ನವದೆಹಲಿ(ಏ. 07)  'ಅಂಕಿ ಅಂಶಗಳು ಸತ್ಯ ಹೇಳುತ್ತವೆ' ಹೀಗೆ ಹೇಳಿದ್ದು ಆರ್ ಎಸ್ ಎಸ್ ಜಾಯಿಂಟ್ ಜನರಲ್ ಸಕ್ರೆಟರಿ ಮನಮೋಹನ್ ವೈದ್ಯ.  ತಬ್ಲಿಘಿಗಳ ಕಾರಣದಿಂದ ಏಕಾಏಕಿ ಏರಿರುವ ಕೊರೋನಾ  ಪ್ರಕರಣಗಳನ್ನು  ಉಲ್ಲೇಖ ಮಾಡುತ್ತ ವೈದ್ಯ ಈ ಮಾತು ಹೇಳಿದ್ದಾರೆ.

ತಬ್ಲಿಘಿ ಜಮಾತ್ ಸಂಘಟನೆ ಸದಸ್ಯರು ತಾವು ಯಾವ ಮನಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ಜಾಹೀರು ಮಾಡಿಕೊಂಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಇತರೆ ನಾಯಕರು ಇಂಥ ಚಟುವಟಿಕೆಗಳನ್ನು ವಿರೋಧಿಸಿದ್ದರು ಎಂದು ಹೇಳಿದ್ದಾರೆ.

ಕುಡುಕರಿಗೆ ಗುಡ್ ನ್ಯೂಸ್; ಮದ್ಯದಂಗಡಿ ಓಪನ್ ಡೇಟ್ ಫಿಕ್ಸ್

ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಕೇವಲ 4.1 ದಿನಗಳಲ್ಲೇ ದುಪ್ಪಟ್ಟು ಆಗಿದೆ. ಜಮಾತ್‌ ಸಮಾವೇಶ ನಡೆಯದೇ ಇದ್ದಿದ್ದರೆ ಇವುಗಳ ಸಂಖ್ಯೆ ಹೆಚ್ಚಾಗಲು ಕನಿಷ್ಠ 7.4 ದಿನಗಳಾದರೂ ಕಾಯಬೇಕಿತ್ತು. ಅಂಕಿ ಅಂಶಗಳು ದೇಶದ ಮುಂದೆ ಸತ್ಯ ತೆರೆದಿಟ್ಟಿವೆ ಎಂದಿದ್ದಾರೆ.

ಸರ್ಕಾರದ ಹೋರಾಟಕ್ಕೆ ಆರಂಭದಿಂದಲೂ ನಾವು ಕೈಜೋಡಿಸಿದ್ದೇವೆ.  ನಮ್ಮ ಸಂಘಟನೆಯ (ಆರ್‌ಎಸ್‌ಎಸ್‌) ಆಡಳಿತ ಮಂಡಳಿಯ ಸಭೆಯಾದ ಪ್ರಾತಿನಿಧಿಕ್‌ ಸಭಾವನ್ನೇ ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಿದ್ದೇವು ಎಂದು ತಿಳಿಸಿದ್ದಾರೆ.

ಆರ್ ಎಸ್ ಎಸ್  ಕೊರೋನಾದಿಂದ ಸಂಕಷ್ಟಕ್ಕೆ ಗುರಿಯಾದ ದೇಶದ 25.5 ಲಕ್ಷ ಜನರಿಗೆ ಸಹಾಯ ಮಾಡಿದೆ. ದಿನಗೂಲಿ ನೌಕರರ ಹಿತವನ್ನು ಕಾಪಾಡಿದ್ದೇವೆ ಎಂದು ವೈದ್ಯ ತಿಳಿಸಿದ್ದಾರೆ.

 

"

"