ಚೆನ್ನೈ, (ಮಾ. 29) : ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಕೊರೋನಾ ವೈರಸ್ ಶಂಕಿತ ಯುವಕ ಏಕಾಏಕಿ ಬೆತ್ತಲೆಯಾಗಿ ಓಡಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 

 ಶ್ರೀಲಂಕಾದಿಂದ ಬಂದಿದ್ದ ಯುವಕನಿಗೆ ಕ್ವಾರಂಟೈನ್‌ ನಲ್ಲಿರುವಂತೆ ಸೂಚಿಸಲಾಗಿತ್ತು. ಆದ್ರೆ, ಶುಕ್ರವಾರ ಸಂಜೆ ಬೆತ್ತಲಾಗಿ ಮನೆಯಿಂದ ಹೊರ ಬಂದ ಆತ, ಪಕ್ಕದ ಮನೆಯಲ್ಲಿದ್ದ 80 ವರ್ಷದ ವೃದ್ಧೆಗೆ ಕಚ್ಚಿ ಪರಾರಿಯಾಗಿದ್ದಾನೆ. ಆದ್ರೆ, ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಎಣ್ಣೆ ಸಿಗದೆ ಆತ್ಮಹತ್ಯೆ ಮಾಡಿಕೊಂಡ 6 ಜನ, ಒಂದೇ ದಿನ 3 ಬಲಿ ಪಡೆದ ಕೊರೋನಾ; ಮಾ.29ರ ಟಾಪ್ 10 ಸುದ್ದಿ! 

 ಬಟ್ಟೆ ವ್ಯಾಪಾರ ಮಾಡುತ್ತಿದ್ದ ಯುವಕ ಕೆಲವು ದಿನಗಳ ಹಿಂದೆ ಶ್ರೀಲಂಕಾದಿಂದ ವಾಪಸ್ ಆಗಿದ್ದ.  ಬಗ್ಗೆ ಮಾಹಿತಿ ಪಡೆದಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತನ ಮನೆಗೆ ಭೇಟಿ ನೀಡಿ ನಿಯಮಗಳ ಪ್ರಕಾರ ಕ್ವಾರಂಟೈನ್‌ಗೆ ಸೂಚನೆ ನೀಡಿದ್ದರು. 

ಆದರೆ, ಆತ ಓಡಿ ಹೋಗಿದ್ದೇಕೆ? ಅಜ್ಜಿಗೆ ಕಚ್ಚಿದ್ದೇಕೆ? ಎಂಬುದು ಇನ್ನು ತಿಳಿದುಬಂದಿಲ್ಲ. ತಮಿಳುನಾಡಿನಲ್ಲಿ ಇದುವರೆಗೂ 42 ಕೊರೋನಾ  ಕೇಸ್‌ಗಳು ದಾಖಲಾಗಿದ್ದು, ಒಬ್ಬರು ಬಲಿಯಾಗಿದ್ದಾರೆ.