2023ರ ಐಪಿಎಲ್‌ ಹರಾಜಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 8 ಆಟಗಾರರನ್ನು ಬಿಡುಗಡೆ ಮಾಡಿದೆ. ತಂಡದ ಪರವಾಗಿ 11 ವರ್ಷಗಳ ಕಾಲ ಆಡಿದ್ದ ಅನುಭವಿ ಆಲ್ರೌಂಡರ್‌ ಡ್ವೇನ್‌ ಬ್ರಾವೋ ಅವರನ್ನು ಫ್ರಾಂಚೈಸಿ ರಿಲೀಸ್‌ ಮಾಡಿದೆ. 

ಚೆನ್ನೈ (ನ.15): ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಶ್ರೇಷ್ಠ ಆಲ್ರೌಂಡರ್‌ ಡ್ವೇನ್‌ ಬ್ರಾವೋಗೆ ವಿದಾಯ ಹೆಳಿದೆ. 11 ವರ್ಷಗಳ ಕಾಲ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ರಧಾನ ಆಟಗಾರನಾಗಿದ್ದ 39 ವರ್ಷದ ಡ್ವೇನ್‌ ಬ್ರಾವೋರನ್ನು ಚೆನ್ನೈ ಕೈಬಿಟ್ಟಿದ್ದೆ ಅವರ ರಿಲೀಸ್‌ನ ಅಚ್ಚರಿಯಾಗಿದೆ. ಅದರೊಂದಿಗೆ ಇಂಗ್ಲೆಂಡ್‌ ಮೂಲದ ಡೆತ್‌ ಓವರ್‌ ಸ್ಪೆಷಲಿಸ್ಟ್‌ ಕ್ರಿಸ್‌ ಜೋರ್ಡ್‌ನ್‌ಗೂ ಗೇಟ್‌ಪಾಸ್‌ ನೀಡಿದೆ. ಇನ್ನೂ ಕಳೆದ ಋತುವಿನ ಅಂತ್ಯದ ಬಳಿಕ ರಾಬಿನ್‌ ಉತ್ತಪ್ಪ ನಿವೃತ್ತಿ ಘೋಷಣೆ ಮಾಡಿದ ಕಾರಣ ಎಂದಿನಂತೆ ಅವರು ತಂಡದಿಂದ ಹೊರಬಿದ್ದಿದ್ದಾರೆ. ಡ್ವೇನ್‌ ಬ್ರಾವೋ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರವಾಗಿ 2013 ಹಾಗೂ 2015ರಲ್ಲಿ ಡ್ವೇನ್‌ ಬ್ರಾವೋ ಪರ್ಪಲ್‌ ಕ್ಯಾಪ್‌ ಜಯಿಸಿದ್ದರು.. 2013ರ ಐಪಿಎಲ್‌ ಋತುವಿನಲ್ಲಿ ಅವರು 32 ವಿಕೆಟ್‌ ಉರುಳಿಸಿದ್ದರು. ಒಂದೇ ಋತುವಿನಲ್ಲಿ ಒಬ್ಬ ಬೌಲರ್‌ ಉರುಳಿಸಿದ ಗರಿಷ್ಠ ವಿಕೆಟ್‌ ರೂಪದಲ್ಲಿ ಇಂದಿಗೂ ಇದು ದಾಖಲೆಯಾಗಿದೆ.

ಕಳೆದ ಋತುವಿನಲ್ಲಿ ರೈನಾ ಹಾಗೂ ಈ ಬಾರಿ ಬ್ರಾವೋ ಕೂಡ ಚೆನ್ನೈ ತಂಡದ ಲಿಸ್ಟ್‌ನಿಂದ ಹೊರಬಿದ್ದಿದ್ದಾರೆ. ಅದರೊಂದಿಗೆ ತಂಡ ಹೊಸ ಲುಕ್‌ನಲ್ಲಿ ಕಾಣಿಸಿಕೊಲ್ಳುವುದು ಖಚಿತವಾಗಿದೆ. ರೈನಾ, ಬ್ರಾವೋ ತಂಡದಲ್ಲಿ ಇರದೇ ಇದ್ದರೂ, ಚೆನ್ನೈ ಸೂಪರ್‌ ಕಿಂಗ್ಸ್‌ ಈಗಲೂ ಕೂಡ ಭಿನ್ನ ಆಟಗಾರರನ್ನು ಹೊಂದಿರುವ ತಂಡ ಎನಿಸಿದೆ. ಎಂಎಸ್‌ ಧೋನಿ, ಡೆವೋನ್‌ ಕಾನ್ವೆ, ಮೊಯಿನ್‌ ಅಲಿ, ರುತುರಾಜ್‌ ಗಾಯಕ್ವಾಡ್‌, ರವೀಂದ್ರ ಜಡೇಜಾ, ಮಹೇಶ ತೀಕ್ಷಣ ಸೇರಿದಂತೆ ಉಳಿದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ತಂಡದಲ್ಲೀಗ ಎರಡು ವಿದೇಶಿ ಆಟಗಾರರ ಸ್ಥಾನ ಖಾಲಿ ಉಳಿದಿದೆ. ಹಾಗಾಗಿ ಹರಾಜಿನಲ್ಲಿ ಯಾರನ್ನು ಆಯ್ಕೆ ಮಾಡಬಹುದು ಎನ್ನುವ ಕುತೂಹಲವಿದೆ. 2023ರ ಐಪಿಎಲ್‌ ಎಂದಿನ ಮಾದರಿಗೆ ಮರಳಿರುವ ಕಾರಣ, ಸ್ಪಿನ್ನರ್‌ಗಳ ಸ್ವರ್ಗ ಚೆಪಾಕ್‌ನಲ್ಲಿಯೇ ಚೆನ್ನೈ ತವರಿನ ಪಂದ್ಯ ಆಡಲಿದೆ. ಹಾಗಾಗಿ ಹೆಚ್ಚಿನ ಸ್ಪಿನ್ನರ್‌ಗಳನ್ನು ತಂಡಲ್ಲಿ ಉಳಿಸಿಕೊಂಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್ ತಂಡ: 

ಬಿಡುಗಡೆಯಾದ ಆಟಗಾರರು: ಡ್ವೇನ್‌ ಬ್ರಾವೋ, ರಾಬಿನ್‌ ಉತ್ತಪ್ಪ, ಆಡಂ ಮಿಲ್ನೆ, ಹರಿ ನಿಶಾಂತ್‌, ಕ್ರಿಸ್‌ ಜೋರ್ಡನ್‌, ಭಗತ್‌ ವರ್ಮ, ಕೆಎಂ ಆಸಿಫ್‌, ಎನ್‌.ಜಗದೀಶನ್‌I ಟ್ರೇಡಿಂಗ್‌ ಮೂಲಕ ಆಟಗಾರರ ಆಯ್ಕೆ: ಯಾರೂ ಇಲ್ಲ

IPL Retention: ಸನ್‌ ರೈಸರ್ಸ್‌ನಿಂದ ವಿಲಿಯಮ್ಸನ್‌, ಪಂಜಾಬ್‌ನಿಂದ ಮಯಾಂಕ್‌ ಔಟ್‌!

ತಂಡದಲ್ಲಿ ಇರುವ ಹಣ: 20.45 ಕೋಟಿ ರೂಪಾಯಿ I ವಿದೇಶಿ ಆಟಗಾರರ ಕೋಟಾ ಬಾಕಿ: 2
ಹಾಲಿ ತಂಡ: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಸಿಂಘ್ ಚೌಧರಿ, ಮತೀಶ ಚೌಧರಿ. , ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.

IPL Retention: ಪ್ಯಾಟ್‌ ಕಮ್ಮಿನ್ಸ್‌, ಫಿಂಚ್‌, ರಹಾನೆ ಸೇರಿದಂತೆ 16 ಆಟಗಾರರ ರಿಲೀಸ್‌ ಮಾಡಿದ ಕೆಕೆಆರ್‌!