ನಾಗ್ಪುರ(ನ.10): ಬಾಂಗ್ಲಾದೇಶ ವಿರುದ್ದದ ಟಿ20 ಸರಣಿ ಗೆಲುವಿನಲ್ಲಿ ವೇಗಿ ದೀಪಕ್ ಚಹಾರ್ ಪ್ರಮುಕ ಪಾತ್ರ ನಿರ್ವಿಸಿದ್ದಾರೆ. 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಚಹಾರ್ ಹ್ಯಾಟ್ರಿಕ್ ವಿಕೆಟ್ ಸಹಿತಿ ಒಟ್ಟು 6 ವಿಕೆಟ್ ಕಬಳಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಹ್ಯಾಟ್ರಿಕ್ ವಿಕೆಟ್ ಕಬಳಿಸೋ ಮೂಲಕ ದೀಪಕ್ ಚಹಾರ್ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ದೀಪಕ್ ಚಹಾರ್ ದಾಳಿಗೆ ತತ್ತರಿಸಿದ ಬಾಂಗ್ಲಾ; ಸರಣಿ ಕೈವಶ ಮಾಡಿದ ಭಾರತ

ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅನ್ನೋ ಹೆಗ್ಗಳಿಕೆಗೆ ದೀಪಕ್ ಚಹಾರ್ ಪಾತ್ರರಾಗಿದ್ದಾರೆ.  ಟೆಸ್ಟ್ ಹಾಗೂ ಏಕದಿನದಲ್ಲಿ ಭಾರತೀಯ ಬೌಲರ್‌ಗಳು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಆದರೆ ಟಿ20ಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.

ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತೀಯ ಬೌಲರ್ಸ್(ಅಂತಾರಾಷ್ಟ್ರೀಯ ಪಂದ್ಯ)
ಟೆಸ್ಟ್: ಹರ್ಭಜನ್ ಸಿಂಗ್, ಇರ್ಪಾನ್ ಪಠಾಣ್
ಏಕದಿನ: ಚೇತನ್ ಶರ್ಮಾ, ಕಪಿಲ್ ದೇವ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ
ಟಿ20: ದೀಪಕ್ ಚಹಾರ್