ದುಬೈ (ಯುಎಇ): ನ.14ರಿಂದ ಆರಂಭವಾಗಲಿರುವ ಅಬು ಧಾಬಿ ಟಿ10 ಟೂರ್ನಿಯಲ್ಲಿ ಯುವರಾಜ್‌ ಸಿಂಗ್‌ ಆಡಲಿದ್ದಾರೆ. ಗುರುವಾರ ಇಲ್ಲಿ ಯುವರಾಜ್‌ ಸಿಂಗ್‌ ಅವರನ್ನು ಮರಾಠ ಅರೇಬಿಯನ್ಸ್‌ನ ಐಕಾನ್‌ ಆಟಗಾರರೆಂದು ಘೋಷಿಸಲಾಯಿತು. 

T20 ವಿಶ್ವಕಪ್‌ಗೂ ಮುನ್ನ ನಾಯಕನನ್ನೇ ಬದಲಿಸಲು ಸೂಚಿಸಿದ ಯುವಿ!

ಜೂನ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಯುವಿ ಕೆನಾಡದ ಗ್ಲೋಬಲ್‌ ಟಿ20 ಲೀಗ್‌ನಲ್ಲಿ ಟೊರೊಂಟೊ ನೇಷನಲ್ಸ್‌ ಪ್ರತಿನಿಧಿಸಿದ್ದರು. ಐಸಿಸಿ ಅಂಗೀಕರಿಸಿದ ಟಿ10 ಲೀಗ್‌ನಲ್ಲಿ ಯುವಿ ಪ್ರಮುಖ ಆಕ​ರ್ಷಣೆಯಾಗ​ಲಿ​ದ್ದಾರೆ. ಟಿ10 ಲೀಗ್’ನಲ್ಲಿ ಇಯಾನ್ ಮಾರ್ಗನ್, ಶೇನ್ ವಾಟ್ಸನ್, ಮೊಹಮ್ಮದ್ ಅಮೀರ್, ಮೊಯಿನ್ ಅಲಿ, ಆ್ಯಂಡ್ರೆ ರಸೆಲ್, ಲಸಿತ್ ಮಾಲಿಂಗ ಹಾಗೂ ಡ್ಯಾರನ್ ಸಮಿ ಸೇರಿದಂತೆ ಹಲವು ಚುಟುಕು ಓವರ್ ಸ್ಪೆಷಲಿಸ್ಟ್’ಗಳು ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: 3 ಕನ್ನಡಿಗರಿಗೆ ಸ್ಥಾನ

ಯುವಿ ಮರಾಠ ಅರೇಬಿಯನ್ಸ್‌ ತಂಡ ಸೇರಿಕೊಂಡ ಬೆನ್ನಲ್ಲೇ ಮಾತನಾಡಿ, ಟಿ10 ಕ್ರಿಕೆಟ್ ನನ್ನ ಬ್ಯಾಟಿಂಗ್ ಶೈಲಿಗೆ ಹೊಂದಿಕೊಳ್ಳುತ್ತದೆ. ಈ ಚಿಕ್ಕ ಮಾದರಿಯ ಕ್ರಿಕೆಟ್’ನಲ್ಲಿ ಪ್ರತಿ ಬಾಲ್, ಪ್ರತಿ ಓವರ್ ಕೂಡಾ ಮುಖ್ಯವಾಗುತ್ತದೆ. ಅದರಲ್ಲೂ ವಿಶ್ವದರ್ಜೆಯ ಕ್ರಿಕೆಟಿಗರ ನಡುವಿನ ಪಂದ್ಯಾವಳಿ ಇನ್ನಷ್ಟು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ. ಮರಾಠ ಅರೇಬಿಯನ್ಸ್‌ ಹಾಗೂ ಭಾರತದ ಕ್ರಿಕೆಟ್ ಅಭಿಮಾನಿಗಳು ಪಂದ್ಯ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ. 

ಮರಾಠ ಅರೇಬಿಯನ್ಸ್‌ ತಂಡದ ಸಹ ಮಾಲೀಕ ಪರ್ವೇಜ್ ಖಾನ್ ಮಾತನಾಡಿ, ಯುವರಾಜ್ ಸಿಂಗ್ ನಮ್ಮ ತಂಡ ಸೇರಿಕೊಂಡಿದ್ದು, ನಮ್ಮ ಪಡೆಗೆ ಇನ್ನಷ್ಟು ಬಲ ತಂದಿದೆ. ಕ್ರಿಸ್ ಲಿನ್, ಡ್ವೇನ್ ಬ್ರಾವೋ, ಜದ್ರಾನ್ ಹಾಗೂ ಮಾಲಿಂಗ ಇರುವ ತಂಡ ಪ್ರಶಸ್ತಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.