ವೇಗಿ ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಸೇರಿದಂತೆ 6 ವಿಕೆಟ್ ಸಾಧನೆ, ಟಿ20 ಕ್ರಿಕೆಟ್‌ನಲ್ಲಿ ದಾಖಲೆ. ಈ ಪ್ರತಿಭಾನ್ವಿತ ಕ್ರಿಕೆಟಿಗನ್ನು 9 ವರ್ಷ ಮೊದಲೆ ಮಾಜಿ ಕ್ರಿಕೆಟಿಗ ಗುರುತಿಸಿದ್ದರು ಅನ್ನೋದು ಇದೀಗ ಬೆಳಕಿಗೆ ಬಂದಿದೆ.

ಮುಂಬೈ(ನ.13): ಬಾಂಗ್ಲಾದೇಶ ವಿರುದ್ದದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಜೊತೆಗೆ 6 ವಿಕೆಟ್ ಕಬಳಿಸಿದ್ದರು. ಚಹಾರ್ ದಾಖಲೆಯ ಬೌಲಿಂಗ್‌ಗೆ ಬಾಂಗ್ಲಾದೇಶ ತತ್ತರಿಸಿತ್ತು. ಇಷ್ಟೇ ಅಲ್ಲ ಟಿ20 ಸರಣಿಯನ್ನು ಭಾರತ 2-1 ಅಂತರದಲ್ಲಿ ವಶಪಡಸಿಕೊಂಡಿತ್ತು. ದೀಪಕ್ ಚಹಾರ್ ಪ್ರದರ್ಶನವನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಸೇರಿದಂತೆ ವಿಶ್ವ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಕ್ ಚಹಾರ್ ದಿಢೀರ್ ಪ್ರತ್ಯಕ್ಷವಾದ ಪ್ರತಿಭೆಯಲ್ಲ, 2010ರಲ್ಲೇ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಚಹಾರ್‌ನಲ್ಲಿನ ಪ್ರತಿಭೆ ಗುರುತಿಸಿದ್ದರು.

ಇದನ್ನೂ ಓದಿ: ಬಾಂಗ್ಲಾ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದ ದೀಪಕ್ ಚಹಾರ್!

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ 2010ರಲ್ಲಿ ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗಿದೆ. ಅಭಿಮಾನಿಯೋರ್ವ ಆಕಾಶ್ ಚೋಪ್ರಾ ಬಳಿ ಪ್ರಶ್ನೆ ಕೇಳಿದ್ದ. ನಾವು ಅತ್ಯುತ್ತಮ ಬೌಲರನ್ನು ಗುರುತಿಸಬೇಕಿದೆ. ಆದರೆ ಸದ್ಯ ಯಾರೂ ಕೂಡ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದ ಇದಕ್ಕೆ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿ, ದೀಪಕ್ ಚಹಾರ್ ಅತ್ಯಂತ ಪ್ರತಿಭಾನ್ವಿತ ಎಂದಿದ್ದರು.

Scroll to load tweet…

ಇದನ್ನೂ ಓದಿ: ICC ಟಿ20 ರ‍್ಯಾಂಕಿಂಗ್ ಪ್ರಕಟ: ಹ್ಯಾಟ್ರಿಕ್ ವೀರ ದೀಪಕ್ ಚಹರ್’ಗೆ ಬಂಪರ್..!

2010ರಲ್ಲಿ ದೀಪಕ್ ಚಹಾರ್ ಬೌಲಿಂಗ್ ಪ್ರದರ್ಶನ ನೋಡಿದ್ದ ಆಕಾಶ್ ಚೋಪ್ರಾ, ನಾನು ರಾಜಸ್ಥಾನದಲ್ಲಿ ಪ್ರತಿಭಾನ್ವಿತ ವೇಗಿಯನ್ನು ಗುರುತಿಸಿದ್ದೇನೆ. ಈತನ ಹೆಸರು ದೀಪಕ್ ಚಹಾರ್. ಈ ಹೆಸರನ್ನು ನನೆಪಿಟ್ಟಿಕೊಳ್ಳಿ. ನೀವು ಈ ಕ್ರಿಕೆಟಿಗನಿಂದ ಮಹತ್ವದ ಕೂಡುಗೆಯನ್ನು ನೋಡಲಿದ್ದೀರಿ ಎಂದು ಟ್ವೀಟ್ ಮಾಡಿದ್ದರು.

ಅವಕಾಶಗಳ ಕೊರತೆ, ರಾಜಸ್ಥಾನ ನಿರ್ದೇಶಕ, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ನಿರ್ಲಕ್ಷ್ಯದಿಂದ ದೀಪಕ್ ಚಹಾರ್ ಪ್ರತಿಭೆ ವೇದಿಕೆ ಸಿಗಲೇ ಇಲ್ಲ. 2018ರಲ್ಲಿ ಎಂ.ಎಸ್.ಧೋನಿ, ಐಪಿಎಲ್ ಟೂರ್ನಿಯಲ್ಲಿ ಚಹಾರ್‌ಗೆ ಬೆಂಬಲ ನೀಡಿದರು. ಇಲ್ಲಿಂದ ಚಹಾರ್ ಕ್ರಿಕೆಟ್ ಕರಿಯರ್ ಬದಲಾಯಿತು. ಇದೀಗ ಚಹಾರ್ ದಾಖಲೆ ಬರೆಯೋ ಮೂಲಕ ಸ್ಟಾರ್ ಕ್ರೆಕಿಟಗನಾಗಿದ್ದಾರೆ.

ಇತ್ತ ಆಕಾಶ್ ಚೋಪ್ರಾ ಟ್ವೀಟ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.


Scroll to load tweet…
Scroll to load tweet…
Scroll to load tweet…