಾನ್ಸ್‌ಬರ್ಗ್: ಡರ್ಬನ್, ಸೆಂಚೂರಿಯನ್ ಬಳಿಕ ಜೋಹಾನ್ಸ್‌ ಬರ್ಗ್‌ನಲ್ಲೂ ಭಾರತೀಯ ಬ್ಯಾಟರ್‌ಗಳುಸಿಡಿದೆದ್ದಿದ್ದಾರೆ. ತಿಲಕ್ ವರ್ಮಾ-ಸಂಜು ಸ್ಯಾಮನ್ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದು, ಬೌಲರ್ ಗಳೂ ಪರಾಕ್ರಮ ಮೆರೆದಿದ್ದಾರೆ. ಪರಿಣಾಮ ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಭಾರತ 135 ರನ್ ಗೆಲುವು ಸಾಧಿಸಿದ್ದು, 4 ಪಂದ್ಯಗಳ ಸರಣಿಯನ್ನು 3-1 ಕೈವಶಪಡಿಸಿಕೊಂಡಿತು. 

ರನ್ ಮಳೆಗೆ ಸಾಕ್ಷಿಯಾದ ಪಂದ್ಯದಲ್ಲಿ ಭಾರತ 1 ವಿಕೆಟ್‌ಗೆ 283 ರನ್ ಕಲೆಹಾಕಿತು. ಇದು ಭಾರತದ 2ನೇ, ಒಟ್ಟಾರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಂಡ ವೊಂದರ 5ನೇ ಗರಿಷ್ಠ. ಇತ್ತೀಚೆಗಷ್ಟೇ ಗಾಂಬಿಯಾ ವಿರುದ್ಧ ಜಿಂಬಾಬ್ವೆ 344 ರನ್ ಕಲೆಹಾಕಿತ್ತು. ಬಾಂಗ್ಲಾ ವಿರುದ್ದ 297 ರನ್ ಗಳಿಸಿದ್ದು ಭಾರತದ ಗರಿಷ್ಠ.

ದೀಪಾವಳಿ ಪಟಾಕಿ ನೆನಪಿಸಿದ ಬ್ಯಾಟಿಂಗ್, ಸಂಜು -ತಿಲಕ್ ವರ್ಮಾ ಸೆಂಚುರಿಯಿಂದ 284 ರನ್ ಟಾರ್ಗೆಟ್!

ಸಂಜು ಅಂ.ರಾ. ಟಿ20ಯಲ್ಲಿ 3ನೇ ಹಾಗೂ ಈ ಸರಣಿಯಲ್ಲಿ 2ನೇ ಶತಕ ಪೂರ್ಣಗೊಳಿಸಿದರು. 56 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 109 ರನ್ ಸಿಡಿಸಿದರು. ತಿಲಕ್ ವರ್ಮಾ ಸತತ 2ನೇ ಶತಕ ಸಿಡಿಸಿದರು. 47 ಎಸೆತಗಳಲ್ಲಿ 9 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ ಅಜೇಯ 120 ರನ್‌ ಚಚ್ಚಿದರು. ಇವರಿಬ್ಬರ ನಡುವೆ ಮುರಿಯದ 2ನೇ ವಿಕೆಟ್‌ಗೆ 210 ರನ್‌ ಹರಿದುಬಂತು.

Scroll to load tweet…

ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. 18.2 ಓವರಲ್ಲಿ 148 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸ್ಟಬ್ಸ್ (43), ಮಿಲ್ಲರ್ (36) ಹೋರಾಟ ತಂಡದ ಕೈ ಹಿಡಿಯಲಿಲ್ಲ. ಆರಂಭಿಕ ಸ್ಟೆಲ್‌ನಲ್ಲೇ ದ.ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಅರ್ಶ್‌ದೀಪ್ ಸಿಂಗ್ 3 ವಿಕೆಟ್ ಕಿತ್ತರು. 

ಐಪಿಎಲ್ ಮೆಗಾ ಹರಾಜಿನಲ್ಲಿದ್ದಾರೆ ಟಾಪ್ 5 ಮ್ಯಾಚ್ ಫಿನಿಶರ್ಸ್‌! ಇಬ್ಬರ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಸ್ಕೋರ್: ಭಾರತ 20 ಓವರಲ್ಲಿ 283/1 (ತಿಲಕ್ 120, ಸಂಜು 109, ಸಿಪಾಮ್ಲ 1-58), ದ.ಆಫ್ರಿಕಾ 18.2 ಓವರಲ್ಲಿ 148/10 (ಸ್ಟಬ್ಸ್ 43, ಮಿಲ್ಲರ್ 36,
ಅರ್ಶ್‌ದೀಪ್ 3-20)

ಒಂದೇ ಇನ್ನಿಂಗ್ಸ್‌ನಲ್ಲಿ 2 ಶತಕ: ಇದು 3ನೇ ಸಲ

ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ನಲ್ಲಿ ತಂಡವೊಂದರ ಪರ ಇಬ್ಬರು ಶತಕ ಬಾರಿಸಿದ್ದು ಇದು ಮೂರನೇ ಬಾರಿ. 2022ರಲ್ಲಿ ಬಲ್ಲೇರಿಯಾ ವಿರುದ್ಧ ಚೆಕ್ ಗಣರಾಜ್ಯದ ಸಬಾವುನ್ ಡೇವಿಜಿ, ಡೈಲನ್ ಸ್ಟೇಟ್ಸ್, ಕಳೆದ ಫೆಬ್ರವರಿಯಲ್ಲಿ ಚೀನಾ ವಿರುದ್ಧ ನಡೆದ ಪಂದ್ಯದಲ್ಲಿ ಜಪಾನ್‌ನ ಯಮಮೊಟೊ ಲೇಕ್ -ಕೆಂಡೆಲ್ ಪ್ಲೆಮಿಂಗ್ ಶತಕ ಬಾರಿಸಿದ್ದರು.

Scroll to load tweet…

ಸತತ 2 ಟಿ20 ಸೆಂಚುರಿ: ತಿಲಕ್ 2ನೇ ಭಾರತೀಯ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ 5ನೇ ಹಾಗೂ ಭಾರತದ 2ನೇ ಬ್ಯಾಟರ್ ತಿಲಕ್, ಸ್ಯಾಟ್ಸನ್, ಫ್ರಾನ್ಸ್‌ನ ಗುಸ್ಟವ್ ಮೆಕೋನ್, ದ.ಆಫ್ರಿಕಾದ ರಿಲೀ ರೋಸ್, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಕೂಡಾ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. 

ವರ್ಷದಲ್ಲಿ 3 ಟಿ20 ಶತಕ: ಸ್ಯಾಮ್ಯನ್ ದಾಖಲೆ

ಸಂಜು ಸ್ಯಾನ್ಸನ್ ಈ ವರ್ಷ ಅಂ.ರಾ. ಟಿ20 ಕ್ರಿಕೆಟ್‌ನಲ್ಲಿ 3ನೇ ಶತಕ ಬಾರಿಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಅವರ ಮೂರು ಶತಕಗಳು ಕೇವಲ 5 ಇನ್ನಿಂಗ್ಸ್ ಅಂತರದಲ್ಲಿ ದಾಖಲಾಗಿವೆ ಎಂಬುದು ಗಮನಾರ್ಹ.