ಕೊರೋನಾ ಎಫೆಕ್ಟ್: ಭಾರತದಲ್ಲಿ ನಡೆಯಬೇಕಿದ್ದ ಫುಟ್ಬಾಲ್‌ ವಿಶ್ವಕಪ್‌ ಮುಂದಕ್ಕೆ

ಕೊರೋನಾ ವೈರಸ್ ಈಗಾಗಲೇ ಸಾವಿರಾರು ಜೀವಗಳನ್ನು ಮಾತ್ರವಲ್ಲ, ಹಲವಾರು ಕ್ರೀಡಾಕೂಟಗಳನ್ನು ಬಲಿ ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ಮುಂದುವರೆದ ಭಾಗವಾಗಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಕೂಡಾ ಮುಂದೂಡಲ್ಪಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

FIFA postpones U 17 Women's World Cup in India due to Coronavirus pandemic

ನವದೆಹಲಿ(ಏ.05): ಈ ವರ್ಷ ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದೆ. ನ.2ರಿಂದ 21ರ ವರೆಗೂ ಕೋಲ್ಕತಾ, ಗುವಾಹಟಿ, ಭುವನೇಶ್ವರ್‌, ಅಹಮದಾಬಾದ್‌ ಹಾಗೂ ನವಿ ಮುಂಬೈನಲ್ಲಿ ಪಂದ್ಯಗಳು ನಡೆಯಬೇಕಿತ್ತು.

ಕೊರೋನಾ ತಾಂಡವ: ಭಾರತದ ಸಹಾಯ ಯಾಚಿಸಿದ ವಿಶ್ವದ ದೊಡ್ಡಣ್ಣ!

ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ಈ ವರೆಗೂ ಕೇವಲ 3 ತಂಡಗಳು ಮಾತ್ರ ಅರ್ಹತೆ ಪಡೆದಿವೆ. ಉತ್ತರ ಅಮೆರಿಕ ಹಾಗೂ ಕೆರಿಬಿಯನ್‌, ಯುರೋಪ್‌, ದಕ್ಷಿಣ ಅಮಿರಿಕಾ, ಆಫ್ರಿಕಾ, ಓಷಿಯಾನಿಯಾದಲ್ಲಿ ಅರ್ಹತಾ ಟೂರ್ನಿಗಳು ಇನ್ನೂ ನಡೆದಿಲ್ಲ. ಹೀಗಾಗಿ ಟೂರ್ನಿಯನ್ನು ಮುಂದೂಡಲಾಗುತ್ತಿದೆ. 

ಸುವರ್ಣ ನ್ಯೂಸ್.ಕಾಂ ಈ ಮೊದಲೇ ಟೂರ್ನಿ ಮುಂದೂಡುವಿಕೆಯ ಬಗ್ಗೆ ಸುದ್ದಿ ಪ್ರಕಟಿಸಿತ್ತು: ಮಹಿಳಾ ಅಂಡರ್‌-17 ಫಿಫಾ ವಿಶ್ವಕಪ್‌ ಮುಂದೂಡಿಕೆ?

ಪರಿಸ್ಥಿತಿ ಸುಧಾರಿಸಿದ ಬಳಿಕ ಹೊಸ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಶನಿವಾರ ಫಿಫಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 2017ರಲ್ಲಿ ಭಾರತ ಅಂಡರ್‌-17 ಪುರುಷರ ವಿಶ್ವಕಪ್‌ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿತ್ತು.

ಕೊರೋನಾ ಕೆಂಗಣ್ಣಿಗೆ ಈಗಾಗಲೇ ಹಲವು ಟೂರ್ನಿಗಳು ಗುರಿಯಾಗಿದ್ದು, ಟೋಕಿಯೋ ಒಲಿಂಪಿಕ್ಸ್ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಇನ್ನು ಐಪಿಎಲ್ ಹಾಗೂ ಟಿ20 ವಿಶ್ವಕಪ್ ನಡೆಯುವುದು ಈ ವರ್ಷ ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಕೊರೋನಾ ವೈರಸ್ ಎನ್ನುವ ಮಹಾಮಾರಿ ಕೇವಲ ಜನಜೀವನವನ್ನಷ್ಟೇ ಅಸ್ತವ್ಯಸ್ತಗೊಳಿಸಿಲ್ಲ, ಬದಲಾಗಿ ಕ್ರೀಡಾಪ್ರೇಮಿಗಳಿಗೂ ನಿರಾಸೆಯನ್ನುಂಟು ಮಾಡಿದೆ. 

Latest Videos
Follow Us:
Download App:
  • android
  • ios