ನವದೆಹಲಿ, (ಮಾ.24): ಕೊರೋನಾ ವೈರಸ್ ನಿಯಂತ್ರಣಕ್ಕೆ ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ರಾತ್ರಿ 12ಗಂಟೆಯಿಂದ ಏಪ್ರಿಲ್ 14ರ ವರಗೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದರು.

ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಕೊರೋನಾ ನಿಯಂತ್ರಣಕ್ಕೆ ಬೇರೆ ದಾರಿ ಇಲ್ಲದೇ ಇಡೀ ದೇಶವನ್ನ ಲಾಕ್ ಡೌನ್ ಮಾಡಲಾಗುತ್ತಿದೆ ಎಂದರು.

Big Breaking: ಇಡೀ ದೇಶವೇ ಲಾಕ್ ಡೌನ್, ಮೋದಿ ಘೋಷಣೆ

ಆದ್ರೆ, ಈ ಕೊರೋನಾ ವೈರಸ್‌ನಿಂದ ತೀವ್ರ ತೊಂದರೆಗೊಳಗಾಗಿರುವ ಬೀದಿ ವ್ಯಾಪಾರಿಗಳು ಸೇರಿದಂತೆ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ನಿರೀಕ್ಷೆಗಳಿದ್ದವು. ಆದ್ರೆ, ಮೋದಿ ಮಾತ್ರ ಘೋಷಿಸಿಲ್ಲ. ಕೇವಲ ವೈದ್ಯಕೀಯ ಸೌಲಭ್ಯಗಳ ಸುಧಾರಣೆಗೆ ಮಾತ್ರ 15 ಸಾವಿರ ಕೋಟೆ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು.