ಏಷ್ಯಾಕಪ್ ತಂಡದ ಆಯ್ಕೆಗೂ ಮುನ್ನ ದ್ರಾವಿಡ್ - ಜಯ್ ಶಾ 2 ಗಂಟೆಗಳ ಸುದೀರ್ಘ ಮೀಟಿಂಗ್..!
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳು ಅಮೇರಿಕಾದ ಪ್ಲೋರಿಡಾದಲ್ಲಿ ನಡೆದಿದ್ವು. ಈ ಪಂದ್ಯಗಳಿಗೂ ಮೊದಲು ಈ ಇಬ್ಬರು ಮಾತುಕತೆ ನಡಸಿದ್ದಾರೆ. ಎರಡು ಗಂಟೆಗಳ ಕಾಲ ಸಭೆ ನಡೆದಿದೆ.
ಬೆಂಗಳೂರು(ಆ.18): ಏಷ್ಯಾಕಪ್ ಸಮರಕ್ಕೆ ಕೌಂಟ್ಡೌನ್ ಶುರುವಾಗಿದೆ. ಆಗಸ್ಟ್ 30ರಿಂದ ಟೂರ್ನಿ ಏಕದಿನ ವಿಶ್ವಕಪ್ಗು ಮುನ್ನ ಏಷ್ಯಾಕಪ್ ಬಿಗ್ ಟಾಸ್ಕ್ ಆಗಿದೆ. ವಿಶ್ವಕಪ್ ಮಹಾಸಮರಕ್ಕೂ ಮುನ್ನ ತಂಡದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಬೆಸ್ಟ್ ಚಾನ್ಸ್ ಆಗಿದೆ. ಇದಕ್ಕಾಗಿ ಅಳೆದು ತೂಗಿ ತಂಡ ಕಟ್ಟಲು ಬಿಸಿಸಿಐ, ಸೆಲೆಕ್ಟರ್ಸ್ ಮತ್ತು ಟೀಂ ಮ್ಯಾನೇಜ್ಮೆಂಟ್ ರೆಡಿಯಾಗಿದೆ. ಅದಕ್ಕೂ ಮುನ್ನ ದೂರದ ಅಮೇರಿಕಾದಲ್ಲಿ ಸ್ಪೆಷಲ್ ಮೀಟಿಂಗ್ ನಡೆದಿದೆ.
ಯೆಸ್, ಅಮೇರಿಕಾದಲ್ಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಸೀಕ್ರೇಟ್ ಮೀಟಿಂಗ್ ನಡೆಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳು ಅಮೇರಿಕಾದ ಪ್ಲೋರಿಡಾದಲ್ಲಿ ನಡೆದಿದ್ವು. ಈ ಪಂದ್ಯಗಳಿಗೂ ಮೊದಲು ಈ ಇಬ್ಬರು ಮಾತುಕತೆ ನಡಸಿದ್ದಾರೆ. ಎರಡು ಗಂಟೆಗಳ ಕಾಲ ಸಭೆ ನಡೆದಿದೆ.
ದ್ರಾವಿಡ್ ಮತ್ತು ಜಯ್ ಶಾ ನಡುವಿನ ಸಭೆಯಲ್ಲಿ ಹಲವು ವಿಚಾರಗಳನ್ನ ಚರ್ಚೆ ಮಾಡಲಾಗಿದೆ. ಮುಖ್ಯವಾಗಿ ಏಷ್ಯಾಕಪ್ ಟೂರ್ನಿಗೆ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಕೆಲ ಆಟಗಾರರು ಇಂಜುರಿಯಿಂದಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ರಿಹ್ಯಾಬ್ ಸೆಂಟರ್ನಲ್ಲಿ ಬೀಡು ಬಿಟ್ಟಿದ್ದಾರೆ. ಎನ್‌ಸಿಎಯಿಂದ ಈ ಆಟಗಾರರ ಫಿಟ್ನೆಸ್ ಕ್ಲಿಯರೆನ್ಸ್ ಸಿಕ್ಕ ಬಳಿಕವಷ್ಟೇ ತಂಡವನ್ನ ಸೆಲೆಕ್ಟ್ ಮಾಡುವ ನಿರ್ಧಾರಕ್ಕೆ ಬರಲಾ ಗಿದೆ ಎನ್ನಲಾಗಿದೆ.
ಏಕದಿನ ವಿಶ್ವಕಪ್ನಲ್ಲಿ 4ನೇ ಕ್ರಮಾಂಕದಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ..? ರವಿಶಾಸ್ತ್ರಿ ಹೇಳಿದ್ದೇನು?
ಏಷ್ಯಾಕಪ್ ತಂಡದಲ್ಲಿ ಪ್ರಸಿದ್ಧ್ ಕೃಷ್ಣಾಗೆ ಸಿಗುತ್ತಾ ಸ್ಥಾನ..?
ಇನ್ನು ಇಂದಿನಿಂದ ಆರಂಭವಾಗಲಿರೋ ಐರ್ಲೆಂಡ್ ಟಿ20 ಸರಣಿಯ ಮೇಲೂ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಇಂಜುರಿಯಿಂದ ತಂಡಕ್ಕೆ ಕಮ್ಬ್ಯಾಕ್ ಮಾಡಿರೋ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣರ ಫಿಟ್ನೆಸ್ ತಂಡಕ್ಕೆ ಮುಖ್ಯವಾಗಿದೆ. ಒಂದು ವೇಳೆ ಪ್ರಸಿದ್ಧ್ ಫುಲ್ ಫಿಟ್ ಅಂತ ಕಂಡು ಬಂದರೆ, ಏಷ್ಯಾಕಪ್ಗೆ ಪ್ರಸಿದ್ಧ್ರನ್ನ ಪರಿಗಣಿಸಲು ಆಯ್ಕೆ ಸಮಿತಿ ಮುಂದಾಗಿದೆ.
ಏಷ್ಯಾಕಪ್ ತಂಡವೇ ವಿಶ್ವಕಪ್ನಲ್ಲಿ ಕಣಕ್ಕೆ..?
ಯೆಸ್, ಏಷ್ಯಾಕಪ್ ಆಯ್ಕೆ ಮಾಡಲಾಗೋ ತಂಡವೇ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಬ್ಯಾಕಪ್ ಪ್ಲೇಯರ್ ಸೇರಿದಂತೆ 18 ರಿಂದ 20 ಆಟಗಾರರಿಂದ ಕೂಡಿದ ತಂಡವನ್ನ ಅಯ್ಕೆ ಮಾಡಲು ಸೆಲೆಕ್ಟರ್ಸ್ ಯೋಚಿಸ್ತಿದ್ದಾರೆ. ಆಟಗಾರರ ಕರೆಂಟ್ ಫಾರ್ಮ್, ದಾಖಲೆಗಳು ಲೆಕ್ಕಕ್ಕೇ ಬರಲಿವೆ. ಇದರಿಂದ ಸದ್ಯ ಔಟ್ ಆಫ್ ಫಾರ್ಮ್ನಲ್ಲಿರೋ ಸಂಜು ಸ್ಯಾಮ್ಸನ್, ಮತ್ತು ಏಕದಿನ ಕ್ರಿಕೆಟ್ನಲ್ಲಿ ಪದೇ ಪದೇ ಫೇಲ್ ಆಗ್ತಿರೋ ಸೂರ್ಯಕುಮಾರ್ ಯಾದವ್ಗೆ ತಂಡದಿಂದ ಗೇಟ್ಪಾಸ್ ನೀಡೋದು ಪಕ್ಕಾ ಅನ್ನೋ ಮಾತುಗಳು ಕೇಳಿ ಬರ್ತಿವೆ.
India vs Ireland T20: ಇಂದಿನಿಂದ ಬುಮ್ರಾ ನೇತೃತ್ವದ ಭಾರತಕ್ಕೆ ಐರ್ಲೆಂಡ್ ಟಿ20 ಚಾಲೆಂಜ್..!
ಒಟ್ಟಿನಲ್ಲಿ ಸಾಕಷ್ಟು ಯೋಚಿಸಿ ಏಷ್ಯಾಕಪ್ಗೆ ಬಲಿಷ್ಠ ಮತ್ತು ಬ್ಯಾಲೆನ್ಸ್ಡ್ ತಂಡವನ್ನ ಆಯ್ಕೆ ಮಾಡಲು ಸೆಲೆಕ್ಟರ್ಸ್ ಮುಂದಾಗಿದ್ದಾರೆ. ಇದ್ರಿಂದ ಯಾರ್ಯಾರು ಶ್ರೀಲಂಕಾ ಫ್ಲೈಟ್ ಹತ್ತಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.