ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿ ಪ್ರಕಟ, ಅಂತಿಮ ಪಂದ್ಯಕ್ಕೆ ಬೆಂಗಳೂರು ಆತಿಥ್ಯ!

ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಇದೀಗ ಸತತ ಸರಣಿಗೆ ಸಜ್ಜಾಗುತ್ತಿದೆ. ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸರಣಿ ಬೆನ್ನಲ್ಲೇ ಆಫ್ಘಾನಿಸ್ತಾನ ವಿರುದ್ಧದ ಸರಣಿಯೂ ಖಚಿತಗೊಂಡಿದೆ. ಜನವರಿ 11 ರಿಂದ ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ.

Afghanistan tour to India for t20 series schedule confirms Bengaluru host 3rd and final match ckm

ಮುಂಬೈ(ನ.21) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡು ಭಾರತ ಇದೀಗ ಸತತ ಸರಣಿಗೆ ಸಜ್ಜಾಗುತ್ತಿದೆ. ನವೆಂಬರ್ 23ರಿಂದ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಆರಂಭಗೊಳ್ಳುತ್ತಿದೆ. ಬಳಿಕ ಸೌತ್ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದೀಗ ಜನವರಿಯಲ್ಲಿ ಭಾರತ ಹಾಗೂ  ಆಫ್ಘಾನಿಸ್ತಾನ ನಡುವಿನ ಟಿ20 ಸರಣಿ ವೇಳಾಪಟ್ಟಿ ಪ್ರಕಟಗೊಂಡಿದೆ.  3 ಪಂದ್ಯದ ಟಿ20 ಸರಣಿಗೆ ಭಾರತ ಆತಿಥ್ಯವಹಿಸಲಿದೆ. ವಿಶೇಷ ಅಂದರೆ ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯ ಜನವರಿ 11ರಂದು ನಡೆಯಲಿದೆ. ಈ ಪಂದ್ಯವನ್ನು ಮೊಹಾಲಿಯಲ್ಲಿ ಆಯೋಜಿಸಲಾಗಿದೆ. ಎರಡನೇ ಪಂದ್ಯ ಜನವರಿ 14 ರಂದು ಇಂದೋರ್‌ನಲ್ಲಿ ಆಯೋಜಿಸಲಾಗಿದೆ. ಇನ್ನು ಮೂರನೇ ಹಾಗೂ ಅಂತಿಮ ಪಂದ್ಯ ಜನವರಿ 17 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ವಿಶ್ವಕಪ್ ಬೆನ್ನಲ್ಲೇ ಐಸಿಸಿಯಿಂದ ಹೊಸ ರೂಲ್ಸ್, ವುಮೆನ್ಸ್ ಕ್ರಿಕೆಟ್‌ನಲ್ಲಿ ಮಂಗಳಮುಖಿಯರಿಗೆ ನಿಷೇಧ!

ಐಸಿಸಿ ವಿಶ್ವಕಪ್ ಟೂರ್ನಿಗಾಗಿ ಆಘ್ಘಾನಿಸ್ತಾನ ಭಾರತ ಪ್ರವಾಸ ಮಾಡಿತ್ತು. ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್, ಪಾಕಿಸ್ತಾನ ತಂಡವನ್ನೇ ಮಣಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಸಂಪಾದಿಸಿತ್ತು. ಇದೀಗ ಜನವರಿ ತಿಂಗಳಲ್ಲಿ ಮತ್ತೆ ಆಫ್ಘಾನಿಸ್ತಾನ ತಂಡ ಟಿ20 ಸರಣಿಗಾಗಿ ಭಾರತ ಪ್ರವಾಸ ಮಾಡಲಿದೆ.

ವಿಶ್ವಕಪ್ ಟೂರ್ನಿ ಮುಗಿಸಿದ ಭಾರತ ಇದೀಗ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗಿದೆ. ನವೆಂಬರ್ 23 ರಿಂದ ಡಿಸೆಂಬರ್ 3ರ ವರೆಗೆ ಟಿ20 ಪಂದ್ಯ ನಡೆಯಲಿದೆ. ವಿಶಾಖಪಟ್ಟಣದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಇನ್ನು ನವೆಂಬರ್ 26 ರಂದು ತಿರುವನಂತಪುರದಲ್ಲಿ 2ನೇ ಪಂದ್ಯ ನಡೆಯಲಿದೆ. 3ನೇ ಪಂದ್ಯ ನವೆಂಬರ್ 28ರಂದು ಗುವ್ಹಾಟಿಯಲ್ಲಿ ಆಯೋಜಿಸಲಾಗಿದೆ. ಅಂತಿಮ 2 ಪಂದ್ಯದ ಸ್ಥಳ ಬದಲಿಸಲಾಗಿದೆ. ಡಿಸೆಂಬರ್ 1 ರಂದು ನಡೆಯಲಿರುವ 4ನೇ ಟಿ20 ಪಂದ್ಯವನ್ನು ರಾಯ್‌ಪುರಕ್ಕೆ ಬದಲಾಯಿಸಲಾಗಿದೆ. ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯ ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ನಡೆಯಲಿದೆ. 

10ರಲ್ಲಿ ಪಾಸಾಗಿ 11ರಲ್ಲಿ ಫೇಲಾದ್ರಾ ರೋಹಿತ್ ಶರ್ಮಾ..? ಟೀಂ ಇಂಡಿಯಾ ಕ್ಯಾಪ್ಟನ್ ಮಾಡಿದ ಯಡವಟ್ಟೇನು?

ಈ ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಸಂಪೂರ್ಣ ತಂಡ ಸೌತ್ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 10 ರಿಂದ ಜನನವರಿ 07ರ ವರೆಗೆ ಭಾರತ ತಂಜ ಸೌತ್ ಆಫ್ರಿಕಾ ವಿರುದ್ದ ಸರಣಿ ಆಡಲಿದೆ. ಸೌತ್ ಆಫ್ರಿಕಾ ವಿರುದ್ಧ ಭಾರತ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ.

Latest Videos
Follow Us:
Download App:
  • android
  • ios