ನವದೆಹಲಿ, (ಏ.06): ಅಮೆರಿಕದ ನ್ಯೂಯಾರ್ಕ್‌ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೋನಾ ವೈರಸ್ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತದಾದ್ಯಂತ ಎಲ್ಲ ಮೃಗಾಲಯಗಳಲ್ಲೂ ಪ್ರಾಣಿಗಳ ಮೇಲೆ ನಿಗಾ ಇಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

"

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪ್ರಸಿದ್ಧ ಬ್ರಾಂಕ್ಸ್ ಮೃಗಾಲಯದಲ್ಲಿ ಹೆಣ್ಣು ಹುಲಿಯೊಂದಕ್ಕೆ ಕೊರೊನಾ ವೈರಸ್ ತಗುಲಿರೋದು ದೃಢಪಟ್ಟಿದೆ. ನಾಡಿಯಾ ಎಂಬ ಹೆಸರಿನ 4 ವರ್ಷ ವಯಸ್ಸಿನ ಮಲೇಷಿಯನ್ ಹುಲಿಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. 

ಅಯ್ಯೋ, ಅಮೇರಿಕಾದ ಹೆಣ್ಣು ಹುಲಿಗೂ ತಗುಲಿತು ಕೊರೋನಾ!

ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಮೃಗಾಲಯಗಳಲ್ಲೂ ಕೇಂದ್ರ ಮೃಗಾಲಯ ಪ್ರಾಧಿಕಾರ ಹೈಅಲರ್ಟ್ ಘೋಷಿಸಿದೆ. ಪ್ರಾಣಿಗಳ ಆರೋಗ್ಯದ ಮೇಲೆ ದಿನದ 24 ಗಂಟೆಯೂ ಕಣ್ಣಿಟ್ಟಿರುವಂತೆ ಸೂಚಿಸಲಾಗಿದೆ.

ಪ್ರಾಣಿಗಳಲ್ಲಿ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದರೆ, ವಿಚಿತ್ರ ನಡವಳಿಕೆಗಳು ತೋರಿದರೆ ಕೂಡಲೇ ಆಯಾ ರಾಜ್ಯ ಸರ್ಕಾರಗಳ ಗಮನಕ್ಕೆ ತರುವಂತೆ ಮೃಗಾಲಯ ಪ್ರಾಧಿಕಾರ ಖಡಕ್ ಸೂಚನೆ ನೀಡಿದೆ.