Asianet Suvarna News

2014ರಲ್ಲಿ ಖಿನ್ನತೆ ಎದುರಿಸಿದ್ದೆ: ಸತ್ಯ ಒಪ್ಪಿಕೊಂಡ ಕೊಹ್ಲಿ!

ತಾವು ಕೂಡಾ ಒಮ್ಮೆ ಖಿನ್ನತೆಗೊಳಗಾಗಿದ್ದೆ ಎನ್ನುವುದನ್ನು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಗ್ಲೆನ್ ಮ್ಯಾಕ್ಸ್‌ವೆಲ್ ದಿಟ್ಟ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

2014 England Tour I felt like it was the end of the world Says Virat Kohli
Author
Indore, First Published Nov 14, 2019, 4:02 PM IST
  • Facebook
  • Twitter
  • Whatsapp

ಇಂದೋರ್‌[ನ.14]: ಆಸ್ಪ್ರೇಲಿಯಾ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಾವು ಖಿನ್ನತೆ ಎದುರಿಸುತ್ತಿರುವುದನ್ನು ಒಪ್ಪಿದ್ದು ನಿಜಕ್ಕೂ ಅದ್ಭುತ. 2014ರ ಇಂಗ್ಲೆಂಡ್‌ ಸರಣಿ ವೇಳೆ ನಾನೂ ಖಿನ್ನತೆಯನ್ನು ಎದುರಿಸಿದ್ದೇನೆ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬುಧ​ವಾರ ತಿಳಿಸಿದರು.

ಇಂದೋರ್ ಟೆಸ್ಟ್: ದಾಖಲೆ ಹೊಸ್ತಿ​ಲಲ್ಲಿ ವಿರಾಟ್ ಕೊಹ್ಲಿ!

‘ಪ್ರತಿಯೊಬ್ಬ ಆಟಗಾರ ಸಹ ಮಾತನಾಡುವ ಅಗತ್ಯವಿದೆ. ಗ್ಲೆನ್‌ ಮಾಡಿರುವುದು ಅಸಾಮಾನ್ಯ ಕೆಲಸ, ಎಲ್ಲಾ ಕ್ರಿಕೆಟಿಗರಿಗೂ ಮ್ಯಾಕ್ಸ್‌ವೆಲ್‌ ಮಾದರಿ  ಆಗಿದ್ದಾರೆ. 2014ರ ಇಂಗ್ಲೆಂಡ್‌ ಪ್ರವಾಸದಲ್ಲಿ ಲಯ ಕಳೆದುಕೊಂಡಿದ್ದ ಕಾರಣ ಖಿನ್ನತೆಗೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿ​ಯ​ಲಿಲ್ಲ. ಎಲ್ಲವು ಮುಗಿದು ಹೋಯಿತು ಎಂದೆ​ನಿ​ಸಿ​ತ್ತು’ ಎಂದು ಕೊಹ್ಲಿ ಹೇಳಿ​ದರು.

ಭಾರತೀಯ ಬೌಲರ್‌ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!

ವಿರಾಟ್ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ತೋರಿದ್ದರು. ಆಡಿದ 10 ಇನಿಂಗ್ಸ್’ಗಳಲ್ಲಿ ಕೇವಲ 134 ರನ್’ಗಳನ್ನಷ್ಟೇ ಬಾರಿಸಿದ್ದರು. ಆಗ ನಾನ್ಯಾರ ಬಳಿ ಮಾತನಾಡಬೇಕು. ಹೇಗೆ ಮಾತನಾಡಬೇಕು ಎನ್ನುವುದೇ ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದ್ದರು. 

ಕ್ರಿಕೆಟ್‌ನಿಂದ ದೂರ ಸರಿದ ಆಸಿಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್‌

 ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios