ನವದೆಹಲಿ(ಮಾ.30): ಕೊರೋನಾ ವೈರಸ್ ಭಾರತಕ್ಕೆ ಅಪಾಯದ ಸೂಚನೆ ನೀಡಿದಾಗಲೇ ಹಿಂದೂ ದೇಗುಲಗಳು ಭಕ್ತರಲ್ಲಿ ಮನವಿ ಮಾಡಿತ್ತು. ಭಕ್ತಾದಿಗಳು ಗಮನಹರಿಸಬೇಕಾಗಿ ಸೂಚಿಸಿತ್ತು. ಸರ್ಕಾರ ದಿಢೀರ್ ಲಾಕ್‌ಡೌನ್ ಘೋಷಣೆ ಮಾಡಿದಾಗಲೂ ದೇಗಲುಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇದೀಗ ಹಿಂದೂ ದೇಗುಲಗಳು ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿದೆ.

ಕೊರೋನಾ ಎದುರಿಸಲು ದೇವಸ್ಥಾನ ಬಳಕೆಗೆ ಮುಂದಾದ ಸರ್ಕಾರ !..

ಈಗಾಗಲೇ ಹಲವು ದೇವಸ್ಥಾನಗಳು ಸರ್ಕಾರದ ಪರಿಹಾರ ನಿಧಿಗೆ ಕೋಟಿ ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಜನರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಇಷ್ಟೇ ಅಲ್ಲ ಆದಷ್ಟೂ ಬೇಗ ಕೊರೋನಾ ವೈರಸ್ ತೊಲಗಿಸಲು ಪಣತೊಟ್ಟಿದೆ. ಹಲವು ದೇವಸ್ಥಾನಗಳು ಸರ್ಕಾರಕ್ಕೆ ದೇಣಿಗೆ, ಸೋಂಕಿತರ ಚಿಕಿತ್ಸೆಗೆ, ಕ್ವಾರಂಟೈನ್‌ಗೆ ದೇವಸ್ಥಾನಗಳ ವಸತಿ ಗೃಹಗಳನ್ನು, ನಿರ್ಗತಿಕರಿಗೆ, ಬಡವರಿಗೆ ಆಹಾರವನ್ನು ನೀಡುತ್ತಿದೆ.

ಹೀಗೆ ಸರ್ಕಾರಕ್ಕೇ ದೇಣಿಗೆ ನೀಡಿದ ಪ್ರಮುಖ ದೇವಸ್ಥಾನಗಳ ವಿವರ ಇಲ್ಲಿದೆ.

 • ಶಿರ್ಡಿ ಸಾಯಿಬಾಬ ಮಂದಿರ = 51 ಕೋಟಿ ರೂಪಾಯಿ
 • ಹನುಮಾನ್ ಮಂದಿರ(ಮಹಾವೀರ್) = 1 ಕೋಟಿ ರೂಪಾಯಿ
 • ಮಹಾಮಾಯ ಟೆಂಪಲ್ = 5.11 ಲಕ್ಷ ರೂಪಾಯಿ
 • ಮಹಾಲಕ್ಷ್ಮಿ ಮಂದಿರ  = 2 ಕೋಟಿ ರೂಪಾಯಿ
 • ಸೋಮನಾಥ ದೇವಸ್ಥಾನ = 1 ಕೋಟಿ ರೂಪಾಯಿ
 • ಅಂಬಾಜಿ ಮಂದಿರ = 1 ಕೋಟಿ ರೂಪಾಯಿ
 • ಶ್ರೀ ಸಾಲಾಸಾರ್ ಬಾಲಾಜಿ  = 1 ಕೋಟಿ ರೂಪಾಯಿ
 • ಖಾತುಶ್ಯಾಂ ಮಂದಿರ = 11 ಲಕ್ಷ ರೂಪಾಯಿ
 • ಬ್ರಹ್ಮ ಮಂದಿರ(ರಾಜ್‌ಪುರೋಹಿತ್) = 11 ಲಕ್ಷ ರೂಪಾಯಿ
 • ವೈಷ್ಣೋ ದೇವಿ ಮಂದಿರ = 26.40 ಲಕ್ಷ ರೂಪಾಯಿ
 • ಕಂಚಿ ಮಠ  = 10 ಲಕ್ಷ ರೂಪಾಯಿ
 • ರಾಣಿ ಸತಿ ಮಂದಿರ = 400 ಬೆಡ್ ಐಸೋಲೇಶನ್ ವಾರ್ಡ್ ನಿರ್ಮಾಣ
 • ವೈಷ್ಣೋ ದೇವಿ ಮಂದಿರ  = ಚಿಕಿತ್ಸೆಗಾಗಿ ವಸತಿ ಗೃಹವನ್ನು 600 ಬೆಡ್ ವಾರ್ಡ್‌ ಆಗಿ ಪರಿವರ್ತಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರ 
 • ವೈಷ್ಣೋದೇವಿ ಮಂದಿರ  = ಪರಿಹಾರ ನಿಧಿಗೆ ವೇತನ ನೀಡಿದ ನೌಕರರು

ಇದರ ಜೊತೆಗೆ ಹಲವು ದೇಗುಲಗಳು ಈಗಾಗಲೇ ದೊಡ್ಡ ಮೊತ್ತವನ್ನು ಸರ್ಕಾರಕ್ಕೆ ನೀಡಿದೆ.