ಲಾಕ್ ಡೌನ್ ಸ್ಥಿತಿಗತಿ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಎಲ್ಲರ ಮನದಲ್ಲೂ ಇಂದು ಅದೇ ಮಾತು. ಅದೇ ಚಿಂತೆ, ಅದೇ ಕುತೂಹಲ, ಅದೇ ಕಳವಳ. ಈ ಲಾಕ್ ಡೌನ್ ಪರಿಸ್ಥಿತಿ ಇನ್ನೆಷ್ಟು ದಿನ? ಮತ್ತೆ ನಮ್ಮ ಬದುಕಿನ ರೈಲು ಹಳಿಯ ಮೇಲೆ ಸಾಗುವುದೆಂದು? ಕೊರೋನಾ ಹರಡುವ ಬಗ್ಗೆ ಇರುವ ಭಯಗಳ ನಡುವೆಯೂ, ಶ್ರೀಸಾಮಾನ್ಯನಷ್ಟೇ ಅಲ್ಲ, ಅಸಾಮಾನ್ಯರೂ ಕೇಳುತ್ತಿರುವ ಒಂದೇ ಒಂದು ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಲಿದ್ದಾರೆ. ಈ ಬಗ್ಗೆ ಮೋದಿ ಮಾತನಾಡುವವರೆಗೂ ಕಾಯುವುದಷ್ಟೇ ನಮ್ಮ ನಿಮ್ಮ, ಕೆಲಸ. ಅಲ್ಲಿಯತನಕ, ಮೌನರಾಗ
ದೆಹಲಿ(ಏ.10): ಮಂಗಳವಾರ ಏ.14ರಂದು ದೇಶಾದ್ಯಂತ ಲಾಕ್‌ಡೌನ್ ಕೊನೆಗೊಳ್ಳಲಿದೆಯೇ ಅಥವಾ ಲಾಕ್‌ಡೌನ್ ಅವಧಿ ವಿಸ್ತರಿಸಲಾಗುತ್ತದೆಯೇ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಅದಕ್ಕೂ ಮೊದಲು ಪ್ರಧಾನಿ ರಾಜ್ಯದ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ.
ಹಲವು ಮೂಲಗಳ ಪ್ರಕಾರ ಲಾಕ್‌ಡೌನ್ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ. ಲಾಕ್‌ಡೌನ್ ವಿಸ್ತರಿಸಲ್ಪಟ್ಟರೂ ಅದರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಅಂತಾರಾಜ್ಯ ಓಡಾಟದ ಮೇಲಿನ ನಿರ್ಬಂಧ ಹೀಗೆಯೇ ಮುಂದುವರಿಯಲಿದೆ. ಶಾಲೆ, ಕಾಲೇಜು ಹಾಗೂ ದೇವಾಲಯ, ಮಸೀದಿ ಚರ್ಚ್‌ಗಳೂ ಮುಚ್ಚಲ್ಪಟ್ಟಿರುತ್ತವೆ.
ಕೊರೋನಾ: ಏ.8 ಕ್ಕೆ ಸರ್ವಪಕ್ಷ ನಾಯಕರ ಸಭೆ ಕರೆದ ಮೋದಿ
ಆರ್ಥಿಕತೆಗೆ ಭಾರೀ ಹೊಡೆತ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ಇಭಾಗ ಕಾರ್ಯ ನಿರ್ವಹಿಸಲು ಅನಮತಿ ನೀಡುವ ಸಾಧ್ಯತೆ ಇದೆ. ವಿಮಾನಯಾನ ರದ್ದುಗೊಂಡ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದ್ದು, ನಿಧಾನವಾಗಿ ವಿಮಾನಯಾನವನ್ನು ಆರಂಭಿಸುವ ಬಗ್ಗೆಯೂ ಸೂಚನೆ ಇದೆ. ಆದರೆ ಮಿಡಲ್ ಈಸ್ಟ್ ರಾಷ್ಟ್ರಗಳಿಗೆ ಪ್ರಯಾಣ ನಿಷೇಧಿಸಲಾಗುತ್ತದೆ.
ಬುಧವಾರ ಎಲ್ಲ ಪಕ್ಷಗಳ ಮುಖಂಡರ ಜೊತೆ ಮಾತನಾಡಿದ ಪ್ರಧಾನಿ ಒಂದೇ ಸಲಕ್ಕೆ ಲಾಕ್‌ಡೌನ್ ತೆಗೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎಲ್ಲರನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ. ಜನರ ಒಳಿತಿಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಲಾಕ್‌ಡೌನ್ ತೆರವಿನ ನಂತರ ಸಮಾಜಿಕ, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಕೊರೋನಾ ಎಫೆಕ್ಟ್: ಭಾರತದಲ್ಲಿ ನಡೆಯಬೇಕಿದ್ದ ಫುಟ್ಬಾಲ್ ವಿಶ್ವಕಪ್ ಮುಂದಕ್ಕೆ
ಮೂರು ವಾರಗಳ ಲಾಕ್‌ಡೌನ್ ನಂತರ ಕೊರೋನಾ ಸೋಂಕು ಹರಡುವಿಕೆ ಕಡಿಮೆಯಾಗಿದೆ. ಲಾಕ್‌ಡೌನ್ ಆರ್ಥಿಕತೆಗೆ ಹೊಡೆತ ನೀಡಿದ್ದರೂ ಜನರ ಆರೋಗ್ಯ ದೃಷ್ಟಿಯಲ್ಲಿ ಪೂರಕವಾಗಿ ಕೆಲಸ ಮಾಡಿದೆ. ಹಲವು ರಾಜ್ಯಗಳು ಲಾಕ್‌ಡೌನ್ ವಿಸ್ತರಣೆ ಮಾಡುವಂತೆ ಕೇಳಿಕೊಂಡಿವೆ. ಕೊರೋನಾ ವೈರಸ್ ಹರಡಿದರೆ ರಾಜ್ಯಗಳಿಗೆ ಅದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.
ಹಾಗಾಗಿ ಲಾಕ್‌ಡೌನ್ ವಿಸ್ತರಿಸಬೇಕೆಂದು ಮನವಿ ಮಾಡಲಾಗಿದೆ. ಕರ್ನಾಟಕವೂ ಇಂದು ಲಾಕ್‌ಡೌನ್ ಮುಂದುವರಿಸಿ ಆದೇಶ ನೀಡುವ ಸೂಚನೆ ಇದೆ. ಉತ್ತರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಅಸ್ಸಾಂ, ಮಧ್ಯ ಪ್ರದೇಶ, ಛತ್ತೀಸ್‌ಗಡ್ ಕೂಡಾ ಲಾಕ್‌ಡೌನ್ ಮುಮದುವರಿಸುವ ಬಗ್ಗೆ ಚಿಂತಿಸಿದೆ. ಭಾರತದಲ್ಲಿ ಈಗ 6412 ಕೊರೋನಾ ಪ್ರಕರಣಗಳಿದ್ದು, 199 ಸಾವು ಸಂಭವಿಸಿದೆ.
"