ಅವಳಿ ಮಕ್ಕಳಿಗೆ ಕೊರೋನಾ ಮತ್ತು ಕೋವಿದ್ ಹೆಸರು

ಅವಳಿ ಶಿಶುಗಳಿಗೆ ವೈರಸ್ ಹೆಸರು/ ಕೋವಿಡ್ ಮತ್ತು ಕೊರೋನಾ ಎಂದು ನಾಮಕರಣ ಮಾಡಲಾಗಿದೆ/  ರಾಯ್ ಪುರದ ದಂಪತಿಯ ಕೆಲಸಕ್ಕೆ ಸೋಶಿಯಲ್ ಮೀಡಿಯಾ ಪರ ವಿರೋಧದ ಅಭಿಪ್ರಾಯ

Raipur couple names newborn twins corona and covid

ರಾಯ್ ಪುರ್(ಏ. 03)  ಕೊರೋನಾ ವೈರಸ್ ಇಡೀ ಪ್ರಪಂಚವನ್ನೇ ಆತಂಕದಲ್ಲಿ ದೂಡಿಟ್ಟಿದೆ. ಇದೆಲ್ಲದರ ನಡುವೆ  ಚತ್ತೀಸ್ ಗಢದಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ನವಜಾತ ಶಿಶುಗಳಿಗೆ  ಕೊರೋನಾ ಮತ್ತು ಕೋವಿದ್ ಎಂದು ಹೆಸರಿಡಲಾಗಿದೆ!

 ರಾಯ್ ಪುರದ ದಂಪತಿ ಮಾತ್ರ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ತಮಗೆ ಜನಿಸಿದ ಒಂದು ಗಂಡು, ಒಂದು ಹೆಣ್ಣು ಅವಳಿ ಮಕ್ಕಳಿಗೆ ವೈರಸ್ ಹೆಸರನ್ನೇ ನಾಮಬಲವನ್ನಾಗಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಳ್ಳರಿಗೂ ಕೊರೋನಾ ಭಯ; ಅಪರಾಧ ಚಟುವಟಿಕೆ ಇಳಿಮುಖ

ನಮಗೆ ಒಂದು ಗಂಡು, ಒಂದು ಹೆಣ್ಣು ಮಗು ಮಾರ್ಚ್ 27ರಂದು ಬೆಳಗ್ಗೆ ಜನಿಸಿದ್ದು, ನಾವು ಗಂಡು ಮಗುವಿಗೆ ಕೋವಿಡ್ ಹಾಗೂ ಹೆಣ್ಣು ಮಗುವಿಗೆ  ಕೊರೋನಾ ಎಂದು ಹೆಸರಿಟ್ಟಿರುವುದಾಗಿ 27ವರ್ಷದ ತಾಯಿ ಪ್ರೀತಿ ವರ್ಮಾ ಮಾಹಿತಿ ನೀಡಿದ್ದಾರೆ.

ಅವಳಿ ಮಕ್ಕಳು ಹುಟ್ಟಿದ ನೆನಪನ್ನು ಹಾಗೆ ಇರಿಸಕೊಳ್ಳಲು ಈ ಕೆಲಸ ಮಾಡಿದ್ದೇವೆ ಎಂಧು ದಂಪತಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಕ್ರವಾರ ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.

ಪ್ರಧಾನಿ ನರೇಂದ್ರ ಮೋದಿ ಸಹ ಶುಕ್ರವಾರ ಬೆಳಗ್ಗೆ ದೇಶದ ಮುಂದೆ ಬಂದು ಒಗ್ಗಟ್ಟಿನ ಪ್ರದರ್ಶನಕ್ಕೆ ಕರೆ ನೀಡಿದ್ದಾರೆ. ಭಾನುವಾರ ಎಲ್ಲರೂ 9 ನಿಮಿಷ ಕಾಲ  ದೀಪ ಬೆಳಗಿಸಬೇಕು ಎಂದು ಕೇಳೀಕೊಂಡಿದ್ದಾರೆ. 

Latest Videos
Follow Us:
Download App:
  • android
  • ios