ಅಹಮದಾಬಾದ್ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಮೋದಿಗೆ ಬಿಸಿಸಿಐ ವಿಶೇಷ ಗಿಫ್ಟ್‌ನರೇಂದ್ರ ಮೋದಿ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ಗೆ ಬಿಸಿಸಿಐ ವಿಶೇಷ ಸ್ಮರಣಿಕೆಭಾರತ ಪರ ಆಡಿದ ಎಲ್ಲಾ ಆಟಗಾರರ ಫೋಟೋಗಳಿಂದ ಮೋದಿ ಚಿತ್ರ ರಚನೆ
ಅಹಮದಾಬಾದ್(ಮಾ.11): ಗುರುವಾರ ಭಾರತ-ಆಸ್ಪ್ರೇಲಿಯಾ 4ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಉಭಯ ದೇಶಗಳ ನಡುವಿನ 75 ವರ್ಷದ ಸ್ನೇಹ ಸಂಗಮದ ಭಾಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ಗೆ ಬಿಸಿಸಿಐ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿತ್ತು. ಅವರದ್ದೇ ಚಿತ್ರಗಳಿದ್ದ ಫೋಟೋ ಫ್ರೇಮ್‌ಗಳನ್ನು ನೀಡಿದ್ದರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಟೀಕೆ ಸಹ ವ್ಯಕ್ತವಾಗಿತ್ತು. ಆದರೆ ಆ ಸ್ಮರಣಿಕೆಗಳ ವಿಶೇಷತೆ ಬಹಿರಂಗಗೊಂಡಿದೆ. ಭಾರತ ಪರ ಆಡಿದ ಎಲ್ಲಾ ಆಟಗಾರರ ಫೋಟೋಗಳಿಂದ ಮೋದಿ ಚಿತ್ರ ರಚಿಸಲಾಗಿದೆ. ಅದೇ ರೀತಿ ಆಸ್ಪ್ರೇಲಿಯಾ ಪರ ಆಡಿದ ಎಲ್ಲಾ ಆಟಗಾರರ ಫೋಟೋಗಳಿಂದ ಆಲ್ಬನೀಸ್ ಚಿತ್ರ ರಚನೆಗೊಂಡಿದೆ.
ಮೈದಾನದಲ್ಲಿ ರೌಂಡ್ಸ್ ಹಾಕಿದ್ದ ಪ್ರಧಾನಿಗಳು:
ವಿಶೇಷವಾಗಿ ಸಿದ್ಧಗೊಂಡಿದ್ದ ವಾಹನದಲ್ಲಿ ಉಭಯ ದೇಶಗಳ ಪ್ರಧಾನಿಗಳು ಮೈದಾನದುದ್ದಕ್ಕೂ ಸಂಚರಿಸಿದರು. ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 40,000ಕ್ಕೂ ಹೆಚ್ಚು ಪ್ರೇಕ್ಷಕರತ್ತ ಕೈಬೀಸುತ್ತ ಒಂದು ಸುತ್ತು ಹೊಡೆದರು. ಅಭಿಮಾನಿಗಳು ‘ಮೋದಿ ಮೋದಿ’ ಎಂದು ಕೂಗುತ್ತಾ ಸಂಭ್ರಮಿಸಿದರು.
ಗ್ಯಾಲರಿ ಉದ್ಘಾಟನೆ
ಬಳಿಕ ಪ್ರಧಾನಿಗಳು ಕ್ರೀಡಾಂಗಣದಲ್ಲಿ ಹೊಸದಾಗಿ ಸಿದ್ಧಗೊಂಡಿರುವ ಹಾಲ್ ಆಫ್ ಫೇಮ್ ಗ್ಯಾಲರಿ ಉದ್ಘಾಟನೆ ಮಾಡಿದರು. ಭಾರತದ ಭವ್ಯ ಕ್ರಿಕೆಟ್ ಇತಿಹಾಸ ಸಾರುವ ಹಲವು ಫೋಟೋಗಳು, ವಿಶ್ವ ಕ್ರಿಕೆಟ್‌ನ ಅವಿಸ್ಮರಣೀಯ ಕ್ಷಣಗಳು, ಕ್ರಿಕೆಟಿಗರ ಸಾಧನೆಯ ವಿವರಗಳು, ಟ್ರೋಫಿ ಹಾಗೂ ಬ್ಯಾಟ್, ಬಾಲ್ಗಳ ಸಂಗ್ರಹವನ್ನು ಪ್ರಧಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ನರೇಂದ್ರ ಮೋದಿ ಹಾಗೂ ಆಂಥೋನಿ ಅಲ್ಬನೀಸ್‌ಗೆ ಗ್ಯಾಲರಿ ಬಗ್ಗೆ ಮಾಹಿತಿ ನೀಡಿದರು.
ಪ್ರಥಮ ದರ್ಜೆ ಕ್ರಿಕೆಟ್‌ಗೆ ಶಾನ್ ಮಾರ್ಷ್ ವಿದಾಯ
ಸಿಡ್ನಿ: ಆಸ್ಪ್ರೇಲಿಯಾದ ಮಾಜಿ ಆರಂಭಿಕ ಆಟಗಾರ, 40 ವರ್ಷದ ಶಾನ್ ಮಾರ್ಷ್ ಶುಕ್ರವಾರ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2001ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮಾರ್ಷ್ 23 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ್ದು, ಒಟ್ಟಾರೆ 183 ಪಂದ್ಯಗಳಲ್ಲಿ 32 ಶತಕ, 58 ಅರ್ಧಶತಕಗಳೊಂದಿಗೆ 12,032 ರನ್ ಕಲೆಹಾಕಿದ್ದಾರೆ. ಆಸ್ಪ್ರೇಲಿಯಾ ಪರ 38 ಟೆಸ್ಟ್ಗಳನ್ನಾಡಿರುವ ಮಾರ್ಷ್ 2019ರಲ್ಲಿ ಕೊನೆ ಬಾರಿ ತಂಡವನ್ನು ಪ್ರತಿನಿಧಿಸಿದ್ದರು.
ಟೆಸ್ಟ್: ಕಿವೀಸ್ ವಿರುದ್ಧ ಶ್ರೀಲಂಕಾ ಮೇಲುಗೈ
ಕ್ರೈಸ್ಟ್‌ಚರ್ಚ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಆಸೆ ಜೀವಂತವಾಗಿರಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸಲ್ಲಿ 355 ರನ್ ಕಲೆಹಾಕಿದ ಬಳಿಕ, 2ನೇ ದಿನದಂತ್ಯಕ್ಕೆ ನ್ಯೂಜಿಲೆಂಡನ್ನು 5 ವಿಕೆಟ್‌ಗೆ 162 ರನ್‌ಗೆ ನಿಯಂತ್ರಿಸಿದೆ. ಕಿವೀಸ್ ಇನ್ನೂ 193 ರನ್ ಹಿನ್ನಡೆಯಲ್ಲಿದೆ.
ಮಹಿಳಾ ಕ್ರಿಕೆಟ್‌ನ ಹೊಸ ಸ್ಟಾರ್ ಕನ್ನಡತಿ ಶ್ರೇಯಾಂಕ ಪಾಟೀಲ್..!
ಸ್ಕೋರ್: ಲಂಕಾ 355/10(ಕುಸಾಲ್ 87, ಧನಂಜಯ 46, ಸೌಥಿ 5-64, ಹೆನ್ರಿ 4-80), ನ್ಯೂಜಿಲೆಂಡ್ 162/5(ಲೇಥಮ್ 67, ಮಿಚೆಲ್ 40*, ಅಸಿತಾ 2-42, ಲಹಿರು 2-34)
ಟೆಸ್ಟ್: ವಿಂಡೀಸ್ ಮೇಲೆ ದಕ್ಷಿಣ ಆಫ್ರಿಕಾ ಬಿಗಿಹಿಡಿತ
ಜೋಹಾನ್ಸ್ಬರ್ಗ್: ತೆಂಬ ಬವುಮಾ(ಔಟಾಗದೆ 171) ಭರ್ಜರಿ ಶತಕದ ನೆರವಿನಿಂದ ವೆಸ್ಟ್ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಬಿಗಿಹಿಡಿತ ಸಾಧಿಸಿದ್ದು, ಪ್ರವಾಸಿ ತಂಡಕ್ಕೆ ದೊಡ್ಡ ಗುರಿ ನೀಡುವ ನಿರೀಕ್ಷೆಯಲ್ಲಿದೆ. 3ನೇ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 2ನೇ ಇನ್ನಿಂಗ್ಸ್ನಲ್ಲಿ 7 ವಿಕೆಟ್‌ಗೆ 287 ರನ್ ಗಳಿಸಿದ್ದು, ಒಟ್ಟು 356 ರನ್ ಮುನ್ನಡೆಯಲ್ಲಿದೆ.
