Asianet Suvarna News Asianet Suvarna News

ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ 90 ಮುಂಬೈ ಕ್ರಿಕೆ​ಟಿ​ಗ​ರು

ಕೊರೋನಾ ಹೆಮ್ಮಾರಿಗೆ ಮಹಾನಗರಿ ಮುಂಬೈ ಅಕ್ಷರಶಃ ಬೆಚ್ಚಿಬಿದ್ದಿದೆ. ಹೀಗಿರುವಾಗಲೇ ಮುಂಬೈನ 90ಕ್ಕೂ ಹೆಚ್ಚು ಕ್ರಿಕೆಟಿಗರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

90 Mumbai cricketers including Ranji Players voluntary donate blood
Author
Mumbai, First Published Jun 9, 2020, 5:01 PM IST

ಮುಂಬೈ(ಜೂ.09): ಅತಿ​ಹೆಚ್ಚು ಕೊರೋನಾ ಸೋಂಕಿ​ತ​ರಿ​ರುವ ಮುಂಬೈ ನಗ​ರ​ದಲ್ಲಿ ಹಲ​ವ​ರಿಗೆ ರಕ್ತದ ಅಗತ್ಯವಿದ್ದು, ಸೋಮ​ವಾರ ಸ್ವಯಂ ಪ್ರೇರಣೆಯಿಂದ 90 ಕ್ರಿಕೆ​ಟಿ​ಗರು ರಕ್ತ​ದಾನ ಮಾಡಿ​ದರು. 

ಮುಂಬೈ ಕ್ರಿಕೆಟ್‌ ಸಂಸ್ಥೆ ರಕ್ತ​ದಾನ ಶಿಬಿರವನ್ನು ಆಯೋ​ಜಿ​ಸಿತ್ತು. ರಣಜಿ ತಂಡದಲ್ಲಿ ಆಡುವ ಆಟ​ಗಾ​ರ​ರಾದ ವಿನಾ​ಯಕ್‌ ಭೋಯಿರ್‌, ರಾಯ್ಸ್‌ಟನ್‌ ದಿಯಾಸ್‌ ಸೇರಿ​ದಂತೆ ವಿವಿಧ ಕ್ಲಬ್‌ಗಳ ಆಟ​ಗಾ​ರರು ರಕ್ತ​ದಾನ ಶಿಬಿರದಲ್ಲಿ ಪಾಲ್ಗೊಂಡರು. ಸ್ಥಳೀಯ ಶಾಸಕ ಕ್ಷಿತಿಜ್‌ ಠಾಕೂರ್‌, ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧಿ​ಕಾರಿ ಅಜಿಂಕ್ಯ ನಾಯಕ್‌, ಮಾಜಿ ಅಧಿ​ಕಾ​ರಿ​ ಪಂಕಜ್‌ ಠಾಕೂರ್‌ ಸಹ ಶಿಬಿರದಲ್ಲಿ ಪಾಲ್ಗೊಂಡರು.

ಆನ್‌ಲೈನ್‌ನಲ್ಲೇ ಕೋಚ್‌, ಆಟ​ಗಾ​ರ​ರಿಗೆ ಹುಡು​ಕಾಟ!

ನವ​ದೆ​ಹ​ಲಿ: ಕೊರೋನಾ ಲಾಕ್‌ಡೌನ್‌ನಿಂದಾಗಿ ಟೂರ್ನಿ​ಗಳು ಸ್ಥಗಿತಗೊಂಡಿ​ದ್ದರೂ, ಭಾರ​ತೀಯ ಫುಟ್ಬಾಲ್‌ ಕ್ಲಬ್‌ಗಳು ಮುಂಬ​ರುವ ಋುತು​ಗ​ಳಿಗೆ ಸಿದ್ಧತೆ ನಡೆ​ಸು​ತ್ತಿವೆ. ಇಂಡಿ​ಯನ್‌ ಸೂಪರ್‌ ಲೀಗ್‌ (ಐ​ಎಸ್‌ಎಲ್‌) ಹಾಗೂ ಐ-ಲೀಗ್‌ನ ಕ್ಲಬ್‌ಗಳು ಆನ್‌ಲೈನ್‌ನಲ್ಲೇ ಕೋಚ್‌, ಆಟ​ಗಾ​ರ​ರಿಗೆ ಹುಡು​ಕಾಟ ನಡೆ​ಸು​ತ್ತಿವೆ. 

ಕೊರೋನಾ ವೈರಸ್‌ಗೆ ಮಾಜಿ ಪುಟ್ಬಾಲ್ ಪಟು ಬಲಿ!

ಐಎಸ್‌ಎಲ್‌ನ 2 ಬಾರಿ ರನ್ನರ್‌ ಅಪ್‌ ತಂಡ ಗೋವಾ ಎಫ್‌ಸಿ, ಜೂಮ್‌ ಆ್ಯಪ್‌ ಮೂಲಕ ಸಂದ​ರ್ಶನ ನಡೆಸಿ ಸ್ಪೇನ್‌ನ ಜುವಾನ್‌ ಫರ್ನಾಂಡೋ ಅವ​ರ​ನ್ನು ನೂತನ ಕೋಚ್‌ ನೇಮಕ ಮಾಡಿ​ಕೊಂಡಿದೆ. ಇದೇ ವೇಳೆ ಹೊಸ ಪ್ರತಿಭೆಗಳ ಹುಡು​ಕಾಟಕ್ಕೆ ಇನ್‌ಸ್ಟಾಟ್‌, ವೈಸ್ಕೌಟ್‌ ಎನ್ನುವ ಮೊಬೈಲ್‌ ಆ್ಯಪ್‌ಗಳನ್ನು ತಂಡ​ಗಳು ಬಳಕೆ ಮಾಡು​ತ್ತಿವೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.

Follow Us:
Download App:
  • android
  • ios