Asianet Suvarna News Asianet Suvarna News

ಕೊರೋನಾ ವೈರಸ್‌ಗೆ ಮಾಜಿ ಪುಟ್ಬಾಲ್ ಪಟು ಬಲಿ!

ಕೊರೋನಾ ವೈರಸ್ ಭಾರತದಲ್ಲಿ ಅಟ್ಟಹಾಸ ಆರಂಭಿಸಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರೆ, ಇತರ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಗಮನಸೆಳೆದಿದ್ದ ಮಾಜಿ ಫುಟ್ಬಾಲರ್ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

Former Santosh Trophy footballer E Hamsakoya tested positive and died in Kerala
Author
Bengaluru, First Published Jun 8, 2020, 8:19 PM IST

ಮಲಪ್ಪುರಂ(ಜೂ.08): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಸಂಪೂರ್ಣ ನಿಯಂತ್ರಕ್ಕೆ ಬಂದಿದ್ದ ಕೇರಳದಲ್ಲೂ ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಂತೋಷ್ ಟ್ರೋಫಿ ಪುಟ್ಬಾಲ್ ಟೂರ್ನಿಯಲ್ಲಿ ಗಮನಸೆಳೆದಿದ್ದ ಫುಟ್ಬಾಲ್ ಪಟು ಹಂಸಕೋಯ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಕೇರಳದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ!..

ಮುಂಬೈನಲ್ಲಿ ನೆಲೆಸಿದ್ದ 61ರ ಹರೆಯದ ಹಂಸಕೋಯ, ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಮುಂಬೈನಲ್ಲಿ ಕೊರೋನಾ ವೈರಸ್ ತೀವ್ರವಾದ ಕಾರಣ ಹಂಸಕೋಯ, ಪತ್ನಿ, ಮಕ್ಕಳು ಸೇರಿದಂತೆ ಕುಟುಂಬ ಸಮೇತ ತವರೂರಾದ ಕೇರಳದ ಮಲಪ್ಪುರಂಗೆ ಆಗಮಿಸಿದ್ದರು. ನ್ಯೂಮೋನಿಯಾ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಹಂಸಕೋಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಜ್ವರ, ಗಂಟಲು ನೋವು: ಸಿಎಂ ಕೇಜ್ರೀವಾಲ್‌ಗೆ ಕೊರೋನಾ ಟೆಸ್ಟ್!

ತಪಾಸನೆ ನಡೆಸಿದ ವೈದ್ಯರು, ಹಂಸಕೋಯಗೆ ಕೊರೋನಾ ತಗುಲಿರುವುದು ಖಚಿತಪಡಿಸಿದ್ದರು. ಹಲವು ಆರೋಗ್ಯ ಸಮಸ್ಯೆ ಹಾಗೂ ಕೊರೋನಾ ವೈರಸ್‌ನಿಂದ ಹಂಸಕೋಯ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಹೀಗಾಗಿ ಹಂಸಕೋಯ ನಿಧನರಾಗಿದ್ದಾರೆ. ಮುಂಬೈನಿಂದ ಹಂಸಕೋಯ ಜೊತೆ ತವರಿಗೆ ಆಗಮಿಸಿದ  ಕುಟುಂಬದ ಐವರು ಸದಸ್ಯರಿಗೂ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

ಮಹಾರಾಷ್ಟ್ರ ಪರ ಸಂತೋಷ್ ಟ್ರೋಫಿ, ಭಾರತದ ಅತ್ಯಂತ ಪ್ರಸಿದ್ಧ ಮೋಹನ್ ಬಗಾನ್, ಮೊಹ್ಮಮದೀನ್ ಸ್ಪೋರ್ಟ್ಸ್ ಕ್ಲಬ್ ಸೇರಿದಂತೆ ಹಲವು ಫುಟ್ಬಾಲ್ ಕ್ಲಬ್ ಪರ ಹಂಸಕೋಯ ಆಡಿದ್ದಾರೆ.

Follow Us:
Download App:
  • android
  • ios