ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರೂಪದ ಆರೋಗ್ಯ ಸಮಸ್ಯೆಯೊಂದು ಕ್ರಿಕೆಟಿಗನ ಕಾಡುತ್ತಿದೆ.

ದೆಹಲಿ (ಏ.20) ಐಪಿಎಲ್ ಟೂರ್ನಿ ಕ್ರಿಕೆಚಿಗ ಪ್ರೇಮಿಗಳ ಉತ್ಸಾಹ ಇಮ್ಮಡಿಗೊಳಿಸಿದೆ. ಇದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಆಫ್ಘಾನಿಸ್ತಾನದ ಕ್ರಿಕೆಟಿಗ ಇದೀಗ ದೆಹಲಿಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆಫ್ಘಾನಿಸ್ತಾನದ ಮಾಜಿ ವೇಗಿ ಶಾಪೂರ್ ಝದ್ರಾನ್, ನ್ಯೂ ಡೆಲ್ಲಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರೂದ ಖಾಯಿಲೆಯೊಂದು ಆಫ್ಘಾನಿಸ್ತಾನದ ಕ್ರಿಕೆಟಿಗನ ಬಾಳನ್ನು ಕಸಿದುಕೊಳ್ಳುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಸಿಯು ಘಟಕದಲ್ಲಿರುವ ಕ್ರಿಕೆಟಿಗನ ಸ್ಥಿತಿ ಗಂಭೀರ

ಶಾಪೂರ್ ಝದ್ರಾನ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್' (HLH) ಅತ್ಯಂತ ಅಪರೂದ ರೋಗದಿಂದ ಬಳಲುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆ ಆರಂಭದಲ್ಲೇ ಪತ್ತೆ ಹಚ್ಚಿದರೇ ಗುಣಪಡಿಸುವ ಅಥವಾ ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಸದ್ಯ ಶಾಪೂರ್ ಖಾಯಿಲೆ 4ನೇ ಸ್ಟೇಜ್ ದಾಟಿದೆ. ಹೀಗಾಗಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.

ಜನವರಿ ತಿಂಗಳಿನಿಂದ ಶಾಪೂರ್ ಸ್ಥಿತಿ ಗಂಭೀರ

ಜನವರಿ ತಿಂಗಳಲ್ಲಿ ದೆಹಲಿ ಆಸ್ಪತ್ರೆಗೆ ದಾಖಲಾಗಿರುವ ಶಾಪೂರ್ ಸತತ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 18 ರಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ಶಾಪೂರ್ ನಿಧಾನವಾಗಿ ಚೇತರಿಕೆ ಕಂಡಿದ್ದರು. ಫೆಬ್ರವರಿ ತಿಂಗಳಲ್ಲಿ ಆರೋಗ್ಯ ಸುಧಾರಿಸಿತ್ತು. ಆದರೆ ಸೋಂಕು ಉಲ್ಬಣಿಸಿದ ಕಾರಣ ಶಾಪೂರ್ ಆರೋಗ್ಯ ಮತ್ತೆ ಹದಗೆಟ್ಟಿದೆ. ಈ ಸೋಂಕು ಮೆದುಳಿಗೆ ಹರಡಿದೆ. ಹೀಗಾಗಿ ಶಾಪೂರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಆಫ್ಘಾನ್ ನೆರವಿಗೆ ಸ್ಪಂದಿಸಿದ ಬಿಸಿಸಿಐ

2025ರ ಅಕ್ಟೋಬರ್ ತಿಂಗಳಿನಿಂದ ಶಾಪೂರ್ ಆರೋಗ್ಯ ಸಮಸ್ಯೆ ತೀವ್ರಗೊಂಡಿತ್ತು. ಆಫ್ಘಾನಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಆಕ್ಟೋಬರ್‌ನಲ್ಲಿ ಆಸ್ಪತ್ರೆ ದಾಖಲಾಗಿದ್ದರು. ಸತತ ಚಿಕಿತ್ಸೆ ಬಳಿಕ ಶಾಪೂರ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇರಲಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಶಿಫ್ಟ್ ಮಾಡಲು ಕುಟುಂಬಸ್ಥರು ಆಗ್ರಹಿಸಿದ್ದರು. ಇದಕ್ಕೆ ಆಫ್ಘಾನಿಸ್ತಾನ ಕ್ರಿಕೆಟಿಗ ರಶೀದ್ ಖಾನ್ ಕೂಡ ಬೆಂಬಲ ಸೂಚಿಸಿದ್ದರು. ಇತ್ತ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ರಶೀದ್ ಖಾನ್, ಐಸಿಸಿ ಮುಖ್ಯಸ್ಥ ಜಯ್ ಶಾಗೆ ಮನವಿ ಮಾಡಿತ್ತು. ಇತ್ತ ರಶೀದ್ ಖಾನ್ ತಮ್ಮ ಐಪಿಎಲ್ ಫ್ರಾಂಚೈಸಿಗೆ ಮನವಿ ಮಾಡಿದ್ದರು. ಹೀಗಾಗಿ ಶಾಪೂರ್‌ಗೆ ಚಿಕಿತ್ಸೆಗಾಗಿ ತಕ್ಷಣವೇ ಭಾರತದಿಂದ ವೀಸಾ ಹಾಗೂ ಇತರ ಸೌಲಭ್ಯ ನೀಡಲಾಗಿತ್ತು.

ಸದ್ಯ ಮಾತನಾಡಲು ಅಶಕ್ತರಾಗಿರುವ ಶಾಪೂರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಾಪೂರ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ. ಇತ್ತ ಹಲವು ಕ್ರಿಕೆಟಿಗರು ಶಾಪೂರ್ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.