ನವದೆಹಲಿ(ಮಾ.30): ಕೊರೋನಾ ವೈರಸ್ ಹರಡುತ್ತಿರುವ ಭೀತಿ ಎದುರಾಗುತ್ತಿದ್ದಂತೆ ಜನರಲ್ಲಿ ಆದಷ್ಟೂ ಮನೆಯಲ್ಲಿ ಇರಲು ಸೂಚಿಸಲಾಗಿತ್ತು. ಇನ್ನು ವೈರಸ್ ಆತಂಕ ಹೆಚ್ಚಾದಂತೆ ಭಾರತವನ್ನು ಲಾಕ್‌ಡೌನ್ ಮಾಡಲಾಯಿತು. ಇದೀಗ  ದೆಹಲಿಯ ನಿಝಾಮುದ್ದೀನ್ ಅಲಾಮಿ ಮಾರ್ಕಝ್ ಬಂಗ್ಲೇವಾಲಿ ಮಸೀದಿಯಲ್ಲಿ ಪ್ರಾರ್ಥನೆಗೆ ಸೇರಿದ 300 ಮಂದಿಯನ್ನು  ವಿವಿಧ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಲಾಗಿದೆ. ಇದರಲ್ಲಿ 10 ಮಂದಿಗೆ ವೈರಸ್ ತಗುಲಿರುವುದು ದೃಢಪಟ್ಟಿದೆ. ಮತ್ತೊರ್ವ ಕೋರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾನೆ.

"

ಕೊರೋನಾ ವಿರುದ್ಧದ ಹೋರಾಟಕ್ಕೆ ನಿಂತಿವೆ ಹಿಂದೂ ದೇಗುಲ; ಸರ್ಕಾರಕ್ಕೆ ಕೋಟಿ ಕೋಟಿ ರೂ ದೇಣಿಗೆ!

300 ಮಂದಿ ಈಗಾಗಲೇ ಹಲವು ಬಾರಿ ಇತರ ಮಸೀದಿಗಳ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಇದೀಗ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಕಾಣಿಸುತ್ತಿದೆ. ಪ್ರಧಾನಿ ಮೋದಿಯ ಜನತಾ ಕರ್ಫ್ಯೂ ಮನವಿ ಹಿಂದಿನ ದಿನ ಅಲಾಮಿ ಮಾರ್ಕಝ್ ಬಂಗ್ಲೇವಾಲಿ ಮಸೀದಿಯ ಪ್ರಾರ್ಥನೆಗೆ ಸುಮಾರು 2000 ಜನ ಸೇರಿದ್ದರು. ಈ ವೇಳೆ ಮಲೇಷಿಯಾ, ಇಂಡೋನೇಷಿಯಾ, ಸೌದಿ ಅರೇಬಿಯಾ ಸೇರಿದಂತೆ ಇತರ ದೇಶದ 280 ಮಂದಿ ಪಾಲ್ಗೊಂಡಿದ್ದರು. 

ಪ್ರಾರ್ಥನೆ ಬಳಿಕ ಮರುದಿನ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಮಸೀದಿಯ ಆಡಳಿತ ಮಂಡಳಿಯ ಶ್ರೈನ್ ಕಾಂಪ್ಲೆಕ್ಸ್‌‌ನಲ್ಲಿ ಎಲ್ಲರೂ ತಂಗಿದ್ದರು. ಇಲ್ಲಿ ತಂಗಿದ್ದ ತಮಿಳುನಾಡು ಮೂಲಕ ಒರ್ವ ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ಜನತಾ ಕರ್ಫ್ಯೂ ಬಳಿಕ ದೇಸಿ ವಿಮಾನ ಹಾರಾಟ ರದ್ದಾಗಿತ್ತು. ಹೀಗಾಗಿ ಬಹುತೇಕರು ಬಸ್ ಮೂಲಕ ತೆರಳಿದ್ದಾರೆ. ಹೀಗಾಗಿ ದೇಶದಲ್ಲಿ ಕೋರನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ದಿಢೀರ್ ವೇಗ ಪಡೆದುಕೊಂಡರು ಆಶ್ಚರ್ಯವಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.