ನವದೆಹಲಿ(ಮಾ.23): ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ 400ರ ಗಡಿ ದಾಟಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 27ಕ್ಕೇರಿದೆ. ಹೀಗಾಗಿ ಅಗತ್ಯ ಸೇವೆಗಳೂ ಕೂಡ ಸ್ಥಗಿತಗೊಳ್ಳುತ್ತಿದೆ.ಜನರನ್ನು ಮನೆಯಿಂದ ಹೊರಗೆ ಬರಲೇ ಬೇಡಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಿದ್ದ ಭಾರತ ಇದೀಗ ಎಲ್ಲಾ ದೇಶಿಯ ವಿಮಾನ ಹಾರಾಟವನ್ನು ಮಾರ್ಚ್ 24ರ ಮಧ್ಯರಾತ್ರಿ 11.59ರಿಂದ ಜಾರಿಯಾಗಲಿದೆ.

ಕೊರೋನಾ ಸೋಂಕಿಗೆ ಮಲೇರಿಯಾ ಔಷಧಿ ಬಳಕೆಗೆ ಕೇಂದ್ರಕ್ಕೆ ICMR ಸಲಹೆ!

ಮಾರ್ಚ್ 25ರಿಂದ ಭಾರತದಲ್ಲಿ ಪ್ರಯಾಣಿಕರನ್ನು ಸಾಗಿಸುವ ಯಾವುದೇ ವಿಮಾನ ಸೇವೆ ಇರುವುದಿಲ್ಲ. ಆದರೆ ಸರಕು ಸಾಗಾಣೆ ವಿಮಾನಗಳನ್ನು ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಷ್ಟೇ ಅಲ್ಲ ಸದ್ಯ ಜನರು ಯಾರೂ ಕೂಡ ಮನೆಯಿಂದ ಹೊರಬರದಂದೆ, ತಮ್ಮ ತಮ್ಮ ಊರುಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ. ಭಾರತದಲ್ಲಿ 19 ರಾಜ್ಯಗಳು ಸಂಪೂರ್ಣ ಲಾಕ್‌ಡೌನ್ ಮಾಡಿವೆ. ಗಡಿರಸ್ತೆಗಳನ್ನು ಬಂದ್ ಮಾಡಿದೆ. ಈ ಮೂಲಕ ಕೊರೋನಾ ವೈರಸ್ ಹರದಂತೆ ನಿಗಾವಹಿಸಲಾಗುತ್ತಿದೆ.