ರಾಹುಲ್ ದ್ರಾವಿಡ್ ಕೋಚ್ ಅವಧಿ ಅಂತ್ಯಗೊಂಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಟಿ ಆದಿತಿ ದ್ರಾವಿಡ್!
ಕಳೆದ ಭಾನುವಾರ ನವೆಂಬರ್ 19 ರಂದು ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸುವುದರೊಂದಿಗೆ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅವಧಿಯೂ ಕೊನೆಗೊಂಡಿದೆ.
ಬೆಂಗಳೂರು (ನ.24): ಟಿವಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ಮರಾಠಿ ಟಿವಿ ನಟಿ ಆದಿತಿ ದ್ರಾವಿಡ್, ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತನ್ನ ಚಿಕ್ಕಪ್ಪ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯ ಮುಕ್ತಾಯದ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನವೆಂಬರ್ 19 ರಂದು ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸುವುದರೊಂದಿಗೆ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಂಡಿತು. "ರಾಹುಲ್ ದ್ರಾವಿಡ್ ನನ್ನ ಚಿಕ್ಕಪ್ಪ. ನನ್ನ ಚಿಕ್ಕಪ್ಪ ಕಳೆದ 30-35 ವರ್ಷಗಳಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ರಣಜಿ ಟ್ರೋಫಿ ಆಟಗಾರರೂ ಆಗಿದ್ದರು. ರಾಹುಲ್ ದ್ರಾವಿಡ್ ಮತ್ತು ನನ್ನ ಸಂಬಂಧ ಕ್ರಿಕೆಟ್‌ನಿಂದಾಗಿ ಇಷ್ಟು ಸುದ್ದಿಯಾಗಿದೆ. ನಾನು ತುಂಬಾ ಭಾವುಕನಾದೆ. ರಾಹುಲ್ ದ್ರಾವಿಡ್ ಅವರ ಕುರಿತಾಗಿ ನನಗೆ ಇಂದು ತುಂಬಾ ಬೇಸರವಾಗಿದೆ. ಅವರ ಮುಖ್ಯ ಕೋಚ್‌ನ ಅವಧಿಯೂ ಕೊನೆಗೊಳ್ಳುತ್ತಿದೆ. ಈ ವಿಶ್ವಕಪ್ ಅವರ ಕೊನೆಯದು. ಅವರು ತುಂಬಾ ಕಠಿಣ ಪರಿಶ್ರಮ ಮತ್ತು ಸಾಕಷ್ಟು ಶ್ರಮವಹಿಸಿದ್ದಾರೆ. ರಾಹುಲ್ ದ್ರಾವಿಡ್ ಅತ್ಯುತ್ತಮ ಕೋಚ್ ಎಂದು ನಾನು ಭಾವಿಸುತ್ತೇನೆ ಎಂದು ಆದಿತಿ ದ್ರಾವಿಡ್ ಹೇಳಿದ್ದಾರೆ.
ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ ಕೆಟ್ಟ ಸೋಲಿನ ನಂತರ, ಆಟಗಾರರ ಮೇಲೆ ಇದು ಭಾವನಾತ್ಮಕವಾಗಿ ಪ್ರಭಾವ ಬೀರಿದೆ ಎಂದು ಒಪ್ಪಿಕೊಂಡರು. ಪಂದ್ಯದ ನಂತರ ಅನೇಕರು ಕಣ್ಣೀರು ಸುರಿಸಿದ್ದರು. "ಭಾರತದ ಸೋಲಿನ ನಂತರ, ಎಲ್ಲಾ ಆಟಗಾರರು ಕಣ್ಣೀರು ಹಾಕಿದರು. ಕ್ರಿಕೆಟ್ ಪ್ರೇಮಿಗಳು ಆ ಚಿತ್ರವನ್ನು ನೋಡಲು ಇಷ್ಟಪಟ್ಟಿರಲಿಲ್ಲ. ಆದರೆ ಈಗ ನಾಲ್ಕು ವರ್ಷಗಳ ನಂತರ ವಿಶ್ವಕಪ್ ಬರುತ್ತದೆ. ಆಗ ತಂಡವು ಸಂಪೂರ್ಣವಾಗಿ ವಿಭಿನ್ನವಾಗಿರಬಹುದು" ಎಂದು ಅವರು ಹೇಳಿದರು.
ಸೀರಿಯಲ್‌ನಲ್ಲಿ ಪ್ರಖ್ಯಾತ ನಟಿ ಆಗಿರುವ ಈಕೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ರಿಲೇಟಿವ್!
ಅದಿತಿ, ಚಿಕ್ಕಪ್ಪ ದ್ರಾವಿಡ್ ಅವರ ಕೆಲಸದ ರೀತಿ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು, ಅವರನ್ನು ಹೆಚ್ಚು ಕಠಿಣ ಪರಿಶ್ರಮದ ಕೋಚ್ ಎಂದು ಬಣ್ಣಿಸಿದರು. ಮುಖ್ಯ ತರಬೇತುದಾರರಾಗಿ ಅವರ ಅವಧಿಯು ಕೊನೆಗೊಂಡಿತು, ಇದು ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಯುಗವನ್ನು ಮುಕ್ತಾಯಗೊಳಿಸಿತು ಎಂದು ಅವರು ಸಹಾನುಭೂತಿ ವ್ಯಕ್ತಪಡಿಸಿದರು. ರಾಹುಲ್ ಅತ್ಯುತ್ತಮ ಕೋಚ್ ಎಂದು ನಾನು ನಂಬುತ್ತೇನೆ ಎಂದು ಅದಿತಿ ಹೇಳಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್‌ಗೆ ತಂಡದ ಸಂಯೋಜನೆ ಕೂಡ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗುತ್ತದೆ ಎನ್ನುವುದನ್ನೂ ಅವರು ಒಪ್ಪಿಕೊಂಡರು.
ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ಮಾರ್ಷ್ ವಿರುದ್ಧ ಎಫ್‌ಐಆರ್!