ಏನ್ ದುರಂತ ಇದು..! ಪಾಕ್‌ನ 2 ಕ್ರೀಡಾಂಗಣದಲ್ಲಿ ಬಾಡಿಗೆ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಿರುವ ಪಿಸಿಬಿ!

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆಯೋಜನೆಗೆ ಸಾಕಷ್ಟು ಪರದಾಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದೀಗ ಕರಾಚಿ ಹಾಗೂ ಲಾಹೋರ್‌ಗೆ ಬೇಕಾದ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ಪಡೆಯಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ICC Champions Trophy 2025 PCB to rent light towers for stadiums in Lahore and Karachi kvn

ಕರಾಚಿ: 2025ರ ಚಾಂಪಿಯನ್‌ ಟ್ರೋಫಿಗಾಗಿ ತನ್ನ ಕ್ರೀಡಾಂಗಣಗಳನ್ನು ಸಿದ್ಧಪಡಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ), ಕರಾಚಿ ಹಾಗೂ ಲಾಹೋರ್‌ ಕ್ರೀಡಾಂಗಣಗಳಿಗೆ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ಪಡೆಯಲಿದೆ ಎಂದು ತಿಳಿದುಬಂದಿದೆ. 

ಕರಾಚಿ ಹಾಗೂ ಲಾಹೋರ್‌ನಲ್ಲಿ ಈಗಾಗಲೇ ಇರುವ ಫ್ಲಡ್‌ಲೈಟ್‌ಗಳು ಹಳೆಯದಾಗಿವೆ. ಹೀಗಾಗಿ ಅಲ್ಲಿನ ಫ್ಲಡ್‌ಲೈಟ್‌ಗಳನ್ನು ಹಣ ಉಳಿತಾಯಕ್ಕಾಗಿ ಕ್ವೆಟ್ಟಾ ಹಾಗೂ ರಾವಲ್ಪಿಂಡಿ ಕ್ರೀಡಾಂಗಣಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಇನ್ನು, ಕರಾಚಿ ಹಾಗೂ ಲಾಹೋರ್‌ಗೆ ಬೇಕಾದ ಫ್ಲಡ್‌ಲೈಟ್‌ಗಳನ್ನು ಆಗಸ್ಟ್‌ 2024ರಿಂದ ಜುಲೈ 2025ರ ವರೆಗೆ ಬಾಡಿಗೆಗೆ ಪಡೆಯಲು ಪಿಸಿಬಿ ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ ಟೆಂಡರ್‌ ಕೂಡಾ ಆಹ್ವಾನಿಸಲಾಗಿದೆ.

ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ದಯನೀಯ ಪರಿಸ್ಥಿತಿಯ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

 

ಭರ್ಜರಿ ಶತಕದೊಂದಿಗೆ ಇಶಾನ್‌ ಕಮ್‌ಬ್ಯಾಕ್‌

ತಿರುನೆಲ್ವೇಲಿ(ತಮಿಳುನಾಡು): 1 ವರ್ಷದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡ ಭಾರತದ ಯುವ ಬ್ಯಾಟರ್‌ ಇಶಾನ್‌ ಕಿಶನ್‌, ಭರ್ಜರಿ ಶತಕ ಬಾರಿಸಿದ್ದಾರೆ. ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ ಬುಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್‌ನ ಇಶಾನ್, ಶುಕ್ರವಾರ ಮಧ್ಯಪ್ರದೇಶ ವಿರುದ್ಧ 86 ಎಸೆತಗಳಲ್ಲಿ ಶತಕ ಸಿಡಿಸಿದರು.

ವಿನೇಶ್‌ ಫೋಗಟ್ ಸತ್ತೇ ಹೋಗ್ತಾರೆ ಎಂದು ಆತಂಕಗೊಂಡಿದ್ದೆ: ಕೋಚ್‌ ವೋಲರ್‌ ಅಕೋಸ್‌

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾನಸಿಕ ಆರೋಗ್ಯ ಕಾರಣಕ್ಕೆ ಭಾರತ ತಂಡದಿಂದ ಹೊರಗುಳಿದಿದ್ದ ಇಶಾನ್‌, ಬಳಿಕ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರು ಮುಂಬರುವ ದುಲೀಪ್‌ ಟ್ರೋಫಿಯಲ್ಲಿ ಆಡಲಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರ?

ದುಬೈ: ಅ.3ರಿಂದ 20ರ ವರೆಗೂ ನಿಗದಿಯಾಗಿರುವ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವ ಕಾರಣ, ಟೂರ್ನಿಯನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆಗೆ ಐಸಿಸಿ ಸಿಲುಕಿದ್ದು, ಭಾರತದಲ್ಲಿ ಆಯೋಜಿಸುವಂತೆ ಬಿಸಿಸಿಐ ಬಳಿ ಕೇಳಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ನಿರಾಕರಿಸಿದ ಕಾರಣ, ಇದೀಗ ಯುಎಇನಲ್ಲಿ ನಡೆಸುವ ಬಗ್ಗೆ ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಗೊತ್ತಾಗಿದೆ.

ಲೀಗ್ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದ್ರಾವಿಡ್ ಪುತ್ರ ಸಮಿತ್..! ಮೊದಲ ಪಂದ್ಯದಲ್ಲಿ ಗಳಿಸಿದ ಸ್ಕೋರ್ ಎಷ್ಟು?

ಕಿವೀಸ್‌ ಕೇಂದ್ರೀಯ ಗುತ್ತಿಗೆ ತೊರೆದ ಕಾನ್‌ವೇ, ಆ್ಯಲನ್‌

ಆಕ್ಲಂಡ್‌: ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂದುವರಿಯಲು ಉತ್ಸುಕರಾಗಿರುವ ನ್ಯೂಜಿಲೆಂಡ್‌ನ ತಾರಾ ಕ್ರಿಕೆಟಿಗರಾದ ಡೆವೋನ್ ಕಾನ್‌ವೇ ಹಾಗೂ ಫಿನ್‌ ಆ್ಯಲೆನ್‌ ನ್ಯೂಜಿಲೆಂಡ್‌ನ ಕ್ರಿಕೆಟ್‌ನ ಕೇಂದ್ರೀಯ ಗುತ್ತಿಗೆ ನಿರಾಕರಿಸಿದ್ದಾರೆ. ಆದರೆ ಕಾನ್‌ವೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಕೇನ್‌ ವಿಲಿಯಮ್ಸನ್‌ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲು ಶ್ರೀಲಂಕಾ ವಿರುದ್ಧ ಸರಣಿಯನ್ನು ತೊರೆದಿದ್ದರು. ವೇಗಿ ಆ್ಯಡಂ ಮಿಲ್ನೆ ಹಾಗೂ ಲಾಕಿ ಫರ್ಗ್ಯೂಸನ್‌ ಕೂಡಾ ಫ್ರಾಂಚೈಸಿ ಲೀಗ್‌ಗಳ ಕಾರಣಕ್ಕೆ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು.

ಕರ್ನಾಟಕ ಕ್ರಿಕೆಟ್‌ ತಂಡಕ್ಕೆ ಯೆರೆಗೌಡ ಮುಖ್ಯ ಕೋಚ್‌

ಬೆಂಗಳೂರು: ಮಾಜಿ ಕ್ರಿಕೆಟಿಗ ಕೆ.ಯೆರೆಗೌಡ ಅವರು ಮುಂದಿನ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಪುರುಷರ ತಂಡಕ್ಕೆ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಘೋಷಿಸಿದೆ. ಯೆರೆಗೌಡ ಈ ಮೊದಲು 2018ರಿಂದ 2021ರ ವರೆಗೂ ಕೋಚ್‌ ಆಗಿದ್ದರು. ಕಳೆದ 2 ವರ್ಷಗಳಿಂದ ಪಿ.ವಿ. ಶಶಿಕಾಂತ್‌ ರಾಜ್ಯ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಮತ್ತೆ ಕೋಚ್‌ ಸ್ಥಾನಕ್ಕೆ ಯೆರೆಗೌಡ ನೇಮಕಗೊಂಡಿದ್ದಾರೆ. 

ಇತ್ತೀಚೆಗಷ್ಟೇ ಯೆರೆಗೌಡ ಅವರ ಕೋಚ್‌ ಅವಧಿಯಲ್ಲೇ ಕರ್ನಾಟಕ ಅಂಡರ್‌-23 ತಂಡ ಸಿಕೆ ನಾಯ್ಡು ಟ್ರೋಫಿಯಲ್ಲಿ ಚಾಂಪಿಯನ್‌ ಆಗಿತ್ತು. ಇದೇ ವೇಳೆ, ರಾಜ್ಯ ಹಿರಿಯರ ತಂಡಕ್ಕೆ ಮನ್ಸೂರ್‌ ಅಲಿ ಖಾನ್‌ ಬೌಲಿಂಗ್‌ ಕೋಚ್ ಆಗಿ ಮುಂದುವರಿಯಲಿದ್ದು, ಶಬರೀಶ್‌ ಮೋಹನ್‌ ಪೀಲ್ಡಿಂಗ್‌ ಕೋಚ್‌ ಆಗಿರಲಿದ್ದಾರೆ. ಅಂಡರ್‌-23 ತಂಡಕ್ಕೆ ಸೋಮಶೇಖರ್‌ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Latest Videos
Follow Us:
Download App:
  • android
  • ios