ನವದೆಹಲಿ(ಮಾ.23): ಕೊರೋನಾ ವೈರಸ್ ಭೀತಿ ಭಾರತದಲ್ಲಿ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆ ದಾಖಲಾಗಿರುವವರಿಗೆ ಕೊರೋನಾ ಸೋಂಕಿಗೆ ಸೂಕ್ತ ಲಸಿಕೆ, ಔಷದ ಲಭ್ಯವಿಲ್ಲ. ಹೀಗಾಗಿ ಕೊರೋನಾ ಸೋಂಕಿತರು ಶೀಘ್ರದಲ್ಲಿ ಗುಣಮುಖರಾಗುತ್ತಿಲ್ಲ. ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ. ಕೊರೋನಾ ಸೋಂಕಿತರಿಗೆ ಮಲೇರಿಯಾಗೆ ಬಳಸುವ ಔಷದಿ ನೀಡಲು ಸಲಹೆ ನೀಡಿದೆ.

ಬೆಳಗಾವಿ: ಮಗುವಿಗೆ ಕೊರೋನಾ ಸೋಂಕು ಇಲ್ಲ, ಕುಟುಂಬಸ್ಥರ ಮೇಲೂ ನಿಗಾ

ಕೊರೋನಾ ವೈರಸ್‌ಗೆ ಇನ್ನೂ ಅಧೀಕೃತ ಔಷದವಿಲ್ಲ. ಆದರೆ ಮಲೇರಿಯಾಗೆ ಬಳಸುವ ಔಷದಿಯನ್ನು ಸೋಂಕಿತರಿಗೆ ಬಳಸಬಹುದು ಎಂದು ICMR ಹೇಳಿದೆ. ಅಮೆರಿಕಾದಲ್ಲೂ ಕೊರೋನಾ ಸೋಂಕಿತರಿಗೆ ಮಲೇರಿಯಾ ಔಷಧಿಯನ್ನೇ ಭಳಸಲಾಗುತ್ತಿದೆ. ಭಾರತದಲ್ಲಿ ಇಂದಿನಿಂದ ಕೊರೋನಾ ಸೋಂಕಿತರಿಗೆ ಇದೇ ಮಲೇರಿಯಾ ಔಷದಿಯನ್ನು ಬಳಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯದಲ್ಲಿ ಮತ್ತೊಂದು ಕೊರೋನಾ ಕೇಸ್: ಸೋಂಕಿತ ಸಂಖ್ಯೆ 27ಕ್ಕೇರಿಕೆ

ಕೊರೋನಾ ವೈರಸ್ ಸೋಂಕಿತರ ಸಂಖ್ಯ ಭಾರತದಲ್ಲಿ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಹರಡದಂತೆ ತಡೆಯಲು ಜನತಾ ಕರ್ಫ್ಯೂ ಸೇರಿದಂತೆ ಹಲವು ಕ್ರಮಗಳು ಕೈಗೊಳ್ಳಾಗಿದೆ. ಆದರೆ ಹೆಚ್ಚಿನ ಜನರು ಗಂಭೀರವಾಗಿ ಪರಿಗಣಿಸಿಲ್ಲ. ಇತ್ತ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. 

ಮಾರ್ಚ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ